ಹೊಸಪೇಟೆ- ಬೇಡ ಜಂಗಮ ಸಮಾಜವು ವಿಶೇಷ ಮೀಸಲಾತಿ ಗಾಗಿ ನಡೆಸುತ್ತಿರುವ ಹೋರಾಟವು ಕೊನೆಯ ಹಂತದಲ್ಲಿದ್ದು ಇದರಿಂದ ಮುಂದೆ ಸಮಾಜಕ್ಕೆ ಶುಭ ದಿನಗಳು ಬರಲಿವೆ ಎಂದು ಸಮಾಜ ಸಂಸ್ಥೆಯ ರಾಜ್ಯಾಧ್ಯಕ್ಷ ಕೆ.ಎಂ.ವಿಶ್ವನಾಥ್ ಹೇಳಿದರು. ನಗರದಲ್ಲಿ ಭಾನು ವಾರ ಹೊಸಪೇಟೆ ತಾಲೂಕು ಬೇಡ ಜಂಗಮ ಸಮಾಜ ಸಂಸ್ಥೆಯಿಂದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಉತ್ತಮ ವಿದ್ಯಾರ್ಥಿಗಳಿಗೆ ಪುರಸ್ಕರಿಸು ವುದರ ಜೊತೆ ಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರು ಉತ್ತಮ ಅಂಕ ಗಳಿಸುವಲ್ಲಿ ಪೋಷಕರ ಪಾತ್ರ ಅತಿ ಮುಖ್ಯವಾಗಿದ್ದು ಪ್ರತಿಭಾ ವಂತರನ್ನು ಗುರುತಿಸಿ ಪುರಸ್ಕರಿಸಿ ಸನ್ಮಾನಿಸುವುದು ಸಮಾಜವು ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹವಾಗಿದೆ, ಶಿಕ್ಷಣ ತರಬೇತಿಗೆ ಹೆಚ್ಚು ಅದ್ಯತೆ ನೀಡಬೇಕು. ಸಮಾಜದ ಎಲ್ಲಾ ಸ್ತರಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದರು. ಕರ್ನಾಟಕ ರಾಜ್ಯ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ರಾಜ್ಯ ಪ್ರಚಾರ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಲಿಂಗಾಯಿತ ಜಂಗಮರೇ ಬೇಡ ಜಂಗಮರು. ಜಂಗಮರು ಬೇಡುವ ಮೂಲಕ ಸಮಾಜದ ಶೈಕ್ಷಣಿಕ ಹಸಿವು ಹಿಂಗಿಸುವ ದಾಸೋಹವನ್ನು ನಾಡಿನಾ ದ್ಯಂತ ನೀಡುತ್ತಾ ಬಂದಿದ್ದೇವೆ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಮರಿಯಮ್ಮನ ಹಳ್ಳಿಯ ಕೆ.ಬಿ. ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿ, ಗರಗ-ನಾಗಲಾಪುರದ ಮರಿಮಹಾಂತ ಮಹಾ ಸ್ವಾಮಿ ವಹಿಸಿದ್ದರು. ಸಮಾರಂಭದಲ್ಲಿ ಶಾಸಕ ಆನಂದ್ ಸಿಂಗ್‌ರ ಅನುಪಸ್ಥಿತಿಯಲ್ಲಿ ಆಪ್ತ ಕಾರ್ಯದರ್ಶಿ ಶಿವುಕುಮಾರ್ ಹಿರೇಮಠ ಸಂದೇಶದ ಪತ್ರ ವನ್ನು ಓದಿದರು. ಧರ್ಮೇಂದ್ರ ಸಿಂಗ್ ಮಾತನಾಡಿ ಮುಂದಿನ ದಿನಮಾನಗಳಲ್ಲಿ ಸಮಾಜದ ಕಾರ್ಯಕ್ರಮಗಳು ಬೃಹತ್ ಮಟ್ಟದಲ್ಲಿ ನಡೆಯಲಿ ಎಂದು ಆಶಿಸಿದರು. ಜಂಗಮರು ಪೂಜನೀಯ ಸ್ಥಾನದಲ್ಲಿದ್ದು ಇಂದಿಗೂ ಹಿರೇಮಠಗಳೆಂದು ಹಲವಾರು ಪ್ರದೇಶಗಳಲ್ಲಿ ಪ್ರಚಲಿತದಲ್ಲಿವೆ, ಅವುಗಳನ್ನೇ ಹಳ್ಳಿಗರು ತಮ್ಮ ಕಷ್ಟ ಕಾರ್ಪಣ್ಯಗಳನ್ನ ತೀರಿಸುವ ನ್ಯಾಯಾ
