ಕೊಪ್ಪಳ, ಸೆ. ೨೭. ಸಿನೆಮಾ ಕ್ಷೇತ್ರ ಈಗ ತುಂಬಾ ವಿಶಾಲವಾಗಿದ್ದು, ಆಸಕ್ತರಿಗೆ ಪ್ರತಿಭಾವಂತರಿಗೆ ಉತ್ತಮ ವೇದಿಕೆಯಾಗಿರುವ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಕ್ಟೋಬರ್ ೩ ಮತ್ತು ೪ ರಂದು ವಿವಿಧ ಕ್ಷೇತ್ರದ ಆಸಕ್ತರಿಗೆ ಮೊದಲಬಾರಿಗೆ ಆಡಿಷನ್ ನಡೆಸುತ್ತಿದೆ.
ಈ ಕುರಿತು ಪ್ರಕಟಣೆ ನೀಡಿರುವ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ಅಕ್ಟೋಬರ್ ೩ ಮತ್ತು ೪ ರಂದು ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಎದುರಿಗಿರುವ ಸಾಹಿತ್ಯ ಭವನದಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೬ ರ ತನಕ ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಗೊಂಡಿರುವ ಐದು ಚಲನಚಿತ್ರಗಳಿಗೆ ಆಸಕ್ತ ಕಲಾವಿದರಿಗೆ ಆಡಿಷನ್ (ಪ್ರತಿಭಾ ಶೋಧ) ನಡೆಸಲಿದೆ.
ಇದೇ ವೇಳೆ ತಂತ್ರಜ್ಞರು, ಕ್ಯಾಮರಾಮೆನ್, ಸಂಕಲನಕಾರರು, ನಾಯಕ ನಟ, ನಾಯಕ ನಟಿಯರ ಜೊತೆಗೆ ಪೋಷಕ, ಖಳ ನಟ-ನಟಿ ಪಾತ್ರಗಳಿಗೂ ಆಡಿಷನ್ ನಡೆಯಲಿದೆ. ಸಂಗೀತ ಸಂಯೋಜಕರು, ಹಾಡುಗಾರರು, ನೃತ್ಯಪಟುಗಳು, ನೃತ್ಯ ಸಂಯೋಜಕರೂ ಆಗಮಿಸಿ ತಮ್ಮ ಪ್ರತಿಭೆ ತೋರಿಸಿ ಮುಂದಿನ ಐದು ಚಿತ್ರಗಳಲ್ಲಿ ಅವಕಾಶ ಪಡೆಯಬಹುದಾಗಿದೆ. ಎಸ್‌ಜೆ ಆರ್ಟ್ಸ್ ಫಿಲಂಸ್‌ರವರ ಗರಗದ ಶ್ರೀ ಮಡಿವಾಳೇಶ್ವರರು (ಭಕ್ತಿ ಪ್ರಧಾನ ಚಿತ್ರ), ಹೆತ್ತೊಡಿಲು ಕ್ರಿಯೇಷನ್‌ರವರ ಸೇವಕ (ಸಾಮಾಜಿ ಚಿತ್ರ), ಸಾಹಿತ್ಯ ಎಂಟರ್‌ಪ್ರೈಸಸ್ ಶ್ರೀ ಸಹಸ್ರಾಂಜನೇಯ ಪಿಕ್ಷರ್‍ಸ್‌ರವರ ಹೊಂಗಿರಣ (ಮಕ್ಕಳ ಚಿತ್ರ) ಮತ್ತು ಶ್ರೀ ಪರಮೇಶ್ವರಿ ಮೂವಿ ಮೇಕರ್‍ಸ್‌ರವರ ತ್ರಿಡೇಸ್ (ಹಾರರ್ ತ್ರಿಲ್ಲರ್ ಚಿತ್ರ) ಹಾಗೂ ಹಿಂದಿ ಚಿತ್ರವೊಂದಕ್ಕೆ ಆಯ್ಕೆ ನಡೆಯಲಿದ್ದು, ಆಡಿಷನ್‌ನಲ್ಲಿ ಭಾಗವಹಿಸಿದವರು ಮಂಡಳಿಯ ಖಾಯಂ ಸದಸ್ಯರಾಗಬೇಕು ಅದಕ್ಕೆ ಅವರು ತಮ್ಮ ಎರಡು ಭಾವಚಿತ್ರ, ಗುರುತಿನ ಚೀಟಿ ಹಾಗೂ ಮಂಡಳಿಯ ಸದಸ್ಯತ್ವ ಶುಲ್ಕ ೬೦೦ ಗಳನ್ನು ತೆಗೆದುಕೊಂಡು ನೇರವಾಗಿ ಆಡಿಷನ್ ಸ್ಥಳಕ್ಕೆ ಬರಬೇಕು, ಅಲ್ಲಿ ನೋಂದಣಿ ಮಾಡಿಸಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸಿ ಐದು ಚಿತ್ರಗಳಲ್ಲಿ ಅವಕಾಶ ಪಡೆಯಬಹುದು, ಹೆಚ್ಚಿನ ಮಾಹಿತಿಯನ್ನು ಮಂಡಳಿಯ ಅಧ್ಯಕ್ಷ ಶಂಕರ ಸುಗತೆ ಅಥವಾ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ (ಮೊ ೯೪೪೮೩೦೦೦೭೦) ರವರಿಂದ ಪಡೆಯಬಹುದು.

0 comments:
Post a Comment