PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಸೆ. ೧೮ (ಕ ವಾ)ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಸೆ. ೧೯ ಮತ್ತು ೨೦ ರಂದು  ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಸೆ. ೧೯ ರಂದು ಕಾರಟಗಿಯಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು.  ಸೆ. ೨೦ ರಂದು ಕಾರಟಗಿಯಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಕೈಗೊಂಡು ಮಧ್ಯಾಹ್ನ ೩ ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
ಮಿತ ನೀರಾವರಿ ಬೆಳೆಗಳಿಗೆ ನೀರು ಪೋಲಾಗದಂತೆ ಸಹಕರಿಸಲು ಮನವಿ
ಕೊಪ್ಪಳ, ಸೆ.೧೮ (ಕ ವಾ)  ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಹಂಗಾಮಿಗೆ ಲೋಕಲೈಜ್ ಆದ ಅಚ್ಚುಕಟ್ಟಿನ ಕ್ಷೇತ್ರದಲ್ಲಿ ಮಿತ ನೀರಾವರಿ ಬೆಳೆಗಳಿಗೆ ನೀರು ಪೋಲಾಗದಂತೆ ತಡೆಯಲು ಸಹಕರಿಸುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಂ.೨ ಕಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರ ರಮೇಶ್ ಎಸ್.ವ್ಯಲ್ಲಾಪುರ ಮನವಿ ಮಾಡಿದ್ದಾರೆ.
     ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದರಿಂದ ತುಂಗಭದ್ರಾ ಜಲಾಶಯಕ್ಕೆ ಹರಿದುಬರುವ ಒಳ ಹರಿವಿನ ನೀರಿನ ಪ್ರಮಾಣವು ಕಡಿಮೆಯಾಗಿದ್ದು, ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅವಧಿಗೆ ಲಭ್ಯವಾಗುವ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮುಂಗಾರು ಹಂಗಾಮಿಗೆ ಲೋಕಲೈಜ್ ಆದ ಅಚ್ಚುಕಟ್ಟು ಪ್ರದೇಶದ ರೈತರು ಮಿತ ನೀರಾವರಿ ಬೆಳೆಗಳಿಗೆ ನೀರು ಪೋಲಾಗದಂತೆ ಉಪಯೋಗಿಸಲು ಹಾಗೂ ಇಲಾಖೆಯೊಡನೆ ಸಹಕರಿಸಿ, ನೀರಾವರಿ ನಿರ್ವಹಣೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಂ.೨ ಕಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರ ರಮೇಶ್ ಎಸ್.ವ್ಯಲ್ಲಾಪುರ ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಯಲಬುರ್ಗಾ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯಕ್ರಮ.
