ಕೊಪ್ಪಳ, ಆ.೨೫ (ಕ ವಾ) ಕೊಪ್ಪಳ ನಗರಸಭೆಯ ಶೇಕಡಾ ೨೨.೭೫ ಯೋಜನೆಯಡಿ ೨೦೧೩-೧೪ನೇ ಸಾಲಿನಲ್ಲಿ ಬಾಕಿ ಉಳಿದಿರುವ ಅನುದಾನದಡಿ ಶೌಚಾಲಯ ನಿರ್ಮಿಸಿಕೊಳ್ಳಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಂಗವಿಕಲ ಫಲಾನುಭವಿಗಳಿಗೆ ಸಹಾಯಧನ ಒದಗಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ಸಹಾಯಧನ ಒದಗಿಸುವುದಕ್ಕಾಗಿ ಈ ಹಿಂದೆ ೧೫ ಜನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಈವರೆಗೆ ಕೇವಲ ೦೪ ಅರ್ಜಿಗಳು ಮಾತ್ರ ಸ್ವಿಕೃತವಾಗಿದ್ದು, ಬಾಕಿ ಉಳಿದ ೧೧ ಫಲಾನುಭವಿಗಳಿಗಾಗಿ ಈಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ ಕಾರ್ಡ್, ಕುಟುಂಬದ ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಸ್ತಿ ಕರ ಪಾವತಿಸಿದ ರಶೀದಿ, ಅಂಗವಿಕಲತೆ ಹೊಂದಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ, ಇತ್ತೀಚಿನ ೦೨ ಪಾಸ್‌ಪೋರ್ಟ್ ಸೈಜಿನ ಭಾವಚಿತ್ರ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ, ಲಗತ್ತಿಸಿ ಈ ಕಾರ್ಯಾಲಯಕ್ಕೆ ಸಲ್ಲಿಸಬಹುದು. ಮನೆಯಲ್ಲಿ ಅಂಗವಿಕಲರಿದ್ದಲ್ಲಿ ಮನೆಯ ಮಾಲೀಕರು ಹಾಗೂ ಅಂಗವಿಕಲರ ಜಂಟಿ ಸಹಭಾಗಿತ್ವದಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆ.೦೭ ಕೊನೆ ದಿನಾಂಕವಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದ್ ತಿಳಿಸಿದ್ದಾರೆ.
0 comments:
Post a Comment