PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ- ನಗರದ ಹಂಸಾಂಬ ಶಾರದಾಶ್ರಮವು  'ಶ್ರೀಮಾತೆಯವರ ಜೀವನ ಮತ್ತು ಸಂದೇಶ ಈಗಿನ ಆಧುನಿಕ ಜೀವನಕ್ಕೆ ಹೇಗೆ ಪ್ರಸ್ತುತ' ಎನ್ನುವ ವಿಶೇಷ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು ಆಸಕ್ತರು  ಬಾಗವಹಿಸಬಹುದು.
ವಿಶೇಷತೆ : ಗುರು ಪೂರ್ಣಿಮೆಯ ನಂತರದ ನಾಲ್ಕು ತಿಂಗಳುಗಳ ಕಾಲ ಚಾತುರ್ಮಾಸವಿದ್ದು ಈ ಅವಧಿಯಲ್ಲಿ ಪುಣ್ಯ ಗ್ರಂಥಗಳ ಪಠಣದಿಂದ ಇಷ್ಟಾರ್ಥ ಸಿದ್ಧಿಯಾಗುವುದೆಂಬ ಪ್ರತೀತಿ ಇದ್ದು ಈ ಹಿನ್ನಲೆಯಲ್ಲಿ ಶ್ರೀಶಾರದಾ ಮಾತೆಯವರ ಜೀವನ ಚರಿತ್ರೆಯು ಸ್ಪೂರ್ತಿದಾಯವಾಗಿದ್ದು ಅಧ್ಯಯನ ವಿಷಯವಾಗಿದೆ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ  ರಂಗದವರು  ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ವಿಷಯಕ್ಕೆ ಸಂಬಂಧಿಸಿದಂತೆ ಪುಸಕ್ತಗಳು ಆಶ್ರಮದಲ್ಲಿ ಲಭ್ಯವಿದೆ ಎಂದು ಮಾತಾಜೀ ಪ್ರಬೋಧಮಯಿ ತಿಳಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಲ್ಚಿಸುವವರು ಸೆಪ್ಟೆಂಬರ್ ೧೫ರೊಳಗೆ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಿ ಪ್ರಬಂಧವನ್ನು  ಕಳುಹಿಸುವ ಕೊನೆಯ ದಿನಾಂಕ ೩೦-೧೧-೨೦೧೫ ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಹಂಸಾಂಬ ಶಾರದಾಶ್ರಮ, ಅಶ್ವಿನಿ ಕಣ್ಣಿನ ಆಸ್ಪತ್ರೆ ಹಿಂಭಾಗ, ಸಂಡೂರು ರಸ್ತೆ, ಹೊಸಪೇಟೆ-೫೮೩ ೨೦೩, ಮೊ.ಸಂ. ೯೦೦೮೩ ೭೩೧೨೩, ೯೪೮೧೧೫೯೨೯೫ಗೆ ಸಂಪರ್ಕಿಸ ಬಹುದು. ಅತ್ಯುತ್ತಮ ಐದು ಬರಹಗಳಿಗೆ ವಿಶೇಷ ಪುರಸ್ಕಾರವಿದ್ದು ಭಾಗವಹಿಸಿದ ಪ್ರತಿಯೊಬ್ಬರಿಗೂ ಆಕರ್ಷಕ ಬಹುಮಾನವಿದೆ ಎಂದು ಮಾತಾಜೀ ಕೋರಿದ್ದಾರೆ.

Advertisement

0 comments:

Post a Comment

 
Top