ಕೊಪ್ಪಳ, ಸೆ.೧೮ (ಕ ವಾ) ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯಕ್ರಮ ಸೆ.೧೫ ರಿಂದ ಆರಂಭಗೊಂಡಿದ್ದು, ೨೦೧೬ ರ ಜನವರಿ ೦೧ ಅರ್ಹತೆ ಆಧಾರದ ಮೇಲೆ ಈ ಪರಿಷ್ಕರಣೆ ಕಾರ್ಯಕ್ರಮ ನಡೆಯಲಿದೆ. ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯಕ್ರಮದ ವೇಳಾಪಟ್ಟಿ ಇಂತಿದೆ. ಕರಡು ಮತದಾರರ ಪಟ್ಟಿಗಳನ್ನು ಸೆ.೧೫ ರಂದು ಪ್ರಕಟಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆ.೧೫ ರಿಂದ ಅಕ್ಟೋಬರ್.೧೪ ರವರೆಗೆ ಅವಧಿ ನಿಗದಿಪಡಿಸಲಾಗಿದೆ. ಸೆ.೧೬ ಮತ್ತು ಸೆ.೩೦ ರಂದು ಸಂಬಂಧಪಟ್ಟ ಭಾವಚಿತ್ರವಿರುವ ಮತದಾರರ ಪಟ್ಟಿಗಳನ್ನು ಗ್ರಾಮ, ಪಟ್ಟಣ, ವಾರ್ಡ್‌ಗಳ ಸಭೆಗಳಲ್ಲಿ ಓದುವುದು. ಸೆ.೨೦ ಮತ್ತು ಅಕ್ಟೋಬರ್.೦೪ ವಿಶೇಷ ಆಂದೋಲನದ ದಿನಗಳಾಗಿವೆ. ಸ್ವೀಕೃತಿಗೊಂಡ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ನವೆಂಬರ್.೧೬ ರಂದು ವಿಲೇವಾರಿಗೊಳಿಸಲಾಗುವುದು ಮತ್ತು ೨೦೧೬ ರ ಜನವರಿ.೧೧ ರಂದು ಅಂತಿಮ ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗುವುದು.
     ಕರಡು ಮತದಾರರ ಪಟ್ಟಿಗಳನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಈ ಮತದಾರರ ಪಟ್ಟಿಗಳಿಗೆ ಸಾರ್ವಜನಿಕರು ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಸೆ.೧೫ ರಿಂದ ಅ.೧೪ ರವರೆಗೆ ಸಲ್ಲಿಸಬಹುದಾಗಿದೆ. ಈ ಅವಧಿಯಲ್ಲಿ ಹೆಸರನ್ನು ಹೊಸದಾಗಿ ನೋಂದಾಯಿಸಿಕೊಳ್ಳಲು ನಮೂನೆ-೬ ನ್ನು, ಈಗಾಗಲೇ ಮತದಾರನ ಹೆಸರನ್ನು ಸೇರ್ಪಡಿಸಿದ್ದಕ್ಕೆ ಯಾವುದಾದರೂ ಆಕ್ಷೇಪಣೆಯನ್ನು ಸಲ್ಲಿಸುವಂತಿದ್ದರೆ ಮತ್ತು ಪಟ್ಟಟಿಯ ಹೆಸರನ್ನು ತೆಗೆದುಹಾಕಲು ನಮೂನೆ-೭ ನ್ನು, ಪಟ್ಟಿಯಲ್ಲಿಯ ಹೆಸರು ಮುದ್ರಣದಿಂದಾಗಿ ಅಥವಾ ಯಾವುದೇ ಕಾರಣಗಳಿಂದಾಗಿ ತಪ್ಪಾಗಿ ಮುದ್ರಿತವಾದಂತಹ ಸಂದರ್ಭದಲ್ಲಿ ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಲು ನಮೂನೆ-೮ ನ್ನು ಪಟ್ಟಿಯಲ್ಲಿಯ ಹೆಸರನ್ನು ವಿಧಾನಸಭಾ ಕ್ಷೇತ್ರದ ಬೇರೆ ಪ್ರದೇಶಕ್ಕೆ ಅಥವಾ ಭಾಗಕ್ಕೆ ವರ್ಗಾವಣೆ ಮಾಡುವುದಕ್ಕೆ ನಮೂನೆ-೮ಎ ನ್ನು ಪಡೆದು, ಭರ್ತಿ ಮಾಡಿ, ಸಂಬಂಧಿಸಿದ ಮತಗಟ್ಟೆಗಳಲ್ಲಿಯ ಬೂತ್‌ಮಟ್ಟದ ಅಧಿಕಾರಿಗಳಿಗೆ ನೀಡಬಹುದಾಗಿದೆ. 
     ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು, ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ನಾಡ ಕಛೇರಿಗಳಲ್ಲಿ ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರನ್ನು, ಬೂತ್‌ಮಟ್ಟದ ಅಧಿಕಾರಿಗಳನ್ನು ಅಥವಾ ತಹಶೀಲ್ದಾರ ಕಛೇರಿ ಯಲಬುರ್ಗಾ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯಲಬುರ್ಗಾ ತಹಶೀಲ್ದಾರ ಶಿವಲಿಂಗಪ್ಪ ಪಟ್ಟದಕಲ್ಲು ತಿಳಿಸಿದ್ದಾರೆ.

Advertisement

0 comments:

Post a Comment

 
Top