PLEASE LOGIN TO KANNADANET.COM FOR REGULAR NEWS-UPDATES

ನಮಗೆ ಸ್ವಾತಂತ್ರ್ಯ ಬಂದು ೬೯ ವರ್ಷಗಳಾದರು ದೇಶ ಅಭಿವೃದ್ದಿ ಹೊಂದದೆ ಇರುವದು ವಿಷಾದನೀಯ ಆದ್ದರಿಂದ ದೇಶ ಅಭಿವೃದ್ದಿ ಹೊಂದಬೇಕಾದರೆ ದೇಶದ ಪ್ರತಿಯೊಬ್ಬ ಪ್ರಜೆಯು ಶ್ರಮಿಸಬೇಕು  ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ: ಬಿ,ಎಸ್,ಹನಸಿ ಹೇಳಿದರು.   ಅವರು ಸ್ಥಳಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮಹಾ ವಿದ್ಯಾಲಯದ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ದೇಶ ನಮಗೆ ಏನು ಕೊಟ್ಟಿದೆ ಎಂಬವದಕ್ಕಿಂತ ದೇಶಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬವದನ್ನು ಮನಗಂಡು ಬದಕುಬೇಕು ಎಂದು ಹೇಳಿದರು. ನಂತರ ಮಾತನಾಡಿದ ಹಿಂದಿ ಬಿ.ಎಡ್.ಕಾಲೇಜಿನ ಪ್ರಾಚಾರ್ಯ ಎ.ಎಚ್.ಬಳ್ಳಾರಿ ಮಾತನಾಡಿ ದೇಶ ಸ್ವಾತಂತ್ರ್ಯಗೊಳ್ಳಬೇಕಾದರೆ ಅನೇಕ ಮಹಿನೀಯರು ಪ್ರಾಣ ತ್ಯಾಗ ಬಲಿದಾನಗಳಿಂದ ಮಗೆ ಸ್ವಾತಂತ್ರ್ಯ ಬಂದಿದೆ ಆದ್ದರಿಂದ ಇಂದಿನ ಯುವ ಪಿಳಿಗೆ ಬ್ರಿಟೀಷರನ್ನು ಭಾರತದಿಂದ ತೊಲಗಿಸಿ ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಿನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೆಕು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಕೆ.ನಾಗಬಸಯ್ಯ ಉಪನ್ಯಾಸಕ ಬಸವರಾಜ ಎಸ್.ಎಂ.ಬಸವರಾಜ ಅಳ್ಳೋಳಿ ಸೈಯದ ಉಪನ್ಯಾಶಕಿ ಶ್ರೀಮತಿ ಉಷಾದೇವಿ ಹಿರೇಮಠ ಶ್ರೀಮತಿ ಅಕಿಲಾ ಗಂಗಾವತಿ,ಶ್ರೀಮತಿ ಶಭಾನಬೇಗಂ ಸೇರಿದಂತೆ ಹಿಂದಿ ಬಿ,ಎಡ್.ಕಾಲೇಜಿನ ಹಾಗೂ ಕಾನೂನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Advertisement

0 comments:

Post a Comment

 
Top