ಯಲಬುರ್ಗಾ-27- ಸಮರ್ಪಕ ವಿದ್ಯುತ್ ನೀಡುವಂತೆ ತಾಲೂಕಿನ ರೈತರು ನಡೆಸುತ್ತಿದ್ದ ೪ನೇ ದಿನದ ಅನಿರ್ಧಿಷ್ಟ ಮುಷ್ಕರಕ್ಕೆ ತೆರೆ ಬಿದ್ದಿದ್ದು ಬಂಧ್‌ಕರೆ ಹಿನ್ನಲೆ ಶಾಸಕರು ಸ್ಥಳಕ್ಕೆ ಆಗಮಿಸಿ ಸಮರ್ಪಕ ವಿದ್ಯುತ್ ನೀಡುವಂತೆ ಜಿಲ್ಲಾ ಜೆಸ್ಕಾಂ ಎಇ ವಿರೇಶ ಅವರಿಗೆ ಸೂಚಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ನಂತರ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ರಾಜ್ಯದಲ್ಲಿ ೫ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಎದ್ದು ಕಾಣುತ್ತಿದ್ದು ಈ ವಿದ್ಯುತ್ ಸಮಸ್ಯೆ ರಾಜ್ಯದ ಎಲ್ಲೆಡೆಯಲ್ಲಿದೆ. ಈ ಸಮಸ್ಯೆಗೆ ರಾಜ್ಯ ಸರ್ಕಾರ ಅತೀ ಹೆಚ್ಚು ವಿದ್ಯುತ್ ಉತ್ಪಾದನೆಗೆ ಮುಂದಾಗುವ ಅವಶ್ಯಕತೆ ಇದೆ. ಅಧಿಕಾರಿಗಳು ರೈತರಿಗೆ ಸ್ಪಂಧಿಸಬೇಕು ಸತತ ನಾಲ್ಕು ದಿನಗಳಿಂದ ವಿದ್ಯುತ್ ನೀಡುವಂತೆ ರೈತರು ಹೋರಾಟ ಮಾಡುತ್ತಿದ್ದು ಇವರಿಗೆ ಜೆಸ್ಕಾಂ ಅಧಿಕಾರಿಗಳು ಸ್ಫಂಧಿಸಿ ದಿನದ ೮ಗಂಟೆ ಸಿಂಗಲ್ ಹಾಗೂ ೯ಗಂಟೆ ತ್ರೀಫೆಸ್ ವಿದ್ಯುತ್ ನೀಡಲು ತಾತ್ಕಲಿಕ ಎರಡು ದಿನಗಳ ಮಟ್ಟಿಗೆ ವಿದ್ಯುತ್ ನೀಡಲು ಮುಂದಾಗಿ ಬಳಿಕ ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ ತಂಗಡಗಿ ಅವರ ಗಮನಕ್ಕೆ ತಂದು ಈ ಕುರಿತು ಅಧಿಕಾರಿಗಳ ಸಭೆ ಕರೆಯುತ್ತೇನೆ ಎಂದು ಹೇಳಿದರು. ಯುವ ಮುಖಂಡ ನವೀನಕುಮಾರ ಗುಳಗಣ್ಣವರ ಮಾತನಾಡಿ, ರೈತರಿಗೆ ಅವಶ್ಯಕತೆಗೆ ತಕ್ಕಂತೆ ಸಮರ್ಪಕ ವಿದ್ಯುತ್ ದೊರಕಿಸುವ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು ಇದರಲ್ಲಿ ಯಾವ ರೀತಿಯ ವಿಳಂಬ ಮಾಡದೆ ಆಡಿದ ಮಾತಿನಂತೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಲು ಮುಂದಾಗಬೇಕು ಮತ್ತು ಈ ಕುರಿತು ಜಿಲ್ಲಾ ಜೆಸ್ಕಾಂ ಅಧಿಕಾರಿಯಿಂದ ಆದೇಶ ಪತ್ರ ಪಡೆದು ತಾಲೂ
ತಾಲೂಕ ರೈತ ಮುಖಂಡರಾದ ಶ್ರೀಕಾಂತಗೌಡ ಪಾಟೀಲ, ತಿರುಗುಣೆಪ್ಪ ಬೆಟಗೇರಿ, ಶಿವಪ್ಪ ವಾಗಿ, ರಮೇಶ ಬಳೂಟಗಿ, ರಸುಲಸಾಬ ದಮ್ಮೂರು, ಶರಣಯ್ಯ ಮುಳ್ಳುರಮಠ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ರೈತರು ಪಾಲ್ಗೊಂಡಿದ್ದರು.
ಕ ಜೆಸ್ಕಾಂ ಅಧಿಕಾರಿ ಶಿಘ್ರವೇ ತಾಲೂಕಿನೆಲ್ಲೆಡೆ ವಿದ್ಯುತ್ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಅಂಗಡಿ ಮುಂಗಟ್ಟುಗಳು ಬಂದ್ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ರೈತರ ಮುಷ್ಕರ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಳಿಕ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಇಲಾಖೆ ಸೂಕ್ತ ಬಂಧೊಬಸ್ತನ್ನು ಒದಗಿಸಿತ್ತು. ಬಳಿಕ ಕೊಪ್ಪಳ ಜೆಸ್ಕಾಂ ಎಇ ವಿರೇಶ ಅವರಿಗೆ ಮನವಿ ಸಲ್ಲಿಸಿದರು. ಈ ಮುಷ್ಕರದಲ್ಲಿ ಪಟ್ಟಣದ ಶ್ರೀಬಸವಲಿಂಗೇಶ್ವರ ಹಾಗೂ ಶ್ರೀಸಿಧ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮುಷ್ಕರದಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲಿಸಿದರು. ತಾಲೂಕ ರೈತ ಮುಖಂಡರಾದ ಶ್ರೀಕಾಂತಗೌಡ ಪಾಟೀಲ, ತಿರುಗುಣೆಪ್ಪ ಬೆಟಗೇರಿ, ಶಿವಪ್ಪ ವಾಗಿ, ರಮೇಶ ಬಳೂಟಗಿ, ರಸುಲಸಾಬ ದಮ್ಮೂರು, ಶರಣಯ್ಯ ಮುಳ್ಳುರಮಠ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ರೈತರು ಪಾಲ್ಗೊಂಡಿದ್ದರು.
0 comments:
Post a Comment