PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ - ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ನಗರದ ಶ್ರೀಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ಶ್ರಾವಣ ಮಾಸದ ನಿಮಿತ್ಯ ಶುಕ್ರವಾರದಿಂದ ನಗರದ ಕೇಂದ್ರೀಯ ಬಸ್ ನಿಲ್ದಾಣ,ಗಡಿಯಾರಕಂಬ, ಗವಿಸಿದ್ದೇಶ್ವರ ಮಠ, ಜಿಲ್ಲಾಡಳಿತ ಭವನ, ಗಂಜ್ ಸರ್ಕಲ್, ಸೇರಿದಂತೆ ವಿವಿಧ ಭಾಗಗಳಿಂದ ಸಿಟಿ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ದೇವಸ್ಥಾನ ಕಮೀಟಿಯು ತಿಳಿಸಿದೆ. ಮಳೆ ಮಲ್ಲೇಶ್ವರ ದೇವಸ್ಥಾನ ಐತಿಹಾಸಿಕವಾಗಿ ಸಾಕಷ್ಟು ಪ್ರಸಿದ್ದಿ ಪಡೆದಿದೆ ಈ ದೇವಸ್ಥಾನ ಸಾಕಷ್ಟು ಅಭಿವೃದ್ದಿ ಹೊಂದುತ್ತಿದ್ದು ನಿತ್ಯ ಸಾಕಷ್ಟು ಭಕ್ತಾಧಿಗಳು, ಪ್ರವಾಸಿಗರನ್ನು ಈ ದೇವಸ್ಥಾನ ಆಕರ್ಷಿಸುತ್ತಿದೆ,ನಿತ್ಯ ಪ್ರಸಾದ ವ್ಯವಸ್ಥೆಯನ್ನು ಇಲ್ಲಿ ಕೈಗೊಳ್ಳಲಾಗಿದೆ. ನೂತನ ಸಿಟಿ ಬಸ್‌ಗೆ ದೇವಸ್ಥಾನ ಕಮೀಟಿಯ ಮಿಶ್ರಿಮಲ್ಲು ರಾಜಪುರೋಹಿತ್, ಅಮರ್ ಸಿಂಗ್,ಶಿವು ಕೋಣಂಗಿ,ದೇವಪ್ಪ ಹಲಗೇರಿ, ಸಿದ್ದಯ್ಯ ಹಿರೇಮಠ, ಗವಿಸಿದ್ದಯ್ಯ ಹಿರೇಮಠ ಪೂಜೆ ಸಲ್ಲಿಸಿ ಚಾಲನೆ ನೀಡಿದರು ಎಂದು ದೇವಸ್ಥಾನ ಕಮೀಟಿ ಸದಸ್ಯ ಶರಣಪ್ಪ ನಿಟ್ಟಾಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top