ಕೊಪ್ಪಳ, ಸೆ.೦೨ (ಕ ವಾ) ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಸೆ.೦೪ ರಂದು ಬೆಳಿಗ್ಗೆ ೧೦ ರಿಂದ ೧೧.೪೫ ಗಂಟೆಯವರೆಗೆ ರಾಷ್ಟ್ರಾದ್ಯಂತ ಶಾಲಾ ಮಕ್ಕಳ ಜೊತೆ ನೇರ ಸಂಭಾಷಣೆಯನ್ನು ನಡೆಸಲಿದ್ದಾರೆ.
ಈ ನೇರಸಂಭಾಷಣೆ ಕಾರ್ಯಕ್ರಮವು ದೂರದರ್ಶನದ ಎಲ್ಲಾ ಚಾನೆಲ್‌ಗಳ ಮೂಲಕ, ಆಕಾಶವಾಣಿಯ ಮೀಡಿಯಂ ತರಂಗಾಂತರ, ಪ್ರಧಾನ ಮಂತ್ರಿಗಳ ಎಂ.ಹೆಚ್.ಆರ್.ಡಿ ವೆಬ್‌ಸೈಟ್ ಹಾಗೂ ಎಂ.ಹೆಚ್.ಆರ್.ಡಿ ಅವರ ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಕಡ್ಡಾಯವಾಗಿ ಎಲ್ಲಾ ಶಾಲೆಯ ಮಕ್ಕಳು ವೀಕ್ಷಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಮಕ್ಕಳು ವೀಕ್ಷಿಸಲು ಅನುಕೂಲವಾಗುವಂತೆ ಅಗತ್ಯ ಟಿ.ವಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ್ ತಿಳಿಸಿದ್ದಾರೆ.

0 comments:
Post a Comment