ಗಂಗಾವತಿ-೧೨ : ದಿನಾಂಕ ೦೯-೦೮-೨೦೧೫ ರ ರವಿವಾರರಂದು ಗಂಗಾವತಿಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕೊಪ್ಪಳ ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಹೆಚ್. ನಾಯಕ ಸೋಮಸಾಗರ, ಹಾಗೂ ತಾಲೂಕಾಧ್ಯಕ್ಷರಾದ ಆಂಜನೇಯ ಭೋವಿ (ಅಂಜಿ) ನೇತೃತ್ವದಲ್ಲಿ ತಾಲೂಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಶೋಕ ವಿ ಪಾಟೀಲ್ ಗಂಗಾವತಿ., ಪ್ರಧಾನ ಕಾರ್ಯದರ್ಶಿಯಾಗಿ : ಸುರೇಶ ಪಾಟೀಲ್, ಸಹಕಾರ್ಯದರ್ಶಿಯಾಗಿ : ಬಸವರಾಜ ಬೆಲ್ಲದ, ಉಪಾಧ್ಯಕ್ಷರಾಗಿ : ವಿನೋದಕುಮಾರ ನಾಯಕ, ನಾಗೇಶ ಗುನ್ನಾಳ, ಶರೀಫ ಕಲ್ಗುಡಿ, ದೇವಾನಾಯಕ, ಸಂಘಟನಾ ಕಾರ್ಯದರ್ಶಿಯಾಗಿ, ಶಿವಯ್ಯಸ್ವಾಮಿ ನವಲಿ., ತಾಲೂಕ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ : ಮಹ್ಮದ ಸಾಬೀರ್, ತಾಲೂಕ ಅಲ್ಪಸಂಖ್ಯಾತರ ಉಪಾಧ್ಯಕ್ಷರಾಗಿ : ಖಾಸೀಂ ಮುದೇನೂರು, ತಾಲೂಕ ಎಸ್.ಸಿ/ಎಸ್.ಟಿ ಅಧ್ಯಕ್ಷರಾಗಿ ಗೋಪಿ ಮಲ್ಲಾಪುರ, ತಾಲೂಕ ಮಾಧ್ಯಮ ಮತ್ತು ಪ್ರಸರಣ ಕಾರ್ಯದರ್ಶಿ ಹಾಗೂ ಗಂಗಾವತಿ ನಗರ ಅಧ್ಯಕ್ಷರಾಗಿ ಸೈಯದ್ ಮುರ್ತುಜಾ, ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಲಕ್ಷ್ಮಣ ಕನಕಗಿರಿ ಇವರನ್ನು ನೇಮಕ ಮಾಡಲಾಯಿತು ಎಂದು ಗಂಗಾವತಿ ತಾಲೂಕ ಅಧ್ಯಕ್ಷರಾದ ಆಂಜನೇಯ ಭೋವಿ ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment