PLEASE LOGIN TO KANNADANET.COM FOR REGULAR NEWS-UPDATES

ಏರುತಿವುದು ಹಾರುತಿವುದು ನೋಡು ನಮ್ಮ ಬಾವುಟ ಎಂಬ ಪದ್ಯ ಮೂಲಕ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ದೇಶಭಕ್ತಿಯನ್ನು ಜಾಗೃತಿಗೊಳಿಸಿದವರು ಕಯ್ಯಾರ ಕಿಞ್ಞಣ್ಣ ರೈ. ಅಖಿಲ ಕರ್ನಾಟಕದ ಮಹಾಕವಿ, ಶತಾಯುಷಿ, ನಾಡೋಜಾ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹರಾಟಗಾರರಾಗಿ, ಕರ್ಣಾಟಕಾಂತರ್ಗತ ತುಳುನಾಡಿನ ಮಣ್ಣಿನ ಮಗನಾಗಿ ಕನ್ನಡದ ಕಟ್ಟಾಳಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ, ನಿರಂತರವಾಗಿ ದುಡಿದ ರೈರವರು, ಅಖಿಲ ಭಾರತ ಮಟ್ಟದಲ್ಲಿ ಜರುಗಿದ ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 'ಕಾಸರಗೋಡು ಕನ್ನಡ ನಾಡಿಗೆ ಸೇರಿದರೆ ಅದೇ ನನ್ನ ಸಿಗುವ ದೊಡ್ಡ ಬಹುಮಾನ' 'ತುಳು ಹೆತ್ತಬ್ಬೆ, ಕನ್ನಡ ಸಲಹಿದ ತಾಯಿ' ಎಂದು ಹೇಳುತ್ತಿದ್ದ ರೈಗಳು ಈಗ ನೆನಪು ಮಾತ್ರ. ಕಯ್ಯಾರ ಕಿಞ್ಞಣ್ಣ ರೈ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ   ೦೮-೦೬-೧೯೧೫ ರಂದು. ದುಗ್ಗಪ್ಪ ರೈ ಮತ್ತು ದೈಯಕ್ಕೆರವರ ದಂಪತಿಗಳಿಗೆ ಜನಿಸಿದರು.ಇವರ ಧರ್ಮಪತ್ನಿ ಉಞ್ಞಕ್ಕ. ಇವರಿಗೆ ಆರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬದಿಯಡ್ಕ ಪೆರಡಾಲ "ಕವಿತಾ ಕುಟೀರ"ದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರು.   ರೈಯವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದಿದ್ದಾರೆ. ಎಂ.ಎ.,  ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು. ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕ ಜೀವನ ಆರಂಭಿಸಿ, ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನ ಎನ್ನುವ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ರೈಯವರು ಹರಿಜನ ಸೇವಕ ಸಂಘಟನೆಯಲ್ಲಿ ಕೆಲಸ ಮಾಡಿದ್ದು, ಸ್ಥಳೀಯ ಪಂಚಾಯತ್  ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದ್ದರು. ಕರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಬಹಳಷ್ಟು ಹೋರಾಟ ಮಾಡಿದ್ದರು. ಕನ್ನಡ, ತುಳು, ಕೊಂಕಣಿ ಮತ್ತು ಸಂಸ್ಕೃತ ಭಾಷೆಯಲ್ಲಿ ಸಾಹಿತ್ಯಿಕ ಕೃತಿ, ಕವನಗಳನ್ನು ರಚಿಸಿದ್ದ ರೈ ಅವರು ಮಕ್ಕಳ ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದರು. ಕನ್ನಡ ನೆಲ, ಜಲ,ಭಾಷೆ, ಗಡಿ ವಿಚಾರ ಬಂದಾಗಲೆಲ್ಲಾ ಯಾವ ಮುಲಾಜಿಲ್ಲದೆ ತಮ್ಮ ನಿಲುವನ್ನು ಅಭಿವ್ಯಕ್ತಿಸುತ್ತಾ ಹೋರಾಟದ ಮುಂಚೂಣಿಯಲ್ಲಿ ನಿಂತು ಯುವಕರನ್ನು ಹುರಿದುಂಬಿಸಿದವರು, ಗಾಂಧಿವಾದಿಯಾಗಿ, ಅಪ್ರತಿಮ ದೇಶಭಕ್ತನಾಗಿ, ಸಹಕಾರಿ ಚಳುವಳಿಯ ಹರಿಕಾರರಾಗಿ, ಕಿರು ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿಯನ್ನು ಬರೆದು ಸಾಹಿತ್ಯ ಲೋಕವನ್ನು ಬೆಳೆಸಿದ ಮಹಾನ್ ವ್ಯಕ್ತಿ/ಸಾಧಕರು ಕಿಞ್ಞಣ್ಣರೈರವರು.