ಎಲ್ಲಾ ಸಮಾಜದಲ್ಲಿ ಇರುವಂತೆ ಮಧ್ಯ ವರ್ಗ ಹಾಗೂ ಕಡು ಬಡವರು ಬೇಡ ಜಂಗಮ ಸಮಾಜದಲ್ಲಿದ್ದು ಅವರಿಗೆ ಮೀಸಲಾತಿಯಿಂದ ಲಾಭವಾಗುವುದು. ಬೇರೆ ಜನಾಂಗದ ಹಕ್ಕುಗಳನ್ನಾಗಲಿ ಅಥವಾ ಮೀಸಲಾತಿಯನ್ನಾಗಲಿ ಪ್ರಶ್ನಿಸುತ್ತಿಲ್ಲ ಅದನ್ನ ವಿರೋಧಿಸುವುದು ಇಲ್ಲ ಸಮಾಜಕ್ಕೆ ದೊರೆಯಬೇಕಾದ ಕ್ಕಿಗೆ ಆಗ್ರಹಿಸುತ್ತಿದ್ದೇವೆ ಎಂದು ಬೇಡಜಂಗಮ ಸಮಾಜದ ಅಧ್ಯಕ್ಷೆ ರೇಖಾ ಪ್ರಕಾಶ್ ತಿಳಿಸಿದರು. ಬೇಡ ಜಂಗಮ ಸಮಾಜದ ಗೌರವಾಧ್ಯಕ್ಷ ಗೊಗ್ಗ ವಿಶ್ವನಾಥಸ್ವಾಮಿ, ವಿಜಯಲಕ್ಷ್ಮೀ ಹಿರೇಮಠ, ಕೆ.ಎಂ.ರೇಖಾ ಪ್ರಕಾಶ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹೆಚ್.ಎಂ. ವೀರಭದ್ರಶರ್ಮ, ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮಠ, ಜೆ.ಎಂ. ವಿಶ್ವನಾಥ ಸ್ವಾಮಿ, ಜಿಲ್ಲಾಧ್ಯಕ್ಷ ಉಮಾಶಂಕರ, ಗೊಗ್ಗ ಚನ್ನಬಸವರಾಜ, ಸಾಲಿ ಬಸವರಾಜ, ಕಂಪ್ಲಿಯ ಹೇಮಯ್ಯ ಸ್ವಾಮಿ, ರಾಮ ಸಾಗರದ ಪಂಪಯ್ಯ ಸ್ವಾಮಿ, ಕಮಲಾಪುರದ ಜೆ.ಎಂ. ಕಾಳೇಶ್ವರಯ್ಯ, ಎಂ.ಎಂ. ಹಳ್ಳಿಯ ವಸ್ತ್ರದ ವೀರಭದ್ರಯ್ಯ, ಗರಗ-ನಾಗಲಾಪುರದ ಪಂಪಯ್ಯ ಸ್ವಾಮಿ, ಡಣಾಪುರದ ವಿರೂಪಾಕ್ಷಯ್ಯ, ಹನುಮನ ಹಳ್ಳಿಯ ಬಿ.ಎಂ.ಎಸ್. ರುದ್ರಯ್ಯ ಮತ್ತಿತರರು ಹಾಜರಿದ್ದರು. ಅಧ್ಯಕ್ಷತೆಯನ್ನು ಎಸ್.ಎಂ. ಕಾಶೀನಾಥಯ್ಯ ವಹಿಸಿದ್ದರು. ಈ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಈಚೆಗೆ ನಿಧನರಾ ದ ಭಾರತ ರತ್ನ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಹಾಗೂ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿ ಕೊಂಡ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತರಿಗೆ ಸನ್ಮಾನ ನಡೆಸಲಾಯಿತು. ಸಂಜನಾ ಕಾತರಕಿ ಪ್ರಾರ್ಥಿಸಿದಳು,
ಲಯವನ್ನಾಗಿ ಮಾಡಿಕೊಂಡ ನಿದರ್ಶನಗಳಿವೆ, ಅವುಗಳು ತನ್ನದೇ ಆದ ಶಿಷ್ಯ ವೃಂದವನ್ನು ಹೊಂದಿದ್ದು, ಪ್ರಬಲವಾದ ಜನಸಂಖ್ಯೆಯನ್ನು ಹೊಂದಿರುವ ಜಂಗಮರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ಹೆರಬೇಕು ಎಂದು ಗರಗ-ನಾಗಲಾಪುರದ ಶ್ರೀ ಗುರುಒಪ್ಪತ್ತೇಶ್ವರ ಸ್ವಾಮಿ ಮಠದ ಶ್ರೀ ಮರಿಮಹಾಂತ ಮಹಾಸ್ವಾಮಿಗಳು ತಿಳಿಸಿ ಆರ್ಶೀವಚಿಸಿದರು.
0 comments:
Post a Comment