ಕೊಪ್ಪಳ, ಆ.೦೪ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಅವರಲ್ಲಿ ದೃಢ ವಿಶ್ವಾಸ ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹಮ್ಮಿಕೊಂಡಿರುವ ರೈತರ ಬದುಕು ಬೇಸಾಯ- ರೈತ ಬಂಧುಗಳಿಗೆ ಸಾಂತ್ವನ ಜಾಗೃತಿ ಜಾಥಾ ವಿಶೇಷ ವಾಹನಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಮಂಗಳವಾರದಂದು ಹುಲಿಗಿಯಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು, ಯಾವುದೇ ವ್ಯಕ್ತಿಯ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಿದ್ದು, ಸರ್ಕಾರ ನಿಮ್ಮೊಂದಿಗಿದೆ ಎಂಬುದನ್ನು ರೈತರು ಮರೆಯಬಾರದು. ರೈತರಲ್ಲಿ ಆತ್ಮವಿಶ್ವಾಸ ತುಂಬಿ, ಆತ್ಮಹತ್ಯೆಯ ಚಿಂತನೆಯಿಂದ ಅವರನ್ನು ಪಾರು ಮಾಡುವ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ಕೃಷಿ, ತೋಟಗಾರಿಕೆ, ಸಹಕಾರ ಹಾಗೂ ಜಿಲ್ಲಾ ಪಂಚಾಯತಿ ಇಲಾಖೆಗಳ ಸಹಕಾರದೊಂದಿಗೆ ಈ ವಿಶೇಷ ವಾಹನದ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ರೈತರು ಯಾವುದೇ ಸಾಲಬಾಧೆ ಅಥವಾ ನಷ್ಟದ ಕಾರಣಗಳಿಂದ ಹತಾಶರಾಗಬಾರದು. ರೈತರ ಎಲ್ಲ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿದ್ದು, ಅವರ ಹಿತ ಕಾಯಲು ಬದ್ಧವಾಗಿದೆ. ರೈತರು ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಈ ಸಂದರ್ಭದಲ್ಲಿ ಮನವಿ ಮಾಡಿದರು.
ರೈತರಲ್ಲಿ ಆತ್ಮವಿಶ್ವಾಸ ಹಾಗೂ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ರೈತರ ಬದುಕು ಬೇಸಾಯ- ರೈತ ಬಂಧುಗಳಿಗೆ ಸಾಂತ್ವನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ವಾರ್ತಾ ಇಲಾಖೆ ಆಯೋಜಿಸಿದ್ದು, ಮಾನವ ಜನ್ಮ ದೊಡ್ಡದು' ರೈತರ ಬದುಕು ಇನ್ನೂ ದೊಡ್ಡದು ಹತಾಶರಾಗಬೇಡಿ, ಆತ್ಮಸ್ಥೈರ್ಯ ರೂಢಿಸಿಕೊಳ್ಳಿ.....ಎಂಬ ಸಂದೇಶವನ್ನು ಸಾರುವ ಜಾಗೃತಿ ಜಾಥಾ ಕಾರ್ಯಕ್ರಮ ಆಗಸ್ಟ್ ೦೪ ರಿಂದ ೨೩ ರವರೆಗೆ ಇಪ್ಪತ್ತು ದಿನಗಳ ಕಾಲ, ದಿನಕ್ಕೆ ೦೫ ಗ್ರಾಮಗಳಂತೆ ಜಿಲ್ಲೆಯ ಒಟ್ಟು ೨೦೦ ಗ್ರಾಮಗಳಲ್ಲಿ ಜರುಗಲಿದೆ. ಸಾಲಬಾಧೆಯಿಂದ ಹೊರಬರಲಾಗದೆ, ಮಾನಸಿಕ ಖಿನ್ನತೆಗೆ ಒಳಗಾಗುವ ರೈತರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಕಾರ್ಯಕ್ರಮದ ಉದ್ದೇಶವಾಗಿದೆ. ರೈತರಿಗೆ ಸಾಲ ನೀಡಿದ ಲೇವಾದೇವಿಗಾರರು, ಅಥವಾ ಯಾರಿಂದಲಾದರೂ ಒತ್ತಡವಿದ್ದಲ್ಲಿ ಸಹಾಯಕ್ಕೆ ಮತ್ತು ಮಾಹಿತಿಗೆ ಆರೋಗ್ಯ ಸಹಾಯವಾಣಿ ೧೦೪ ಕ್ಕೆ ಅಥವಾ ರೈತರ ಸಹಾಯವಾಣಿ ೧೮೦೦-೪೨೫-೩೫೫೩ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಈ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ರೈತರ ಸಾಂತ್ವನ ಗೀತೆಗಳು, ಯಶಸ್ಸು ಕಂಡ ರೈತರ ಬದುಕಿನ ಚಿತ್ರಣ, ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ರೈತ ಬಾಂಧವರಿಗೆ ಮುಖ್ಯಮಂತ್ರಿಗಳ ಮನವಿ ಸಂದೇಶ ಸಾರುವ ವಿಡಿಯೋ ಚಿತ್ರಗಳು, ಮುಖ್ಯಮಂತ್ರಿಗಳ ಸಂದೇಶದ ಕರಪತ್ರ, ರೈತ ಜಾಗೃತಿ ಹಾಡುಗಳು, ಬೀದಿ ನಾಟಕ, ಜಾನಪದ ಸಂಗೀತ, ವಸ್ತುಪ್ರದರ್ಶನ ಮತ್ತಿತರ ಮಾಧ್ಯಮದ ಮೂಲಕ ರೈತರಲ್ಲಿ ಧೈರ್ಯವನ್ನು ತುಂಬುವಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ವಿವರಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ಧನ ಹುಲಿಗಿ, ಜಂಟಿ ಕೃಷಿ ನಿರ್ದೇಶಕ ರಾಮದಾಸ್, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಇತರೆ ಅಧಿಕಾರಿ, ಸಿಬ್ಬಂದಿಗಳು, ಚುನಾಯಿತ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

0 comments:
Post a Comment