ಕೊಪ್ಪಳ-೦೪, ಕ್ಷೇತ್ರದ ಅಳವಂಡಿ ಗ್ರಾಮದಲ್ಲಿ ಕೊಪ್ಪಳ ಜನಪ್ರಿಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಜಿಲ್ಲೆಯಲ್ಲಿ ಪ್ರಥಮವಾಗಿ ಗೋಶಾಲೆ ಆರಂಭಿಸಿ ಮಾತನಾಡಿದ ಅವರು ಮಳೆಯ ತೀವ್ರ ಕೊರತೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಬರ ಆವರಿಸಿದ್ದು ದನ ಕರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು ಕೊಪ್ಪಳ ಕ್ಷೇತ್ರದಲ್ಲಿ ಇನ್ನೂ ಎರಡು ಗೋಶಾಲೆಗಳನ್ನು ಪ್ರಾರಂಭಿಸಲಾಗುವುದು. ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ರಾಜ್ಯದ ರೈತರ ಹಿತಾಸಕ್ತಿಗೆ ತೀವ್ರ ಗತಿಯಲ್ಲಿ ಸ್ಪಂದನೆ ಮಾಡುತ್ತಿದ್ದು ಬೆಳೆ ಹಾನಿಗೆ ಈಗಾಗಲೇ ಪರಿಹಾರ ನೀಡಿದ್ದು ರೈತರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗುತ್ತಿದ್ದಾರೆ ವರುಣ ದೇವರು ಮುನಿಸಿಕೊಂಡಿದ್ದು ರಾಜ್ಯದಲ್ಲಿ ಮಳೆ ಅಭಾವದಿಂದಬರಗಾಲದ ಛಾಯೆ ಆವರಿಸಿದೆ ರೈತರು ಸರ್ಕಾರದ ಈ ಗೋಶಾಲೆಗಳ ಸದ್ಬಳಕೆ ಮಾಡಿಕೊಳ್ಳಬೇಕು ನಮ್ಮ ಸರ್ಕಾರ ರೈತರ ಪರವಾಗಿದ್ದು ರೈತರ ಯಾವುದೇ ಸಮಸ್ಯೆಗಳಿಗೆ ನೆರವು ನೀಡಲು ಸದಾ ಸಿದ್ದರಾಗಿದ್ದೇವೆಂದು ಹೇಳಿದರು. ದನಕರುಗಳಿಗೆ ನೀರಿನ ಕೊರತೆ, ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪ್ರಸನ್ನ ಗಢಾದ, ಬಸವರೆಡ್ಡೆಪ್ಪ ಹಳ್ಳಿಕೇರಿ, ಹನುಮಂತಗೌಡ್ರ ಗಾಳಿ, ಕರಡಿ ರಂಗಪ್ಪ, ಚಂದ್ರಪ್ಪ ಜಂತ್ಲಿ, ಚೌಡಪ್ಪ ಜಂತ್ಲಿ, ಸುರೇಶ ದಾಸರೆಡ್ಡಿ, ಪರಶುರಾಮ ಮೆಕ್ಕಿ, ತೋಟಪ್ಪ ಶಿಂಟ್ರ, ರೇಣುಕಪ್ಪ ಹಳ್ಳಿಕೇರಿ, ನಜೀರ ಬಿಸರಳ್ಳಿ, ಇಸ್ಮಾಯಿಲ್ ಕವಲೂರು, ವಿರುಪಾಕ್ಷಪ್ಪ ಜೋಳದ, ಸಿದ್ದಪ್ಪ ಗಿಣಗೇರಿ, ಗ್ರಾಮ ಪಂಚಾಯತಿಯ ಸದಸ್ಯರು ಗ್ರಾಮದ ಗುರು-ಹಿರಿಯರು ವಕ್ತಾರ ಅಕ್ಬರಪಾಷಾ ಪಲ್ಟನ್, ತಹಶೀಲ್ದಾರರಾದ ಪುಟ್ಟರಾಮಯ್ಯ, ಡಾ|| ಸಾಲಿ ಇನ್ನೂ ಅನೇಕ ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment