ಕೊಪ್ಪಳ 21- ಬುಧವಾರ ಬೆಳಿಗ್ಗೆ ೯ ಗಂಟೆ ಸುಮಾರಿ ನಗರದ ಅಂಬೇಡ್ಕರ್ ವೃತ್ತದಿಂದ ಶಾರದಾ ಟಾಕೀಜ್ ಹತ್ತಿರದಿಂದ ಗಡಿಯಾರ ಕಂಬ ಮಾರ್ಗವಾಗಿ, ಜವಾಹರ ರಸ್ತೆ ಮೂಲಕ ಅಶೋಕ ವೃತ್ತ ಬಳಸಿಕೊಂಡು ನಗರಸಭೆಯವರೆಗೆ ಮೆರವಣಿಗೆಯಲ್ಲಿ ಮತ್ತು ನಂತರ ಜರುಗಲಿರುವ ಕಾರ್ಯಕ್ರಮದಲ್ಲಿ ಪೌರಸೇವಾ ನೌಕರರು, ಅಧಿಕಾರಿಗಳು, ಗಣ್ಯರು, ನಗರದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಂಘ ಕೋರಿದೆ. ಬೆಳಗಿನ ಜಾವ ಸೂರ್ಯ ಉದಯಿಸುವ ಮುಂಚೆಯಿಂದಲೇ ಅಂದರೆ ಬೆಳಿಗ್ಗೆ ೫:೦೦ ಗಂಟೆಯಿಂದಲೇ ತಮ್ಮ ವೃತ್ತಿಯನ್ನು ಪ್ರಾರಂಭಿಸಿ, ತಮ್ಮ ಸ್ವಚ್ಛತೆಯ ಸಲಕರಣೆಗಳನ್ನು ಹಿಡಿದು, ರಸ್ತೆಯಲ್ಲಿ ಅವರಿಲ್ಲರೂ ತಿಂದು ಎಸೆದ ಕಸವನ್ನು ಸ್ವಚ್ಛಗೊಳಿಸುವುದು, ಚರಂಡಿಯಲ್ಲಿಯೇ ಇಳಿದು, ಚರಂಡಿಯ ಹೊಲಸನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಾರೆ. ನಮ್ಮ ದೈನಂದಿನ ಜೀವನದಲ್ಲಿ ತಮ್ಮ ಮಕ್ಕಳು ದೊಡ್ಡ ದೊಡ್ದ ಹುದ್ದೆಗಳಲ್ಲಿ ಅಂದರೆ ಸಿವಿಲ್ ಇಂಜಿನಿಯರ್, ಡಾಕ್ಟರ್, ಸಾಪ್ಟವೇರ್ ಇಂಜಿನಿಯರ್ ಹುದ್ದೆಯನ್ನು ಹೊಂದುವ ಕನಸಲ್ಲೇ ಜೀವನ ಸಾಗಿಸುತ್ತಾರೆ. ಚರಂಡಿಗೆ ಇಳಿದು, ಸ್ವಚ್ಛ ಮಾಡುತ್ತಾರೆ. ಅವರಿಗೆ ಅದು ಸಾರ್ವಜನಿಕರ ಹೊಲಸ ಅದನ್ನು ನಾವೇಕೆ? ಸ್ವಚ್ಛಗೊಳಿಸಬೇಕೆಂದು ಎಂದೂ ಆಲೋಚನೆ ಮಾಡುವುದಿಲ್ಲ. ಈ ರೀತಿಯ ನೈಜ ಕಾರ್ಯ ಮಾಡುವಂತಹ ಪೌರಕಾರ್ಮಿಕರೇ ನಿಜವಾದ ಕಾಯಕಯೋಗಿಗಳು. ನಿಷ್ಕಲ್ಮಷ ಪ್ರವೃತ್ತಿಯುಳ್ಳವರು. ಅವರ ಕೆಲಸಕ್ಕೆ ಎಂಥಾ ಬೆಲೆಕೊಟ್ಟರೂ ಕಡಿಮೆ. ಊರ ಹೊಲಸನ್ನು ತೆಗೆದು, ಅವರು ತಮ್ಮ ಆರೋಗ್ಯದ ಬಗ್ಗೆ ಲೆಕ್ಕಿಸದೇ, ಕೊನೆಗೊಂದು ದಿನ ಅನಾರೋಗ್ಯದಿಂದ ಬಳಲಿ ಸಾಯುತ್ತಿದ್ದಾರೆ. ಅವರಿಗೆ ಯಾವುದೇ ಆರೋಗ್ಯ ಸುಧಾರಿಸಿಕೊಳ್ಳುವ ಬಲವಾದ ಯೋಜನೆಗಳಿಲ್ಲ. ಅವರ ಆದಾಯವು ಅಷ್ಟಕಷ್ಟೇ ಇದೆ. ಅವರು ತಮ್ಮ ದಿನನಿತ್ಯ ಖರ್ಚಿಗಾಗಿ ಮಾತ್ರ ದುಡಿಯುತ್ತಾರೆ. ಅಷ್ಟೇ ಏಕೆ ಎಷ್ಟೋಂದು ಪೌರಕಾರ್ಮಿಕರು ೨೦ ರಿಂದ ೩೦ ವರ್ಷಗಳಿಂದ ಪೌರಕಾರ್ಮಿಕರ ಹುದ್ದೆಯಲ್ಲಿಯೇ ಇದ್ದರು ಅವರಿಗೆ ಇದುವರೆಗೂ ಖಾಯಂ ಮಾಡುವ ಕೆಲಸ ನಮ್ಮ ಸರ್ಕಾರ ಇದುವರೆಗೆ ಮಾಡಿರುವುದಿಲ್ಲ. ದೈನಂದಿನ ಜೀವನ ನಿರ್ವಹಣೆಯಷ್ಟಕ್ಕೆ ಅವಲಂಬಿತರಾಗಿ, ಅಷ್ಟರಲ್ಲಿ ತಮ್ಮ ಜೀವನದ ಅಂತ್ಯ ಕಾಣುತ್ತಾರೆ. ಅವರ ಸಲುವಾಗಿ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದಂತಹ ಸವಲತ್ತುಗಳು ಸಿಗುವಂತೆ ಸರ್ಕಾರದ ಮಟ್ಟದಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಲಾಲ್‌ಶಾ ಮನಿಯಾರ್, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಬೆಲ್ಲದ್, ಜಿಲ್ಲಾ ನಿರ್ದೇಶಕ ವಿರುಪಾಕ್ಷಪ್ಪ ಎನ್.ಹೆಚ್., ಜಯಶೀಲಾ, ಜಿಲ್ಲಾ ಖಜಾಂಜಿ ಮಂಗಳಾ ಕುಲಕರ್ಣಿ, ಶಾಖಾ ಅಧ್ಯಕ್ಷ ಅಖ್ತರ ಅಲಿ, ಶಾಖಾ ಕಾರ್ಯದರ್ಶಿ ವಸಂತ ಬೆಲ್ಲದ್, ಶಾಖಾ ನಿರ್ದೇಶಕ ರಾಜಾಹುಸೇನ್ ಬನ್ನಿಕೊಪ್ಪ ಜಂಟಿ ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment