PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ 14 ಕೊಪ್ಪಳ-ಬಳ್ಳಾರಿ-ರಾಯಚೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ  ಈ ಬಾರಿ ಕೊಪ್ಪಳ ತಾಲೂಕಿಗೆ ಒದಗಿ ಬಂದಿದ್ದು ಅತೀವ ಸಂತಸವೆನಿಸುತ್ತದೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದೊಂದಿಗೆ ಈ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಹೈನುಗಾರಿಕೆಯ ಮೂಲಕ ಆರ್ಥಿಕವಾಗಿ ಸಧೃಡಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೊಪ್ಪಳ ಬಳ್ಳಾರಿ ರಾಯಚೂರು ಹಾಲು ಒಕ್ಕೂಟದ ಅಧ್ಯಕ್ಷ ವೆಂಕನಗೌಡ ಹಿರೇಗೌಡ ಹೇಳಿದರು.
 ಅವರು ನಗರದ ಜಿಲ್ಲಾ ಸಹಕಾರಿ ಯುನಿಯನ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸನ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚುತ್ತದೆ ಎಂದರು. ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಶೇಖರ ಗೌಡ ಮಾಲೀಪಾಟೀಲ್ ಮಾತನಾಡಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಜಿಲ್ಲಾ ಸಹಕಾರಿ ಯುನಿಯನ್ ಕಚೇರಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದ್ದು ಸಂತಸವೆನಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕರಾದ ಗವಿಸಿದ್ದೇಶ ಹುಡೇಜಾಲಿ, ತೋಟಪ್ಪ ಕಾಮನೂರು, ಮುಖ್ಯ ಕಾರ್‍ಯನಿರ್ವಾಣಾಧಿಕಾರಿ ಶರಣಬಸಪ್ಪ ಕಾಟ್ರಳ್ಳಿ, ವ್ಯವಸ್ಥಾಪಕ ರಾಜಶೇಖರ ಹೊಸಮನಿ, ಗವಿಸಿದ್ದಯ್ಯ ಹಿರೇಮಠ, ಮಲ್ಲಯ್ಯ ಲೈನದ್, ಮತ್ತೀತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top