ಗಂಗಾವತಿ ತಹಸೀಲ್ದಾರ್ ಶ್ರೀ ವೆಂಕನಗೌಡ ಪಾಟೀಲರು ಉತ್ತಮ ಆಡಳಿತವನ್ನು ನೀಡಿದ್ದು, ಶಿಸ್ತಿನ ಸಿಪಾಯಿಯಾಗಿದ್ದಾರೆ. ಜನ ಸಾಮಾನ್ಯರ ಕೆಲಸಗಳಿಗೆ ಸದಾ ಸ್ಪಂದಿಸುತ್ತಿರುವ ಇವರು ದಲಿತರ ಹಿಂದುಳಿದವರ, ಅಲ್ಪಸಂಖ್ಯಾತರ ಕೆಲಸಗಳನ್ನು ಅತಿ ಶೀಘ್ರದಲ್ಲಿಯೇ ಮಾಡಿ ಕೊಡುತ್ತಿದ್ದ ಉತ್ತಮ ಅಧಿಕಾರಿಯಾಗಿದ್ದಾರೆ.ಗಂಗಾವತಿ ನಗರದಲ್ಲಿ ಹಾಗೂ ಸುತ್ತಮುತ್ತ ಅಕ್ರಮವಾಗಿ ಗಣಿಗಾರಿಕೆಗೆ ಬಿಗಿ ಕಾನೂನು ಕ್ರಮ ಜರುಗಿಸಿ ಸರಕಾರಕ್ಕೆ ಬಹಳಷ್ಟು ಕಂದಾಯ ಸಂಗ್ರಹಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆ ನಡೆಸುವವರಿಗೆ ಸಿಂಹಸ್ವಪ್ನವಾಗಿದ್ದ ವೆಂಕನಗೌಡರು ಅನ್ನಭಾಗ್ಯ ಯೋಜನೆ ಪಡಿತರದ ದುರುಪಯೋಗ ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಡುಗೆ ಅನಿಲ, ಸೀಮೆಎಣ್ಣೆ ಸಮರ್ಪಕವಾಗಿ ವಿತರಣೆಯಾಗುವಂತೆ ಕ್ರಮ ಜರುಗಿಸಿದ್ದಾರೆ. ಕಾರಣ ಇಂಥ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ನಮ್ಮ ಸಮಿತಿ ವಿರೋಧಿಸುತ್ತದೆ. ಇವರ ವರ್ಗಾವಣೆ ರದ್ದುಗೊಳಿಸಿ ಪುನಹ ಗಂಗಾವತಿಯಲ್ಲಿ ಕಾರ್ಯನಿರ್ವಹಿಸುವಂತೆ ನಮ್ಮ ಜನಜಾಗೃತಿ ಸಮಿತಿ ಒತ್ತಾಯಿಸುತ್ತದೆ ಎಂದು ಕೆ. ಗಣೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶರಣಬಸಪ್ಪ, ನಗರ ಘಟಕ ಅಧ್ಯಕ್ಷ ವಿರೇಶ, ಹೋಬಳಿ ಘಟಕದ ಅಧ್ಯಕ್ಷ ಯಮನೂರ ನಾಯಕ, ಸದಸ್ಯರಾದ ಸೋಮನಾಥ, ಯಮನೂರಿ, ಚಾಂದಪಾಷಾ , ಪರಶುರಾಮ ಹಾಜರಿದ್ದರು.
Home
»
Koppal News
»
koppal organisations
»
news
» ಗಂಗಾವತಿ ತಹಸೀಲ್ದಾರ್ ವರ್ಗಾವಣೆ ರದ್ದುಪಡಿಸಲು ವಿನಂತಿಸಿ ಜಿಲ್ಲಾಧಿಕಾರಿಗಳಿಗೆ ಮನವಿ.
Subscribe to:
Post Comments (Atom)
0 comments:
Post a Comment