PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-21- ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ೨೦ ದಿನಗಳ ಕಾಲ ಕೊಪ್ಪಳ ಜಿಲ್ಲಾ ಸ್ಪೋರ್ಟ್ಸ್ ಅಕ್ಯಾಡೆಮಿ (ರಿ) ವತಿಯಿಂದ ಆ.೩೦ ರಿಂದ ಸೆ.೨೦ ರವರೆಗೆ ಜರುಗಿದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕೊಪ್ಪಳದ ಪ್ರಿನ್ಸ್ ಅಶೋಕ ಕ್ರಿಕೆಟ್ ತಂಡ ಹಾಗೂ ಗಂಗಾವತಿಯ ಬಾಷಾ ಕ್ರಿಕೆಟ್ ತಂಡ ಪೈನಲ್‌ಗೆ ಪ್ರವೇಶಿಸಿದ್ದು, ಸೆ.೨೦ ರ ಭಾನುವಾರ ಜರುಗಿದ ಗವಿಶ್ರೀ ಕಪ್-೨೦೧೫ ರ ಕ್ರಿಕೆಟ್ ಟೂರ್ನಾಮೆಂಟ್‌ನ ಪೈನಲ್ ಪಂದ್ಯದಲ್ಲಿ ಗಂಗಾವತಿಯ ಬಾಷಾ ಕ್ರಿಕೆಟ್ ಕ್ಲಬ್ ತಂಡದವರು ಕಪ್‌ನ್ನು ತಮ್ಮ ಮಡಿಲಿಗೆ ಹಾಕಿಕೊಂಡು ಪ್ರಥಮ ಸ್ಥಾನ ಗಳಿಸಿದರೆ, ಕೊಪ್ಪಳದ ಪ್ರಿನ್ಸ್ ಅಶೋಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.  ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಗಂಗಾವತಿ ತಂಡ ನಿಗದಿತ ೧೨ ಓವರ್‌ಗಳಲ್ಲಿ ಕೊಪ್ಪಳ ತಂಡ ಗಳಿಸಿದ ೧೦೧ ರನ್‌ಗಳ ಬೆನ್ನಟ್ಟಿದ ಗಂಗಾವತಿ ತಂಡ ೯.೩ ಓವರ್‌ಗಳಲ್ಲಿ ನಿಗದಿತ ಗುರಿಯನ್ನು ತಲುಪಿ ಗವಿಶ್ರೀ ಕಪ್-೨೦೧೫ ನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಕೊಪ್ಪಳ ತಂಡದ ಪರವಾಗಿ ಮೊಯಿದ್ದೀನ್ ವರ್ದಿ-೩೦(೧೯), ಅಮಿತ್-೧೫ (೧೪) ಇವರ ಬ್ಯಾಟಿಂಗ್ ಸಹಾಯದಿಂದ ಉತ್ತಮವಾದ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು. ಗಂಗಾವತಿ ತಂಡದ ಪರವಾಗಿ ರಬ್ಬಾನಿ ಹಾಗೂ ಸಂತೋಷರವರ ಉತ್ತಮ ದಾಳಿಯಿಂದ ಕೊಪ್ಪಳ ತಂಡವನ್ನು ೧೦೦ ರನ್‌ಗಳಿಗೆ ಕಟ್ಟಿ ಹಾಕಲು ಯಶಸ್ವಿಯಾಯಿತು.
