PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಆ,೦೭ ೧೦೦೮ ವಿದ್ಯೇಶ ತೀರ್ಥ ಶ್ರೀಪಾದಂಗಳವರು ಭಂಡಾರಿಕೇರಿಮಠ ಉಡುಪಿ ಇವರ ೩೬ನೇ ಚಾರ್ತುಮಾಸ್ಯ ಹಾಗೂ ದಾಸಸಾಹಿತ್ಯ ಸಮ್ಮೇಳನ ೨೦೧೫ ಅಖಿಲ ಕರ್ನಾಟಕ ಹರಿದಾಸಕೂಟ ಕೊಪ್ಪಳ ಸಮಸ್ತ ಬ್ರಾಹ್ಮಣ ಸಮಾಜ ಇವರುಗಳ ಸಹಯೋಗದೊಂದಿಗೆ ಮಹಿಳಾ ಹರಿದಾಸ ಗೋಷ್ಠಿ ರವಿವಾರ ಸಾಯಂಕಾಲ ಶ್ರೀ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಜರುಗಿತು,
  ಈ ಒಂದು ಕಾರ್ಯಕ್ರಮದ ಉಪನ್ಯಾಸಕರಾಗಿ ರಾಯಚೂರಿನ ಎಲ್.ವಿ.ಡಿ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಶೀಲಾದಾಸ, ಶ್ರೀಮತಿ ಕಲಾವತಿ ದೇವರು ಹಾಗೂ ಸಿಂದನೂರಿನ ಶ್ರಿಮತಿ ಮಧುಮತಿ ದೇಶಪಾಂಡೆ ಅವರುಗಳು ಆಗಮಿಸಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಪಾದಂಗಳವರು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಹರಿದಾಸರುಗಳ ಉಗಮಕಾಲಕ್ಕಿಂತ ಮೊದಲು ಕನ್ನಡದಲ್ಲಿ ಕೃತಿಗಳು ಸಿಗುವುದು ವಿರಳ ಏಕೆಂದರೆ ಹರಿಸ್ತುತಿ ಮಾಡುವವರು ಸಂಸ್ಕೃತ ಭಾಷೆಯಲ್ಲಿಯೇ ರಚಿಸಿದ್ದರು. ನಂತರ ಪ್ರಾರಂಭವಾದ ದಾಸರುಗಳ ಸಂತತಿಯು ಹರಿಯನ್ನು ಕನ್ನಡದಲ್ಲೀಯೇ ಸ್ತುತಿಸುವ ಪದಗಳು ಹುಟ್ಟಿಕೊಂಡವು
 ಕರ್ನಾಟಕದಲ್ಲಿ ಅನೇಕ ದಾಸರುಗಳು ಆಗಿ ಹೋಗಿರುವರು ಆದರೆ ಮಹಿಳಾ ಹರಿದಾಸಿಯರು ಇರುವುದು ಬಹಳ ವಿರಳ ಅವರು  ಕೃತಿಗಳನ್ನು ರಚಿಸಿದ್ದರು ಅವುಗಳು ಬೆಳಕಿಗೆ ಬಾರದೇ ಹಾಗೆಯೇ ಉಳಿದವು ಎಂದು ನುಡಿದರು.  ನಂತರ ಉಪನ್ಯಾಸ ಪ್ರಾರಂಭಿಸಿದ ಶ್ರೀಮತಿ ಶೀಲಾ ದಾಸ ಅವರು ಮಹಿಳಾ ಹರಿದಾಸಿಯರಲ್ಲಿ ಮೊದಲಿಗರಾದ ನಮ್ಮ ಜಿಲ್ಲೆಯ ನವಲಿ ಗ್ರಾಮದ ಗಲಗಲಿ ಅವ್ವ ಎಂದು ಹೆಸರು ಮಾಡಿದ ಜೀವನ ಹಾಗೂ ಅವರ ಕೃತಿಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು ನಂತರ ಶ್ರೀಮತಿ ಕಲಾವತಿ ದೇವರು ಅವರು ಹೆಳವನಕಟ್ಟೆ ಗಿರಿಯಮ್ಮನ ಜೀವನ ಅವರ ಕೃತಿಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಂತರ ಸಿಂಧನೂರಿನ ಶ್ರೀಮತಿ ಮಧುಮತಿ ದೇಶಪಾಂಡೆ ಅವರು ಹರಪನಹಳ್ಳಿ ಭೀಮಕ್ಕನನವರ ಕೃತಿಗಳು ಹಾಗೂ ಅವರ ಜೀವನದ ಕೆಲವೊಂದು ಘಟನೆಗಳನ್ನು ಎಳೆ ಎಳೆಯಾಗಿ ವಿವರಿಸುತ್ತಾ ನಡೆದರು.
  ಈ ಮೂವರು ಹರಿದಾಸಿಯರ ಭಾಷಾ ಪ್ರೌಢಿಮೆ ಹಾಗೂ ದೇವರಮೇಲೆ ಅವರು ಇಟ್ಟ ಭಕ್ತಿಯ ಬಗ್ಗೆ ಹಾಗೂ ಅವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು. ನಂತರ ಶೋತೃಗಳಿಂದ ದಾಸ ಸಾಹಿತ್ಯದ ಬಗ್ಗೆ ಪ್ರಶ್ನೋತ್ತರ ಮಾಲೆ ನಡೆಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳವರಿಂದ ರಾಜ್ಯದಲ್ಲಿ ಅತ್ಯುತ್ತಮ ಭಜನಾ ಮಂಡಳಿ ಎಂದು ರಾಯಚೂರಿನ ಶ್ರೀ ಕೃಷ್ಣ ಭಜನಾ ಮಂಡಳಿಯ ಮುಖ್ಯಸ್ಥರಾದ ಶ್ರೀಮತಿ ನಿರ್ಮಲಾ ಶಾಗಿ ಅವರಿಗೆ ದಾಸಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

0 comments:

Post a Comment

 
Top