ಗೌರವಪ್ರಶಸ್ತಿ/ಪುರಸ್ಕಾರಗಳು :

* ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೬೯    * ಅತ್ಯುತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ - ೧೯೬೯
* ಮಣಿಪಾಲ್ ಢ ಶಿಕ್ಷಣ ಅಕಾಡೆಮಿ ಗೌರವ ಫೆಲೋಶಿಪ್ - ೧೯೭೦
* ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ, ಗೌರವ ಸನ್ಮಾನ - ೧೯೯೮
* ಪೇಜಾವರ ಸಾಹಿತ್ಯ ಪ್ರಶಸ್ತಿ - ೨೦೦೪            * ಆಳ್ವಾಸ್ ನುಡಿಸಿರಿ ಪ್ರಶಸ್ತಿ - ೨೦೦೫  ಮತ್ತು
* ಮಂಗಳೂರು ವಿ.ವಿ. ಯಿಂದ ಗೌರವ ಡಾಕ್ಟರಟ        * ಆದರ್ಶ ರತ್ನ ಪ್ರಶಸ್ತಿ - ೨೦೦೬       
* ನಾಡೋಜ ಪ್ರಶಸ್ತಿ - ೨೦೦೬                * ಕರ್ನಾಟಕ ಏಕಿಕರಣ ಪ್ರಶಸ್ತಿ - ೨೦೦೭
* ಕನ್ನಡ ಸಾಹಿತ್ಯ ಪರಿಷತ್ ಗರವ ಫೆಲೋಶಿಪ್ - ೨೦೦೯        * ಪ್ರಥಮ ಗಡಿನಾಡ ರತ್ನ ಪ್ರಶಸ್ತಿ       
* ಪಂಪ ಪ್ರಶಸ್ತಿ                        * ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ






ಕಯ್ಯಾರರ ಸಾಹಿತ್ಯ ಕೃತಿಗಳು:   
    
ಕಾವ್ಯ: ಶ್ರೀಮುಖ, ಐಕ್ಯಗಾನ, ಪುನರ್ನವ, ಮಕ್ಕಳ ಪದ್ಯಮಂಜರಿ (೨ ಭಾಗ), ಚೇತನ, ಪಂಚಮೀ, ಮಹಾಕವಿ ಕುಮಾರನರ್ ಆಶಾನರ ಮೂರು ಖಂಡಕಾವ್ಯಗಳು, ಕೊರಗ ಮತ್ತು ಕೆಲವು ಕವನಗಳು, ಶತಮಾನದ ಗಾನ, ಗಂಧವತೀ, ಪ್ರತಿಭಾ ಪಯಸ್ವಿನೀ, ಎನ್ನಪ್ಪೆ ತುಳುವಪ್ಪೆ,

ಗದ್ಯ :  ರತ್ನರಾಶಿ, ಕ್ಷೀಶನ ಕಥೆಗಳು, ಅನ್ನದೇವರು ಮತ್ತು ಇತರೆ ಕಥೆಗಳು, ಪರಶುರಾಮ, ಕರ್ನಾಡು ಸದಾಶಿವರಾವ್ (ಜೀವನ ಚರಿತ್ರೆ), ನಾರಾಯಣ ಕಿಲ್ಲೆ (ಜೀವನ ಚರಿತ್ರೆ), ದುಡಿಮೆಯೇ ದೇವರು (ಆತ್ಮಕಥೆ), ಕನ್ನಡದ ಶಕ್ತಿ (ಸಂಪಾದಿತ), ಎ.ಬಿ.ಶೆಟ್ಟಿ (ಜೀವನ ಚರಿತ್ರೆ).

ನಾಟಕ: ವಿರಾಗಿನಿ,                   ಶಿಶು ಸಾಹಿತ್ಯ: ನವೋದಯ ವಾಚನಮಾಲೆ (೮ ಪುಸ್ತಕಗಳು)
ವ್ಯಾಕರಣ: ವ್ಯಾಕರಣ ಮತ್ತು ಪ್ರಬಂಧ (೪ ಭಾಗಗಳು, ೪ ಪುಸ್ತಕಗಳು)

ಸಾಹಿತ್ಯ ವಿಮರ್ಶೆ : ರಾಷ್ಟ್ರಕವಿ ಗೋವಿಂದ ಪೈ, ಗೋವಿಂದ ಪೈ ಸ್ಮೃತಿ-ಕೃತಿ, ಮಲಯಾಳ ಸಾಹಿತ್ಯ
              ಚರಿತ್ರಂ, ಸಂಸ್ಕೃತಿಯ ಹೆಗ್ಗುರುತುಗಳು, ಮಹಾಕವಿ ಗೋವಿಂದ ಪೈ, ಸಾಹಿತ್ಯ ದೃಷ್ಟಿ,

   ಇದಲ್ಲದೆ, ವಿವಿಧ ಪತ್ರಿಕೆಗಳಿಗೆ ಐದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಹೆಸರುಗಳಿಸಿದ್ದಾರೆ.

Advertisement

0 comments:

Post a Comment

 
Top