PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ-  ನಗರದಲ್ಲಿ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಸಂತೆಯಲ್ಲಿ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು ಪರದಾಡಿದರು.
    ಭಾನುವಾರ ಇಂದು  ಸಂತೆ ಮೈದಾನದಲ್ಲಿ  ಭರ್ಜರಿ ವ್ಯಾಪಾರ  ನಡೆಯುತ್ತಿತ್ತು ಆ ಸಮಯದಲ್ಲಿ ಏಕಾಏಕಿ ಸುಮಾರು ಒಂದು  ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ನಗರಸಭೆಯ ಹತ್ತಿರದ ಸಂತೆ ಮಾರುಕಟ್ಟೆಯಲ್ಲಿ ಎರಡು ಅಡಿಗಳಷ್ಟು ನೀರು ನಿಂತಿದ್ದು ಇದರಿಂದ ತರಕಾರಿ ಅಂಗಡಿಗಳಲ್ಲಿ ಸಗಟು ವ್ಯಾಪಾರ ಮಾಡುತ್ತಿದ್ದ ವಸ್ತುಗಳು ಸಂಪೂರ್ಣ ನೀರಿನಿಂದ  ಅವೃತ್ತವಾಗಿ ಕೊಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
    ಸೂಪ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮೇನ್ ಬಜಾರ್ ರಸ್ತೆ ಸಂಪರ್ಕಿಸುವ ಈ ದಾರಿಯ ಮಧ್ಯೆ ಆಳವಾದ ಹಳ್ಳಗಳಿದ್ದು ಅವುಗಳು ಸಂಪೂರ್ಣವಾಗಿ ಜಲವೃತ ವಾಗಿ ಸಂಚಾರಕ್ಕೆ ಅಡಚಣೆ ಯುಂಟಾಗಿತ್ತು, ಇದರಿಂದ ವಾಹನ ಸವಾರರು ಪರದಾಡಿದರಲ್ಲದೇ ವ್ಯಾಪಾರಿ ಗಳು ತಲೆ ಮೇಲೆ ಕೈ ಹೊತ್ತು ಕುತ್ತಿದ್ದ ದೃಶ್ಯಗಳು ಕಂಡು ಬಂದವು.    ಮಳೆಯಿಂದ ಸಂತೆ ಮೈದಾನ ನೀರಿನ ಹೊಂಡವಾಗಿ ಮಾರ್ಪಟಿತ್ತು.

Advertisement

0 comments:

Post a Comment

 
Top