ಕೊಪ್ಪಳ-06- ೧೦೦೮ ವಿದ್ಯೇಶ ತೀರ್ಥ ಶ್ರೀಪಾದಂಗಳವರ ೩೬ ನೇ ಚಾತುರ್ಮಾಸ್ಯ ಮಹೋತ್ಸವದ ಅಂಗವಾಗಿ ನಿನ್ನೆ ಶುಕ್ರವಾರ ಸಾಯಂಕಾಲ ಶ್ರೀ ಮಹಾಂತಯ್ಯ ಕಲ್ಯಾಣ ಮಂಟಕ್ಕೆ ಭೇಟಿ ನೀಡಿದರು. ಶ್ರಾವಣ ಶುಕ್ರವಾರವಾದುದರಿಂದ ಸುಮಂಗಲೇಯರಿಂದ ಶ್ರೀ ಲಕ್ಷ್ಮೀದೇವಿಗೆ ಕುಂಕುಮಾರ್ಚನೆ ನಂತರ ಶ್ರೀಗಳಿಂದ ಉಪನ್ಯಾಸ ನೇರವೇರಿತು. ನಂತರ ಸಂಸದರಾದ ಕರಡಿ ಸಂಗಣ್ಣ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದರು `ಶ್ರೀಗಳವರು ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಈ ಒಂದು ಚಾತುರ್ಮಾಸ್ಯ ಕುಳಿತಿರುವುದು ನಮ್ಮ ಜಿಲ್ಲೆಯ ಸೌಭಾಗ್ಯವೇ ಸರಿ. ಚಾ
ತುರ್ಮಾಸ್ಯದ ಪರಿಯಂತರ ಅವರ ಉಪನ್ಯಾಸವನ್ನು ಪಡೆಯುತ್ತಿರುವ ನೀವುಗಳು ಧನ್ಯರು. ನಾನು ಕೂಡ ಈ ಕಾರ್ಯಕ್ರಮದ ಒಂದು ದಿನ ಇದ್ದು ಕಾರ್ಯಕ್ರಮವನ್ನು ನೋಡಲು ಇಚ್ಛೆ ವ್ಯಕ್ತಪಡಿಸಿದರು. ಧರ್ಮಾಚರಣೆಯಿಂದ ಅಪರಾದದಂತಹ ಕೃತ್ಯಗಳು ಕಡಿಮೆಯಾಗುತ್ತವೆ. ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ ಕವಲೂರು, ಗವಿಸಿದ್ದಪ್ಪ ಕಂದಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಅಪ್ಪಣ್ಣ ಪದಕಿ, ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ, ಹಾಗೂ ಇನ್ನಿತರ ಮುಖಂಡರುಗಳಿಗೆ ಶ್ರೀಗಳವರು ಶಾಲಾ ಹೋದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಕಾರ್ಯಕ್ರಮದ ಆಯೋಜಕರಾದ ರಾಮ್‌ರಾವ್ ಗಂಗಾಕೇಡ್ಕರ್ ಉಪಸ್ಥಿತರಿದ್ದರು.

0 comments:
Post a Comment