PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ-06- ತಾಲೂಕಿನ ಕಲ್ಲೂರ,ಭಟಪನಹಳ್ಳಿ,ಬಿನ್ನಾಳ,ಯರೇಹಂಚಿನಾಳ ಬಹತೆಕ ಹಳ್ಳಿಗಳಲ್ಲಿ  ಮಳೆ ಬಂದಾಗ  ಸಾರ್ವಜನಿಕರು ತೊಂದರೆಗಳಿಗೆ ಸಿಲುಕಿ ಪಡಬಾರದ ಕಷ್ಟ  ನಷ್ಟ ಗಳನ್ನ ಅನುಭವಿಸುತ್ತಿದ್ದಾರೆ. ಯಲಬುರ್ಗಾ-ಕಲ್ಲೂರ ಮಾರ್ಗ ರಸ್ತೆ ಸಂಚಾರ ಮಾಡುವಾಗ ಮಳೆ ಬಂದು  ಹಳ್ಳ ತುಂಬಿ   ರಸ್ತೆ ಸಂಚಾರ ಮಾಡುವ  ರೈತರಿಗೆ ,ಪ್ರಯಾಣಿಕರಿಗೆ ೧ ತಾಸು ತಡವಾಗಿತು .ಹೊಲಕ್ಕೆ ಹೊಗಿ ಮನೆಗೆ ಬರುವ ಮುನ್ನ ಮಳೆ ಬಂದು ಹಳ್ಳಗಳು ತುಂಬಿ ರಭಸವಾಗಿ ಹರಿಯುತ್ತವೆ ಆಗ ರೈತರು ದನಕರುಗಳನ್ನ,ಕುರಿಮರಿಗಳನ್ನ ತಮ್ಮ ಮನೆಗೆ ತರುವಲ್ಲಿ ಹರಸಾಹಸ ಪಡುವ ಸಮಯ ಹೇಳತೀರದು.ಮತ್ತು ಮುಂದಿನ ಊರಿಗೆ ಪ್ರಯಾಣ ಮಾಡುವಪ್ರಯಾಣಿಕರಿಗೂತೊಂದರೆಯಾಗುತ್ತದೆ. ಆದ್ದರಿಂದಶಾಸಕರು, ಸಂಸದರು, ಸಂಬಂದಿಸಿದ,  ಅಧಿಕಾರಿಗಳು ,ಜನಪ್ರತಿನಿಧಿಗಳು ಸೇತುವೆ ನಿರ್ಮಿಸಬೇಕೆಂದು ಜಿಲ್ಲಾ ಜನಪರ ಹೋರಾಟ ಸಮಿತಿ ಜಿಲ್ಲಾ ಮುಖಂಡ  ಎಸ್.ಕೆ.ದಾನಕೈ ಒತ್ತಾಯಿಸಿದ್ದಾರೆ. ಇಂತಹ ಪ್ರಸಂಗ ಸ.೬ ರಂದು ರವಿವಾರ ಬೆಳಿಗ್ಗೆ ೧೨.೪೫ಕ್ಕೆ ಪುಣ್ಯ ಕ್ಷೇತ್ರ ಕಲ್ಲೂರಿನಲ್ಲಿ ರಭಸವಾಗಿ ಮಳೆ ೧ ತಾಸು  ಸುರಿದಿರುತ್ತದೆ.ಇದರಿಂದ ಸಾರ್ವಜನಿಕರಿಗೆ.ರೈತರಿಗೆ. ಪ್ರಯಾಣಿಕರಿಗೆ ತೊಂದರೆಯಾಗಿತು. ಮುಂದಿನ ಅವಘಡ. ತೊಂದರೆಗಳಾಗದಂತೆ ಸೇತುವೆ ನಿರ್ಮಿಸುವದು ಉತ್ತಮವಾದದು ಎಂದು ಎಸ್.ಕೆ.ದಾನಕೈ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Advertisement

0 comments:

Post a Comment

 
Top