ಗದಗ-26- ಕಳೆದ ೪೧ ದಿನಗಳಿಂದ ಜಿಲ್ಲೆ ಸೇರಿದಂತೆ ವಿವಿದೆಡೆ ಕಳಸಾ ಬಂಡೂರಿ ಹಾಗೂ ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಈ ಬಗ್ಗೆ ರಾಜ್ಯದ ಸಂಸದರರು ಹಾಗೂ ಶಾಸಕರ ನಿಷ್ಕಾಳಜಿಯಿಂದ ಯೋಜನೆ ವಿಳಂಭವಾಗಿದೆ ಎಂದು ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ಸಯ್ಯದ್‌ಖಾಲೀದ್ ಕೊಪ್ಪಳ ಆರೋಪಿಸಿದರು. ಅವರು ಬುಧುವಾರ ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಕಳಸಾ ಬಂಡೂರಿ ಹಾಗೂ ಮಹಾದಾಯಿ ಯೋಜನೆ ಹೋರಾಟಕ್ಕೆ ಬೆಂಬಲಿಸಿ ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಯೋಜನೆ ಜಾರಿಗೆ ಸಂಬಂಧಿಸಿದಂತೆ ರಾಜ್ಯದ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು, ವಿಫಲವಾಗಿದೆ. ಇದರಲ್ಲಿ ರಾಜ್ಯದ ಸಂಸದರು, ಪ್ರಧಾನ ಮಂತ್ರಿಗಳಿಗೆ ಯೋಜನೆಯ ಮಹತ್ವ ತಿಳಿಸುವಲ್ಲಿ ವಿಫಲರಾಗಿದ್ದಾರೆ. ಇನ್ನು ಬಿಜೆಪಿಯವರಿಗೆ ಈ ಯೋಜನೆ ಕೇಲವ ರಾಜಕೀಯ ದಾಳವಾಗಿದೆ. ಉತ್ತರ ಕನಾಟಕದ ೪ ಜಿಲ್ಲೆಯ ೧೩ ತಾಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಯೋಜನೆ ಶಿಘ್ರ ಜಾರಿಯಾಗುವ ಅನಿವಾರ್ಯತೆ ಇದೆ ಎಂದು ಆಗ್ರಹಿಸಿದರು.ಯೋಜನೆಯಲ್ಲಿ ರಾಜಕೀಯ ಬೇಡ ಜನರ ಸಮಸ್ಯೆ ಹಾಗೂ ಅಭಿವೃದ್ಧಿಪರ ಕಾರ್ಯಗಳಿಗೆ ರಾಜಿಕೀಯವನ್ನು ಬೆರೆಸಬಾರದು. ಆದರೆ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದರಿಂದಾಗಿ ಯೋಜನೆ ವಿಳಂಬವಾಗಿದೆ. ಕೂಡಲೇ ಯೋಜನೆಯ ಬಗ್ಗೆ ಪುನ: ಮನವರಿಕೆ ಮಾಡಿಕೊಡಲು ಪ್ರಧಾನಿ ಬಳಿ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಬೇಕು. ಈ ಮೂಲಕ ಯೋಜನೆ ಜಾರಿಗೆ ಸರ್ವ ಪಕ್ಷದ ಮುಖಂಡರು ಪಕ್ಷ ಬೇಧ ಮರೆತು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಜನಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಸೊರಟೂರ ಹಿರೇಮಠದ ಫಕ್ಕಿರೇಶ್ವರ ಶ್ರೀಗಳು ಮಾತನಾಡಿ, ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರು, ಈತನಕ ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೋಂಡಿಲ್ಲ. ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೋಳ್ಳಬೇಕು. ಈ ಮೂಲಕ ಯೋಜನೆ
ಜಾರಿಗೆ ಒತ್ತಾಯಿಸಬೇಕು. ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಕಳೆದ ೪೦ ವರ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರೆ, ಇದು ಈ ರಾಜ್ಯದ ವಿಪರ್ಯಾಸವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಗಾಂಧಿ ವೃತ್ತದಲ್ಲಿ ಹಾಗೂ ಸಂಸದ ಶಿವಕುಮಾರ ಉದಾಸಿ ಅವರ ಕಾರ್ಯಾಲಯದ ಎದುರು ಮಾನವ ಸರಪಳಿ ನಿರ್ಮಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಯೋಜನೆಗೆ ಜಾರಿಗೆ ಒತ್ತಾಯಿಸಿ ಸಂಸದ ಶಿವಕುಮಾರ ಉದಾಸಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ನಬಿಸಾಬ ಕೊರ್ಲಹಳ್ಳಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪೂಜಾ ಬೇವೂರ, ಗೌರವಾಧ್ಯಕ್ಷ ವಿಜಯ ಮುಳಗುಂದ, ನಸರತ್ ಮುಲ್ಲಾನವರ, ಶಾಕೀರ ಕೌತಾಳ, ರವಿ ವಗ್ಗನವರ, ಸಮೀರ ಮುಳಗುಂದ, ಚಾಂದಸಾಬ ಜಕ್ಕಲಿ, ಸುಮಿತ್ರಾ ಗಂಗಾವತಿ, ಹನಮಮ್ಮ ಹಿರೇಹಾಳ, ತಾಹೀತಾಬೇಗಂ ಸೈಪಣ್ಣವರ, ಶಿವಣ್ಣ ಎಮ್ ಶಿವಶಿಂಪರ, ಶಿರಟ್ಟಿ ತಾಲೂಕಾ ಅಧ್ಯಕ್ಷರು ಶಿವು ಕರಡಿ ದೇವಕ್ಕ ಹೂಗಾರ, ಸುಮಾ ಶಿಂಧೆ, ಗೀತಾ ಇಂಗಳೇಮಹಾಂತೇಶ ಅಂಗಡಿ, ಮಹೇಶ ನಾಯಕ ಸೇರಿದಂತೆ ಇತರರು ಇದ್ದರು.
Home
»
Koppal News
»
koppal organisations
»
news
» ಸಂಸದರಿಗೆ ಮನವಿ ಸರ್ಕಾರದ ವಿರುದ್ಧ ಆಕ್ರೋಶ ಕಳಸಾ ಬಂಡೂರಿಗೆ ಬೆಂಬಲಿಸಿ ಕರ್ನಾಟಕ ಜನ ಶಕ್ತಿ ವೇದಿಕೆ ಪ್ರತಿಭಟನೆ.
Subscribe to:
Post Comments (Atom)
0 comments:
Post a Comment