PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳದ ನಗರ ಸಭೆ ಎಧುರಿಗೆ  ಇಂದು ಕುಡಿಯುವ ನೀರಿನ ಪೂರೈಕೆಗಾಗಿ ಒತ್ತಾಯಿಸಿ. ಎಸ್.ಯು.ಸಿ.ಐ(ಕಮ್ಯುನಿಸ್ಟ) ಪಕ್ಷದ ಸದಸ್ಯರಾದ ಮಾರುತಿ ಎನ್ ಹೋಸಮನಿ ಮಾತನಾಡುತ್ತಾ ದಿ- ೦೨.೦೭.೨೦೧೫ ಕೊಪ್ಪಳ ಬಡಾವಣೆಗಳಾದ ಕಾಳಿದಾಸ ನಗರ, ಕುವೆಂಪುನಗರ, ತೆಗ್ಗಿನಕೇರಿ, ಸಜ್ಜೆಹೊಲ, ದಿಡ್ಡಿಕೇರಾ, ಶ್ರೀ ಶೈಲನಗರ, ದೇವರಾಜ ಅರಸು ಕಾಲೋನಿ, ಕಲ್ಯಾಣ ನಗರ, ಗಣೇಶ ತಗ್ಗು, ಮುಂತಾದ ಎಲ್ಲಾ ಓಣಿಗಳಲ್ಲಿ ೧೦ ರಿಂದ ೧೫ ದಿನಕ್ಕೊಂದು ಭಾರಿ ನೀ
ರು ಬರುತ್ತದೆ. ಎಂದು ನಗರ ಸಭೆ ಎಧುರು ಎಸ್ ಯು ಸಿ ಐ-ಸಿ ವತಿಯಿಂದ ಪ್ರತಿಭಟನೆಮಾಡಲಾಗಿತ್ತು. ಆದರೆ ನಗರ ಸಭೆ ಜನರ ಆಕ್ರೋಶಕ್ಕೆ ಮಣಿದು ಕೆಲವು ದಿನಗಳು ಮಾತ್ರ ಸೂಕ್ತ ರೀತಿಯಲ್ಲಿ ಸ್ಪಂಧಿಸಿತು. ಇಗ ನಗರದಲ್ಲಿ ನೀರಿನ ಸಮಸ್ಯೆ ಯಥಾರೀತಿ ಮುಂದುವರೆದಿದಿದೆ. ಬೋರವೇಲ್ ಅಥವಾ ಕೈ ಬೋರ್‌ಗಳು ಕೂಡಾ ಸಮರ್ಪಕವಾಗಿಲ್ಲ. ಎಂದು ನುಡಿದರು. ನಂತರ ಮಾತನಾಡಿದ ಶರಣು ಅವರು  ಕಾಳಿದಾಸನಗರ ಮುಂತಾದ ಓಣಿಗಳಲ್ಲಿ ದಿನ ಬಿಟ್ಟು ದಿನ ನೀರು ಸರಬರಾಜು ಮಾಡುವುದು ಮತ್ತು ಶೌಚಾಲಯ ನಿರ್ಮಿಸಲು ಜಾಗವಿಲ್ಲದ ಕುಟುಂಬಗಳಿಗೆ ಸಾಮೂಹಿಕ ಶೌಚಾಲಯ ಕಟ್ಟಲು ಕ್ರಮ ಕೈಗೋಳ್ಳಬೇಕು ಎಂದು ಆಗ್ರಹಿಸಿದರು. ಸೂಕ್ತ ರೀತಿಯಲ್ಲಿ ನಗರಸಭೆ ಕ್ರಮ ಕೈಗೋಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉನ್ನತ ಹಂತದ ಹೋರಾಟವನ್ನು ಕೈಗೋಳ್ಳಲಾಗುವದೆಂದು ಹೇಳಿದರು. ನಂತರ ನಗರ ಸಭೆಯ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತ್ತು.
ಈ ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ(ಕಮ್ಯುನಿಸ್ಟ) ಪಕ್ಷದ ಶರಣು ಗಡ್ಡಿ, ಮಾರುತಿ ಎನ್ ಹೊಸಮನಿ, ರಮೇಶ ವಂಕಲಕುಂಟಿ. ವಿವಿಧ ಬಡಾವಣೆಗಳಿಂದ ಬಂದ ನಾಗರಿಕರಾದ ಶಂಕ್ರಪ್ಪ, ಮುನ್ನಂ ಬೇಗಂ, ರಜೀಯಾಬೇಗಂ, ಪ್ಯಾರಿಬೇಗಂ, ಮಂಜುಳಾ,ಮುಂತಾದವರು ಭಾಗವಹಿಸಿದ್ದರ.


Advertisement

0 comments:

Post a Comment

 
Top