    ೧೦೧ ರನ್‌ಗಳ ಬೆನ್ನಟ್ಟಿದ ಗಂಗಾವತಿ ತಂಡದ ಅರ್ಜುನ-೫೨(೧೭), ದೇವರಾಜ ಕೋಟೆ-೨೧*(೧೬), ಸಮೀರ್-೧೦(೧೧) ಇವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಕೇವಲ ೯.೩ ಓವರ್‌ಗಳಲ್ಲಿ ನಿಗದಿತ ಮೊತ್ತವನ್ನು ಬೆನ್ನತ್ತಿ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಿತು.
ಈ ಟೂರ್ನಾಮೆಂಟ್‌ನಲ್ಲಿ ಸರಣಿ ಶ್ರೇಷ್ಠ-ಮೊಯಿದ್ದೀನ್ ವರ್ದಿ, ಬೆಸ್ಟ್ ಬ್ಯಾಟ್ಸಮನ್-ಅರ್ಜುನ್, ಬೆಸ್ಟ್ ಕ್ಯಾಚ್-ರಸೂಲ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್-ಅರ್ಜುನ್, ಬೆಸ್ಟ್ ಬೌಲರ್-ಬಾಬು ಪಡೆದುಕೊಂಡಿದ್ದಾರೆ. ಪ್ರಥಮ ಬಹುಮಾನ ೫೦,೦೦೧ ನಗದು ಬಹುಮಾನ ಮತ್ತು ಟ್ರೋಪಿ ಅದರಂತೆ ದ್ವಿತೀಯ ಬಹುಮಾನ ೨೫೦೦೧ ನಗದು ಮತ್ತು ಟ್ರೋಪಿ ವಿಜೇತ ತಂಡಗಳಿಗೆ ವಿತರಿಸಲಾಯಿತು. ಈ ಟೂರ್ನಾಮೆಂಟ್‌ನಲ್ಲಿ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಿದ್ದರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ಜುಲ್ಲು ಖಾದರ ಖಾದ್ರಿ, ನಗರಸಭೆ ಪೌರಾಯುಕ್ತರಾದ ರಮೇಶ ಪಟ್ಟೇದಾರ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ, ವೈದ್ಯರಾದ ಡಾ.ಮಹೇಂದ್ರ ಕಿಂದ್ರೆ, ನಗರಸಭೆ ಸದಸ್ಯರಾದ ಮೀನಾಕ್ಷಮ್ಮ, ವಕೀಲರಾದ ಸತೀಶ, ಸುರೇಶ ಗೌಡ, ಉದ್ಯಿಮೆದಾರರಾದ ಶ್ರವಣ ಶರ್ಮಾ, ಈಶಣ್ಣ ಕೊರ್ಲಹಳ್ಳಿ, ಬಸವರಾಜ ಇಂದರಗಿ, ಅಮೃತ ಡಂಬಳ, ಖಾದರ ಪಟೇಲ್, ಸತೀಶ ಮಂಗಳೂರು, ಹೊಸಪೇಟೆ ಸ್ಟೀಲ್ಸ್‌ನ ಡಿ.ದಾಸ್ ಮತ್ತು ಅರುಣಕುಮಾರ, ಪತ್ರಕರ್ತ ಎಂ.ಸಾದಿಕ್ ಅಲಿ ಸೇರಿದಂತೆ ಜಿಲ್ಲಾ ಸ್ಪೋರ್ಟ್ಸ್ ಕ್ಲಬ್‌ನ (ರಿ) ಆಯೋಜಕರಾದ ಮಂಜುನಾಥ ಕರ್ಕಿಹಳ್ಳಿ, ನಿಂಗರಾಜ್ ಮೂಗಿನ, ಮಲ್ಲಿಕಾರ್ಜುನ ಬೆಲ್ಲದ್, ಶಿವಕುಮಾರ, ರಾಘವೇಂದ್ರ ಬಡಿಗೇರ ಅನೇಕರು ಉಪಸ್ಥಿತರಿದ್ದರು. ಪಂದ್ಯದ ನಿರೂಪಣೆಯನ್ನು ಖಲೀಲ್ ಪಟೇಲ್ ಅವರು ನಿರ್ವಹಿಸಿದರು. ಹನುಮಂತ ಟಾಂಗದ ಕೊನೆಯಲ್ಲಿ ವಂದಿಸಿದರು.

Advertisement

0 comments:

Post a Comment

 
Top