PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-29- ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳದಲ್ಲಿ ಕಲಾ ಒಕ್ಕೂಟದ ವತಿಯಿಂದ ನೇತಾಜಿ  ಕಣ್ಮರೆಯ ನಿಗೂಡತೆಯ ಬಗ್ಗೆ ವಿದ್ಯಾರ್ಥಿಗಳ ವಿಚಾರ-ವಿನಿಮಯ ಕಾರ್ಯಕ್ರಮ ಎರ್ಪಡಿಸಲಾಗಿತ್ತು. ಕಾರ್ಯಕ್ರಮದ ಪ್ರಾರಂಬದಲ್ಲಿ ಒಕ್ಕೂಟದ ಸಂಯೋಜಕರಾದ ಶ್ರೀ ಶರಣಬಸಪ್ಪರವರು ನೇತಾಜಿ ಯುವ ಜನತೆಯ ಸರ್ವಕಾಲಿಕ ನಾಯಕನಾಗಿದ್ದು ಅವರ ಸ್ಪೂರ್ತಿ, ಪ್ರೇರಣೆ ಯುವ ಜನತೆಗೆ ದಾರಿದೀಪವಾಗಿರುವದರಿಂದ ನೇತಾಜಿಯಂತಹ ನಾಯಕನ ಕಣ್ಮರೆಯ ನಿಗೂಡತೆಯನ್ನು ಪ್ರಶ್ನಿಸುವ ಹಕ್ಕು ಯುವಜನತೆಯದಾಗಿದೆ ಎಂದರು.
ವಿಚಾರ-ವಿನಿಮಯದಲ್ಲಿ ವ್ಯಕ್ತಪಡಿಸಲಾದ ಆಯ್ದ ವಿದ್ಯಾರ್ಥಿಗಳ ಅಭಿಪ್ರಾಯಗಳು.
೧ ನೇತಾಜಿಯವರು ಅಫಘಾತದಲ್ಲಿ ಸಾವಿಗಿಡಾಗಿಲ್ಲ ಎನ್ನುವ ಸಂದೇಹ ಈಗ ಲಭ್ಯವಿರುವ ದಾಖಲೆಗಳಿಂದ ವ್ಯಕ್ತವಾಗುತ್ತಿದೆ. ಈ ಕಾರಣಕ್ಕೆ ಸರ್ಕಾರ ನೇತಾಜಿ ಕಣ್ಮರೆಯ ಕೂರಿತು ಪುನ: ಶೋದಿಸಬೇಕು-ರೊಹಿತ ಬಿ.ಎ.೫ನೇ ಸೆಮ್
೨ ನೇತಾಜಿ ಕಣ್ಮರೆಯು ಲಭ್ಯವಿರುವ ದಾಖಲೆಗಳಿಂದ ಸಂದೆಹಾಸ್ಪದವಾಗಿದ್ದು ದೇಶದ ಇತಿಹಾಸದಲ್ಲಿ ಬಹು ಚರ್ಚಿತ ಕಣ್ಮರೆಯ ವಿಷಯವಾಗಿದೆ ಇಂತಹ ವಿಷಯವನ್ನು ಸರ್ಕಾರ ಸೂಕ್ತ ತನಿಖೆಯಿಂದ ಸತ್ಯ ಹೊರತರಬೇಕು-ರಡ್ಡೆಪ್ಪ ಬಿ.ಎ ೫ನೇ ಸೆಮ್.
೩ ನೇತಾಜಿ ಕಣ್ಮರೆಯ ವಿಷಯದಲ್ಲಿ ಸೂಕ್ತ ತನಿಖೆಗೂಳಪಡಿಸಿ ಸರ್ಕಾರ ದಾಖಲೆಗಳನ್ನು ಬಹಿರಂಗ ಗೊಳಿಸಬೇಕು-ಶರಣಪ್ಪ ವಿಕಲಚೇತನ ವಿದ್ಯಾರ್ಥಿ  ಬಿ.ಕಾಂ ೩ನೇ ಸೆಮ್. ಈ ಎಲ್ಲಾ ವಿದ್ಯಾರ್ಥಿಗಳ ವಿಷಯ ಆಲಿಸಿದ ಅತಿಥಿಯಾಗಿದ್ದ ಉಪನ್ಯಾಸಕರಾದ ಶಿವನಗೌಡ ಪೋಲಿಸ ಪಾಟೀಲರು ನೇತಾಜಿ ಕಣ್ಮರೆಯ ನಿಗೂಡತೆ ಮತ್ತು ಬಿಡುಗಡೆಗೊಂಡ ದಾಖಲೆಗಳನ್ನು ಪರಿಸಿಲಿಸಿದಾಗ ನೇತಾಜಿ ಅಪಘಾತದಲ್ಲಿ ಮರಣವನ್ನಪ್ಪಿರುವ ಸಾದ್ಯತೆ ಕಡಿಮೆಯಿದೆ.  ನೇತಾಜಿ ಕುರಿತಾದ ದಾಖಲೆಗಳ ಬಿಡುಗಡೆಯಿಂದ ಅಂತರಾಷ್ಟ್ರಿಯ ಸಂಬಂದಗ
ಳಿಗೆ ಧಕ್ಕೆ ಬರಬಹುದೆಂದು ಸರ್ಕಾರ ಹೇಳುತ್ತಿದೆ. ಆದರೆ ಸೂಕ್ಷ್ಮವಾದ ವಿಷಯವಾಗಿದ್ದು ಇದನ್ನು ಚಾಣಕ್ಷತನದಿಂದ ಎದುರಿಸಿ ಸತ್ಯಾಸತ್ಯತೆಯನ್ನು ಆದಷ್ಟು ಬೇಗನೆ ಬಹಿರಂಗ ಗೊಳಿಸಿದಾಗ ಎಲ್ಲರ ಸಂಶಯಗಳು ನಿವಾರಣೆಯಾಗುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ. ಎಂ.ಎಸ್.ದಾದ್ಮಿ ವಹಿಸಿದ್ದರು. ಪ್ರಾದ್ಯಪಕರಾದ ಡಾ|| ಜೆ.ಎಸ್.ಪಾಟೀಲ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು||ರೇಣುಕಾ ಹಾಗೂ ಮೇಘಾ ದೇಶಭಕ್ತಿಯನ್ನು ಹಾಡಿದರು.

Advertisement

0 comments:

Post a Comment

 
Top