PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ. ೮, ವಾಲ್ಮೀಕಿ ನಾಯಕ ಜನಾಂಗದ ಸಂಘಟನೆ ಹಾಗೂ ಜಾಗೃತಿಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿರುವ ಹರಿಹರ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮಿಗಳು ಮಂಗಳವಾರ ಬೆಳಿಗ್ಗೆ  ಕೊಪ್ಪಳದಲ್ಲಿ ತಮ್ಮನ್ನು ಭೇಟಿಯಾದ ಸಂಸದ ಸಂಗಣ್ಣ ಕರಡಿ ಅವರೊಂದಿಗೆ ದೀರ್ಘ ಚರ್ಚೆ ನಡೆಸಿ, ಬಳಿಕ ಯಲಬುರ್ಗಾ ತಾಲ್ಲೂಕಿನಲ್ಲಿ  ಇತ್ತೀಚೆಗೆ ಸಾಮೂಹಿಕ ಅತ್ಯಚಾರಕ್ಕೊಳಗಾದ ಮುಧೋಳ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವನ ಹೇಳಿದರು.
ಸಂಸದ ಸಂಗಣ್ಣ ರೊಂದಿಗೆ ಚರ್ಚೆ;  ಮಂಗಳವಾರ ಬೆಳಿಗ್ಗೆ ಕೊಪ್ಪಳದ ಭಕ್ತರೊಬ್ಬರ ಮನೆಯಲ್ಲಿ ತಮ್ಮನ್ನು ಭೇಟಿಯಾದ ಲೋಕಸಭಾ ಸದಸ್ಯ ಸಂಗಣ್ಣ ಕರಡಿಯರೊಂದಿಗೆ ದೀರ್ಘ ಚರ್ಚೆ ನಡೆಸಿ. ಕೊಪ್ಪಳ ಜಿಲ್ಲೆಯಲ್ಲಿ  ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈ ವರೆಗೆ ವಿದ್ಯಾರ್ಥಿ ವೇತನ ವಿತರಿಸದೇ ಇರುವ ಬಗ್ಗೆ. ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸಂಸದರ ಅನುದಾನ ಒದಗಿಸುವದು,ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಎಸ್.ಟಿ.ಕಲ್ಯಾಣ ಇಲಾಖೆಯ ಕಚೇರಿಗಳನ್ನು ತೆರೆಯುವ ಕುರಿತು ಮಾತುಕತೆ ನಡೆಸಿದರು.
ರಾಜ್ಯದಲ್ಲಿ  ಪ. ಪಂ. ಮೀಸಲಾತಿ ಪ್ರಮಾಣವನ್ನು ಶೇ. ೭.೫ ಕ್ಕೆ ಹೆಚ್ಚಿಸುವದು ಹಾಗೂ ವಾಲ್ಮೀಕಿ ಜನಾಂಗದ ಪರ್ಯಾಯ ಪದಗಳಾದ ತಳವಾರ ಹಾಗೂ ಪರಿವಾರ ಶಬ್ದಗಳನ್ನು  ಎಸ್.ಟಿ.ಪಟ್ಟಿಗೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ಜನಾಂಗದ ಸಂಸದರಾದ ಬಿ. ಶ್ರೀರಾಮುಲು ಹಾಗೂ ಬಿ.ವಿ.ನಾಯಕ ಅವ
ರೊಂದಿಗೆ ಕೈ ಜೋಡಿಸಬೇಕೆಂದರು. ವಾಲ್ಮೀಕಿ ಶ್ರೀಗಳ ಸಲಹೆ ಸ್ವೀಕರಿಸಿದ ಸಂಸದ ಸಂಗಣ್ಣ ಕರಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ಎಲ್ಲ ತಾಲ್ಲೂಕುಗಳ ನಾಯಕ ಜನಾಂಗದ ಏಳ್ಗೆಗೆ ಶ್ರಮಿಸುವದಾಗಿ ಭರವಸೆ ನೀಡಿದರು.
ಯಲಬುರ್ಗಾ ತಾಲ್ಲೂಕಿನಲ್ಲಿ ಪ್ರವಾಸ; ಯಲಬುರ್ಗಾ ತಾಲ್ಲೂಕಿನ ಇಟಗಿ, ಮಂಡಲಗಿರಿ, ಕುಕನೂರು ಗ್ರಾಮಗಳಿಗೆ ಭೇಟಿ ನೀಡಿದ ವಾಲ್ಮೀಕಿಶ್ರೀಗಳು ಮುಧೋಳ ಗ್ರಾಮಕ್ಕೆ ತೆರಳಿ ಇತ್ತೀಚೆಗೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ರೇಖಾ ತಳವಾರ ಮನೆಗೆ ತೆರಳಿ, ಸಾಂತ್ವನ ಹೇಳಿ ಶ್ರೀಮಠದಿಂದ ೧೦ ಸಾವಿರ ರೂಪಾಯಿ ಪರಿಹಾರ ವಿತರಿಸಿದರು. ಹಿರೇವಂಕಲಕುಂಟ ಗ್ರಾಮದಲ್ಲಿ ಯಲಬುರ್ಗಾ ತಾಲ್ಲೂಕಿನ  ನಾಯಕ ಸಮಾಜದ ಸಭೆ ನಡೆಸಿ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಮೇಲೆ ಬರಲು ಸಂಘಟಿತರಾಗಬೇಕು. ಇತರ ಎಲ್ಲ ಸಮಾಜಗಳೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡು ಉತ್ತಮ ನಾಗರಿಕರಾಗಬೇಕು. ಅನ್ಯಾಯಗಳು ಸಂಭವಿಸಿದಾಗ ಯಾರ ಮುಲಾಜಿಗೂ ಒಳಗಾಗದೇ ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾಗಿರಬೇಕು. ಈ ಬಾರಿ ವಾಲ್ಮೀಕಿ ಜಯಂತಿ ಆಚರಣೆ ಸಂದರ್ಭ ಎಲ್ಲ ಊರುಗಳಲ್ಲಿ ಕಾರ್ಯಕ್ರಮದ ವೇದಿಕೆಗಳಿಗೆ ಹಕ್ಕ ಬುಕ್ಕರ ಹೆಸರಿಡಬೇಕೆಂದು ಸೂಚಿಸಿದರು.
ವಾಲ್ಮೀಕಿ ಮುಖಂಡರಾದ ರಾಮಣ್ಣ ಕಲ್ಲನವರ, ಟಿ. ರತ್ನಾಕರ, ಶರಣಪ್ಪ ನಾಯಕ, ರುಕ್ಮಣ್ಣ ಶ್ಯಾವಿ, ಸೋಮಪ್ಪ ನಾಯಕ, ಹೆಚ್. ಎಸ್. ಸುರುಪುರ, ದೇವಪ್ಪ ಕಟ್ಟಮನಿ, ಹನುಮಂತಪ್ಪ ಕೋಡಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top