PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ೨೬, ಕ್ಷೇತ್ರದ ಲೇಬಗೇರಿ ಜಿಲ್ಲಾ ಪಂಚಾಯತಿಯ ಗ್ರಾಮಗಳಾದ ಹನುಮನಹಳ್ಳಿ, ಟಣಕನಕಲ್, ಹಟ್ಟಿ, ಕಲಕೇರಿ, ದೇವಲಾಪುರ, ಚಿಲವಾಡಗಿ, ಮಾದಿನೂರು ಗ್ರಾಮಗಳಲ್ಲಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ಹಾಗೂ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ರಾಘವೇಂದ್ರ ಹಿಟ್ನಾಳರವರು ನಮ್ಮ ಭಾಗವು ೩೭೧ಜೆ ಕಲಂ ಗೆ ಒಳಪಡುವುದರಿಂದ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಉಜ್ವಲಾವಾಗಿದೆ. ಡಿ ಹಾಗೂ ಸಿ ಗ್ರೂಪ್ ಸರ್ಕಾರಿ ನೌಕರಿಯಲ್ಲಿ ಶೇ ೭೦% ರಷ್ಟು ಜನರಿಗೆ ಅನುಕೂಲವಾಗಲಿದೆ. ಕೊಪ್ಪಳ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಗೊಂಡಿದ್ದು, ಮುಂದಿನ ಆರ್ಥಿಕ ವರ್ಷದಿಂದ ಬಾನಾಪೂರದಲ್ಲಿ ತಾಂತ್ರಿಕ (ಇಂಜಿನಿಯರಿಂಗ್) ಕಾಲೇಜು ಪ್ರಾರಂಭಗೊಳ್ಳಲಿದೆ. ಆದ್ದರಿಂದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಇಲ್ಲಿ ಸಿಗುವ ಅವಕಾಶಗಳನ್ನು ಪಡೆದುಕೊಳ್ಳಬೆಕೆಂದು ಹೇಳಿದರು. ಹನುಮನಹಳ್ಳಿಯಿಂದ ಕಿಡದಾಳದವರೆಗೆ ರೂ.೨ ಕೋಟಿ ರಸ್ತೆ ಕಾಮಗಾರಿ ಹಾಗೂ ಟಣಕನಕಲ್ ಮೂರಾರ್ಜಿ ಶಾಲೆಯಿಂದ ಚಿಲವಾಡಗಿವರೆಗೆ ರೂ.೧.೮೦ ಲಕ್ಷದ ರಸ್ತೆ ಕಾಮಗಾರಿ ಕಾರ್ಯಕೈಗೆತ್ತಿಕೊಳ್ಳಲಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಕೈಜೋಡಿಸಿ ಸರ್ಕಾರದಿಂದ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.  ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ವನಿತಾ ಗಡಾದ, ಮುಖಂಡರಾದ ಪ್ರಸನ್ನ ಗಡಾದ, ಅಮ್ಜದ್ ಪಟೇಲ, ತಾ.ಪಂ. ಉಪಾಧ್ಯಕ್ಷ ಬಾಳಪ್ಪ ಬುದಗುಂಪಿ, ಓಜನಹಳ್ಳಿ ಗ್ರಾ. ಪಂ. ಅಧ್ಯಕ್ಷ  ಯಮನೂರಪ್ಪ ನಾಯಕ್, ಅಮರೇಶ ಉಪ್ಲಾಪುರ, ಶಿವಣ್ಣ ಚಳ್ಳಾರಿ, ಮುಕ್ಕಣ್ಣ ಚಿಲವಾಡಗಿ, ತಾ.ಪಂ. ಇಯೋ ಕೃಷ್ಣಮೂರ್ತಿ, ಅಭಿಯಂತರರಾದ ಎ.ಮಾಳಗಿ, ಆರ್.ಯೈ. ಮಂಜುನಾಥ ಹಲಗೇರಿ, ಜಸ್ಕಾಂ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗ್ರಾ.ಪಂ. ಸದಸ್ಯರುಗಳು, ಇತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top