PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಆ. ೧೨. ಕರ್ನಾಟಕ ರಾಜ್ಯ ಅಸಂಘಟಿತ ಮುದ್ರಣ ಕಾರ್ಮಿಕರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ಇಂದು ಸಂಘದ ರಾಜ್ಯಾಧ್ಯಕ್ಷ ಎನ್. ರಾಜೇಂದ್ರ ಬಂಗೇರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಸನಸಾಬ ಹಿರೇಮಸೂತಿ ಗೌರವ ಅಧ್ಯಕ್ಷ, ಶರಣಪ್ಪ ನಾಯಕ ಅಧ್ಯಕ್ಷ, ಮಂಜುನಾಥ ಜಿ. ಗೊಂಡಬಾಳ ಕಾರ್ಯಾಧ್ಯಕ್ಷ, ಶೈಲಪ್ಪ ನಿಡಶೇಸಿ ಮತ್ತು ಚನ್ನಪ್ಪ ರೋಣದ ಉಪಾಧ್ಯಕ್ಷರು, ಗವಿಸಿದ್ದಯ್ಯ ಆರಾಧ್ಯಮಠ ಪ್ರಧಾನ ಕಾರ್ಯದರ್ಶಿ, ರಾಜಶೇಖರ ತಂಬ್ರಳ್ಳಿಮಠ ಸಂಘಟನಾ ಕಾರ್ಯದರ್ಶಿ, ಶ್ರೀನಿವಾಸ ಅಶ್ವತ್ಥಪುರ ಸಹ ಕಾರ್ಯದರ್ಶಿ, ಶರಣಯ್ಯ ಜುಕ್ತಿಮಠ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಜಿ. ಪ್ರಕಾಶ ದಾವಣಗೆರೆ, ಆನಂದ ಗೊಂಡಬಾಳ, ಸಿದ್ದಪ್ಪ ಏಳುರೊಟ್ಟಿ, ರಾಜಾಹುಸೇನ ಕಾತರಕಿ, ಪಾಂಡುರಂಗ ಭಾಗ್ಯನಗರ, ಮಲ್ಲಯ್ಯಸ್ವಾಮಿ, ಮಲಿಕ್‌ಜಾನ್, ಮಲ್ಲಿಕಾರ್ಜುನ ಕೆ. ಇತರರು ಇದ್ದರು. ಜಿಲ್ಲೆಯಲ್ಲಿರುವ ಎಲ್ಲಾ ಮುದ್ರಣ ಘಟಕಗಳ ಮಾಲಿಕರು ಮತ್ತು ಕಾರ್ಮಿಕರು ಸಂಘದ ಸದಸ್ಯರಾಗಿರುತ್ತಾರೆ, ಮುದ್ರಣ ಕ್ಷೇತ್ರದಲ್ಲಿರುವ ಎಲ್ಲರೂ ಅಸಂಘಟಿತ ಕಾರ್ಮಿಕರಾಗಿದ್ದು ಸರಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಸರಕಾರಿ ಸೌಲಭ್ಯದ ಜೊತೆಗೆ ಉತ್ತಮ ಜೀವನಕ್ಕೆ ಬೇಕಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವದು, ಮುದ್ರಣಕಾರರ ವಸತ ಕಾಲೋನಿ ಮಾಡುವದು, ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಮುಂತಾದ ಕಾರ್ಯಗಳನ್ನು ಸಂಘ ಮಾಡಲಿದೆ. ಡಾ|| ಬಿ. ಆರ್. ಅಂಬೇಡಕರ್  ಸರ್ಕಲ್ ಹತ್ತಿರವಿರುವ ವಿಶ್ವ ಸದಸನದ ಎರಡನೆ ಅಂತಸ್ತಿನಲ್ಲಿ ಸಂಘದ ಜಿಲ್ಲಾ ಕಛೇರಿಯನ್ನು ಆಗಸ್ಟ್ ೧೫ ರಂದು ಆರಂಭಿಸಲಾಗುವದು ತಿಳಿಸಿದ್ದಾರೆ.

Advertisement

0 comments:

Post a Comment

 
Top