ಕೊಪ್ಪಳ, ೨೮ ನಗರದ ಲಯನ್ಸ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರೀಕ್ಷೆ ಎದುರಿಸುವ ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತಾಗಿ ೨ ಗಂಟೆಗಳ ಅಭಿಪ್ರೇರಣಾ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ವಿವೇಕಾ
ನಂದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವ, ಐ.ಎ.ಎಸ್. ಅಭ್ಯರ್ಥಿಯೂ ಆಗಿರುವ ಕುಮಾರಿ ಎಚ್.ವಿ. ಸ್ವಪ್ನಾ ಇವರು ಮಕ್ಕಳೊಂದಿಗೆ ಭವಿಷ್ಯದ ಸವಾಲುಗಳ ಕುರಿತು ಶಿಬಿರ ನಡೆಸಿಕೊಟ್ಟರು. ಆತ್ಮಸ್ಥೈರ್ಯ, ಧೈರ್ಯ, ಏಕಾಗ್ರತೆಯನ್ನು ಹೊಂದಿರಬೇಕು, ಯಾವುದೇ ಸಮಯದಲ್ಲಿಯೂ ಧೃತಿಗೆಡಬಾರದು. ಸಮಯ ಪರಿಪಾಲನೆಯಿಂದ ನಾವು ಭವಿಷ್ಯದಲ್ಲಿ ಯಶಸ್ಸನ್ನು ಕಂಡುಕೊಳ್ಳುತ್ತೇವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಹೆಚ್ಚಿನ ಒತ್ತು ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿಬಿರದಲ್ಲಿ ಶಾಲಾ ಪ್ರಾಚಾರ್ಯ ಎ. ಧನಂಜಯನ್, ಶಿಕ್ಷಕರಾದ ಸಮೀರ ಜೋಶಿ, ಶರಣಗೌಡ, ವಿನಾಯಕ ಹತ್ತಿಕಾಳ ಇದ್ದರು. ಮಹೇಶ ಬಳ್ಳಾರಿ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಕು. ಪೂಜಾ ಹಿರೇಹಾಳ ಸ್ವಾಗತಿಸಿದರೆ, ಕೊನೆಯಲ್ಲಿ ಕು. ಮಂಗಳಶ್ರೀ ವಂದಿಸಿದರು.
Subscribe to:
Post Comments (Atom)
0 comments:
Post a Comment