PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. ೧೪ (ಕ ವಾ) ಕೊಪ್ಪಳದ ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸ್ವಯಂ ಚಾಲಿತ ಹವಾಮಾನ ಕೇಂದ್ರದ ಉದ್ಘಾಟನೆ ಆ. ೧೫ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಜರುಗಲಿದೆ.
     ಕೇಂದ್ರ ಸರ್ಕಾರದಿಂದ ಕೊಪ್ಪಳಕ್ಕೆ ಮಂಜೂರಾಗಿರುವ ಸ್ವಯಂ ಚಾಲಿತ ಹವಾಮಾನ ಕೇಂದ್ರದ ಉದ್ಘಾಟನೆಯನ್ನು ಸಂಸದ ಸಂಗಣ್ಣ ಕರಡಿ ಅವರು ನೆರವೇರಿಸುವರು.  ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಕೊಪ್ಪಳ ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
     ಕೊಪ್ಪಳದಲ್ಲಿ ಹವಾಮಾನ ಕೇಂದ್ರ ಇಲ್ಲದಿದ್ದರಿಂದ, ಕೊಪ್ಪಳಕ್ಕೆ ಸಂಬಂಧಿಸಿದಂತೆ ಇದುವರೆಗೂ ನಿಖರ ಹವಾಮಾನ ವರದಿ ಲಭ್ಯವಾಗುತ್ತಿರಲಿಲ್ಲ.  ಇದೀಗ ಜಿಲ್ಲಾಡಳಿತ ಭವನದ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸ್ವಯಂ ಚಾಲಿತ ಹವಾಮಾನ ಕೇಂದ್ರದಿಂದ, ಪ್ರತಿ ನಿತ್ಯ, ಇಲ್ಲಿನ ಕನಿಷ್ಟ-ಗರಿಷ್ಠ ಉಷ್ಣಾಂಶ, ತೇವಾಂಶ, ಗಾಳಿಯ ವೇಗ ಮತ್ತು ಒತ್ತಡ ಹಾಗೂ ಗಾಳಿಯ ದಿಕ್ಕು, ಮಳೆ ಮಾಪನ ಸೇರಿದಂತೆ ಹವಾಮಾನಕ್ಕೆ ಸಂಬಂಧಿತ ನಿಖರ ವರದಿ ಲಭ್ಯವಾಗಲಿದೆ.  ಉಪಗ್ರಹ ಆಧಾರಿತ ನಿಯಂತ್ರಣದಲ್ಲಿ ಇದು ಕಾರ್ಯ ನಿರ್ವಹಿಸುವುದರಿಂದ, ಹವಾಮಾನದ ಮಾಹಿತಿಯನ್ನು ಸಾರ್ವಜನಿಕರು
www.imdaws.com ಅಂತರ್ಜಾಲದಿಂದ ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ಬೆಂಗಳೂರಿನ ಹಿರಿಯ ಹವಾಮಾನ ತಜ್ಞ ಎಸ್.ಎನ್.ಆರ್. ಗೋಪಾಲ್ ಅವರು.

Advertisement

0 comments:

Post a Comment

 
Top