PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸ.೦೨ ಪ್ರತಿಯೊಬ್ಬರಲ್ಲಿ ತನ್ನದೇ ಅಭಿರುಚಿಗೆ ತಕ್ಕ ಪ್ರತಿಭೆ ಇದ್ದೆ ಇರುತ್ತದೆ. ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸುವುದು ಶಿಕ್ಷಕರ ಕರ್ತವ್ಯ ಅಷ್ಟೇ ಜವಬ್ದಾರಿಯುತವಾದದ್ದು ಎಂದು ತಾ.ಪಂ. ಸದಸ್ಯ ಶ್ರೀನಿವಾಸ ಹ್ಯಾಟಿ ಹೇಳಿದರು.  ಅವರು ಮಂಗಳವಾರ ಸಮೀಪದ ಭಾಗ್ಯನಗರದ ಸ.ಪ.ಪೂ. ಕಾಲೇಜು (ಕೊಪ್ಪಳ ಪ್ರಾ.ಶಾ. ವಿಭಾಗ) ಉತ್ತರ ವಲಯದ ಪ್ರಾಥಮಿಕ ಪ್ರೌಢಶಾಲೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾ
ತನಾಡಿದರು. ಮುಂದುವರೆದು ಮಾತನಾಡಿದ ಅವರು, ಮಕ್ಕಳು ಇಂತಹ ಸದಾವಕಾಶಗಳನ್ನು ಬಳಸಿಕೊಂಡು ತಮ್ಮಲ್ಲಿ ಅಪ್ರತಿಮ ಪ್ರತಿಭೆಯನ್ನು ಸ್ಪರ್ಧಾತ್ಮಕವಾಗಿ ಎದುರಿಸಿ ತೋರಬೇಕಿದೆ. ಅಂದಾಗ ಮಾತ್ರ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಶಿಕ್ಷಕರಿಗೆ ಮನದಟ್ಟವಾಗಿ ಅದಕ್ಕೆ ಪೂರಕವಾಗಿ ಅವರು ಮುಂದೆ ನಿರ್ದೇಶನ ನೀಡಲು ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವೀರಪ್ಪ ಎಸ್. ಬಳ್ಳಾರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ೦೫ ಪ್ರೌಢಶಾಲೆ ಮತ್ತು ೧೬ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ಉಪ ಪ್ರಾಚಾರ್ಯರಾದ ಸುಜಾತ, ಶಿಕ್ಷಣ ಸಂಯೋಜಕರಾದ ಎಸ್.ಬಿ.ಕುರಿ, ಎಂ.ಹೆಚ್.ಪಿಎಸ್, ಮುಖ್ಯ ಶಿಕ್ಷಕರಾದ ಸುರೇಂದ್ರಗೌಡ ಪಾಟೀಲ್, ಶಿಕ್ಷಕರಾದ ಬಸವರಾಜ ಪೋ.ಪಾಟೀಲ್, ಹುಸೇನ ಪಾಷಾ, ಎಸ್.ಡಿ.ಎಂ.ಸಿ. ಸದಸ್ಯರಾದ ಅಬ್ದುಲ್ ರಶೀದ್, ಶ್ರೀನಿವಾಸ ಬಗಾಡ, ಬಸವರಾಜ ಹುಬ್ಬಳ್ಳಿ, ಗೀತಾ ಬಡಿಗೇರ, ಶಿಕ್ಷಕರಾದ ಸದಾಶಿವ ಪಾಟೀಲ್, ಸಮೂಹ ಸಂಪನ್ಮೂಲ ವ್ಯಕ್ತಿ ವೀರಭದ್ರಯ್ಯ ಹಿರೇಮಠ ಉಪಸ್ಥಿತರಿದ್ದರು.

Advertisement

0 comments:

Post a Comment

 
Top