PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- 13 ೮ನೇ ತರಗತಿಯ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಕರೆಯಲಾಗಿತ್ತು. ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ಗವಿಸಿದ್ದಪ್ಪ ವ್ಹೀ ಕೊಪ್ಪಳ ಇವರ ಅದ್ಯಕ್ಷತೆಯಲ್ಲಿ ನೆಡೆಯಿತು.  ಈ ನಾಡಿನಲ್ಲಿ ಅನ್ನ, ಅಕ್ಷರ ಬರದಿಂದ ಕಾಡುತ್ತಿದ್ದ ದಿನಗಳಲ್ಲಿ ಈ ನಾಡಿನ ಶ್ರೀಗಳಾದ ಶ್ರೀ.ಮ.ನಿ.ಪ್ರ.ಜ.ಲಿಂ ಮರಿಶಾಂತವೀರ ಮಹಾಸ್ವಾಮಿಗಳ ಪ್ರತಿಫಲವೇ ಇಂದು ಹೆಮ್ಮರವಾಗಿ ಬೆಳೆದು ನಿಮ್ಮೆಲ್ಲ ಮಕ್ಕಳಿಗೆ ಅನ್ನ-ಅಕ್ಷರ ಬರವನ್ನು ನೀಗಿಸುತ್ತಿದೆ.  ಅದೇರೀತಿ ತಮ್ಮ ಮಕ್ಕಳಿಗೆ ಒಳ್ಳೇಯ ಸಂಸ್ಕಾರ, ಹಿರಿಯರಿಗೆ ಗೌರವ ನೀಡುವದನ್ನು ಕಲಿಸಿರಿ.  ತಮ್ಮ ಮಕ್ಕಳಿಗಾಗಿ ನಾವು ನೀವುಗಳು ಶ್ರಮಿಸಿದರೆ ಅವರು ಮುಂದಿನ ದಿನಗಳಲ್ಲಿ ಮಾಣಿಕ್ಯಗಳಾಗುತ್ತಾರೆ ಎನ್ನುವದರಲ್ಲಿ ಎರೆಡು ಮಾತಿಲ್ಲ. ಮಕ್ಕಳಿಗೆ ಅನವಶ್ಯಕವಾಗಿ ಹಣವನ್ನು ನೀಡಬೇಡಿ, ಪ್ರೀತಿ ಮಮಕಾರದ ಜೊತೆಗೆ ಅವರಿಗೆ ಸಂಸ್ಕಾರವನ್ನು ನೀಡಿ.  ಶಾಲೆಯ ಎಲ್ಲಾ ಚಟುವಟಿಕೆಗಳನ್ನು ತಮ್ಮ ಮಕ್ಕಳಿಂದ ತಿಳಿದುಕೊಂಡು ಶಾಲೆಗೆ ಆಗಾಗ ಭೇಟಿಕೊಟ್ಟು ತಮ್ಮ ಮಕ್ಕಳ ಶೈಕ್ಷಣಿಕ ವಿಷಯಗಳನ್ನು ತಿಳಿದುಕೊಂಡು ಸಲಹೆ ಸೂಚನೆಗಳನ್ನು ನೀಡಬೇಕಾಗಿ ತಮ್ಮಲ್ಲಿ ಮನವಿ.  ಮಕ್ಕಳನ್ನು ಅನವಶ್ಯಕವಾಗಿ ಜಾತ್ರೆ, ಧಾರ್ಮಿಕ ಚಟುವಟಿಕೆ, ಹಬ್ಬ-ಹರಿದಿನಗಳಿಗೆ ಕರೆದುಕೊಂಡು ಹೋಗದಂತೆ ಅಭ್ಯಾಸದ ಕಡೆ ಹೆಚ್ಚು ಗಮನ ಕೊಡುವಂತೆ ಪ್ರೋತ್ಸಾಹಿಸಿ.  ಈ ಸಭೆಯಲ್ಲಿ ಅನೇಕ ಪಾಲಕರು ಸಲಹೆ-ಸೂಚನೆಗಳನ್ನು ನೀಡಿದರು.  ಪಾಲಕರ ಸಭೆಯ ನಂತರ ೮ನೇ ವರ್ಗದ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಿದ ಉಚಿತ ಸೈಕಲ್‌ಗಳನ್ನು ವಿತರಣೆ ಮಾಡಲಾಯಿತು.  ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಕವಿತಾ ವಿ.ಮನು ಮಾಡಿದರು, ಸ್ವಾಗತವನ್ನು ಶ್ರೀಮತಿ ರೇಣುಕಾ ಚಲುವಾದಿ ನಡೆಸಿದರು ಶಿಕ್ಷಕರ ಪರವಾಗಿ ಶ್ರೀ ಬಿ.ನಾಗರಾಜ ಮಾತನಾಡಿದರು ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ ವೈ.ಕೆ.ಡೇರಿಮನಿ ಶಿಕ್ಷಕರು ನಡೆಸಿದು.

Advertisement

0 comments:

Post a Comment

 
Top