ಕೊಪ್ಪಳ - ೧೪ ರಂದು ಕನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ರಾಜ್ಯ ಸಂಗಟನಾ ಸಮಿತಿ ವಿವಿದ ಬೇಡಿಕೆಗಳ ಒತ್ತಾಯಿಸಿ ಜಿಲ್ಲಾಡಳಿತದ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಬೇಡಿಕೆಗಳು ಮಾಡಿರುವ ಕಾಯ್ದೆಗೆ ನಿಯಮಗಳನ್ನು ರೂಪಿಸಬೇಕು. ದಲಿತರಾಗಿ ಯೋಜನೆ ರೂಪಿಸುವುದು, ಅವರಿಗಾಗಿ ಆರ್ಥಿಕ ಸಂಪನ್ಮೂಲ ಹಂಚಿಕೆ ಮಾಡುವುದು ಹಾಗೂ ಬಳಸುವುದಕ್ಕೆ ಸಂಬಂಧಿಸಿ ಸರ್ಕಾರವು ೨೭ ಡಿಸೆಂಬರ ೨೦೧೩ ರಲ್ಲೇ ಬೆಳಗಾವಿ ಅಧಿವೇಶನದಲ್ಲಿ ಎಸ್.ಸಿ\ಎಸ್.ಟಿ ಕಾಯ್ದೆ ಬಿಲ್ ಮಂಡಿಸಿ, ಅಧಿನಿಯಮ ಜಾರಿ ಮಾಡಿತು. ಕಾಯ್ದೆಯನ್ನು ಮಾಡಿತು. ಆದರೆ ಯಾವುದೇ ಕಾಯ್ದೆಯು ಜಾರಿಯಾಗಬೇಕು ಎಂದರೆ, ಅದನ್ನು ಜಾರಿ ಮಾಡುವ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸುವ ನಿಯಮಗಳು ರಚನೆ ಯಾಗಬೇಕು. ೨೦೧೩ರಲ್ಲಿ ಆಗಿರುವ ಕಾಯ್ದೆಗೆ ಇದುವರೆಗೆ ನಿಯಮಗಳನ್ನು ರಚಿಸಲಾಗಿಲ್ಲ. ಈ ಕುರಿತು ಆರ್ಥಿಕ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕೂಡಲೇ ನಿಯಮಗಳನ್ನು ರಚಿಸಬೇಕೆಂದು ಒತ್ತಾಯಿಸುತ್ತೇವೆ. ಯೋಜನೆಯ ಬಜೆಟ್ ಹಣವನ್ನು ೩೩ ಇಲಾಖೆಗಳಿಗೆ ಹಂಚಿಕೆ ಮಾಡುವುದರಿಂದ ಬಹುತೇಕ ಇಲಾಖೆಗಳಿಂದ ಸರಿಯಾಗಿ ಬಳಕೆಯಾಗದೆ ವರ್ಷದ ಕೊನೆಯಲ್ಲಿ ವಾಪಸಾಗುವದರಿಂದ ಸರಿಯಾಗಿ ಯೋಜನೆ ಜಾರಿಗೊಳ್ಳಲು ಏಕಗವಾಕ್ಷಿ ಯೋಜನೆ ಮಾಡಬೇಕು. ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಮಾದಿಗರ ಮನೆಗಳಿಗೆ ನುಗ್ಗಿ ಹಲ್ಲೆ, ದೌರ್ಜನ್ಯ ನಡೆಸಲಾಗಿದೆ. ಮತ್ತು ಕ್ಷೌರ ಮಾ
ಡುವ ವಿಚಾರದಲ್ಲಿ ಮಾದಿಗರ ಮೇಲೆ ದೌರ್ಜನ್ಯ ನಡೆದ ನಂತರ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಈ ಕುರಿತು ಸಿ.ಐಡಿ ತನಿಖೆ ಕೂಡಲೇ ಒಪ್ಪಿಸಬೇಕು. ಗಂಗಾವತಿ ತಾಲೂಕಿನ ಹೊಸಗುಡ್ಡದ ದಲಿತ ಮಹಿಳೆಹನುಮವ್ವಳನ್ನು ಅಪಹರಿಸಿ ವಿವಸ್ತ್ರಗೊಳಸಿ ಅಮಾನುಷವಾಗಿ ಸಾಮೂಹಿ ಅತ್ಯಾಚಾರ ಮಾಡಿದ್ದಲ್ಲದೇ ಕ್ರೂರವಾಗಿ ಕೊಂದು ಹಾಕಿ ಶವವನ್ನುಬೆಂಕಿಗೆ ಹಾಕಿ ಸುಟ್ಟು ಬೂದಿಮಾಡಿದ್ದಾರೆ ಈ ಪ್ರಕರಣವನ್ನು ಸಿ.ಐಡಿ ತನಿಖೆ ಕೂಡಲೇ ಒಪ್ಪಿಸಬೇಕು.ಇನ್ನು ಮುಂತಾದ ಹತ್ತು ಹಲವು ಬೇಡಿಕಡಗಳನ್ನು ಮುಂದಿಟ್ಟಿದ್ದಾರೆ. ಈ ಸಂದರ್ಭದಲ್ಲಿ ರಾಜಯ ಸಂಘಟನಾ ಸಂಚಾಲಕ ಶರಣಪ್ಪ ಲೇಬಗೇರಿ, ಜಿಲ್ಲಾ ಸಂಚಾಲಕರುಗಳಾದ ಹನಮಂತಪ್ಪ ವಕೀಲರು, ಶಿವಪ್ಪ ರಮನಹಳ್ಳಿ, ಮುದಕಪ್ಪ ಕೋಳಿ, ಪರುಶುರಾಮ ಮಲ್ಲಿಗವಾಡ, ಹನಮಂತ ಇಚಿಡಿ, ಖಜಾಮಚಿ ಸುರೇಶ ನೀರಲಗಿ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಮಂಜುನಾಥ ತೋಟಗಂಟಿ, ಕೊಪ್ಪಳ ತಾಲೂಕ ಸಂಚಾಲಕರುಗಳಾದ ವೆಂಕಟೇಶ ಭೋವಿ, ಶೇಖರಪ್ಪ ತಳಕಲ್ ಹುಲಗಿ, ಫಕೀರಪ್ಪ ಪೂಜಾರ, ವಿರುಪಾಕ್ಷಪ್ಪ ಚನ್ನದಾಸರ,ನಿಂಗಪ್ಪ ದೊಡ್ಡಮನಿ ಕಾಮನೂರ, ಕೆಂಚಪ್ಪ ಹಾಲಳ್ಳಿ, ವಿರುಪಣ್ಣ ಅರಸಿನಕೇರಿ, ರಾಮಣ್ಣ ಲೇಬಗೇರಿ ಮುಂತಾದವರು ಉಪಸ್ಥಿತರಿದ್ದರು.

0 comments:
Post a Comment