PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಆ.೧೩ ಜನಸಾಮಾನ್ಯರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಣ್ಣ ಪತ್ರಿಕೆಗಳ ಪಾಲಿಗೆ ಮರಣ ಶಾಸನವೆನಿಸಿರುವ ಜಾಹೀರಾತು ನೀತಿ ತಿದ್ದುಪಡಿ ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದ ನೇತೃತ್ವದಲ್ಲಿ ಇಂದು ಜಿಲ್ಲೆಯ ಪತ್ರಕರ್ತರು ಪ್ರತಿಭಟನೆ ನಡೆಸಿದರು. 
    ಬೆಳಿಗ್ಗೆ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿದ ಪತ್ರಕರ್ತರು, ರಾಜ್ಯದ ಸಣ್ಣ ಪತ್ರಿಕೆಗಳ ನಾಶಕ್ಕೆ ಸಜ್ಜಾಗಿ ನಿಂತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ವಿಶುಕುಮಾರ್ ಅವರನ್ನು ಬದಲಾಯಿಸುವಂತೆ, ಜಾಹೀರಾತು ನೀತಿ ತದ್ದುಪಡಿ ರದ್ದುಗೊಳಿಸುವುದೂ ಸ್ಭೆರಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಐಎಎಸ್ ದರ್ಜೆಯ ಆಯುಕ್ತರನ್ನು ನೇಮಕ ಮಾಡುವುದು, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವುದು, ಪತ್ರಕರ್ತರಿಗೆ ಆರೋಗ್ಯ ವಿಮೆ ಒದಗಿಸುವುದು, ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
    ಈ ಸಂದರ್ಭದಲ್ಲಿ ಪ್ರತಿಭಟನಾ ನಿರತ ಪತ್ರಕರ್ತರನ್ನು ಉದ್ದೇಶಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಾಧಿಕ್ ಅಲಿ, ರಾಜ್ಯ ಕಾರ್ಯಕಾರಿಣಿಸ ಸದಸ್ಯ ಹರೀರ್ಶ ಎಚ್.ಎಸ್. ಮತ್ತು ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಗಿರೀಶ ಕುಲಕರ್ಣಿ ಅವರುಗಳು ಮಾತನಾಡಿದರು. ಖಾಸಗಿ ಜಾಹೀರಾತು ಎಜೆನ್ಸಿಗಳ ಲಾಬಿಗೆ ಒಳಗಾಗಿರುವ ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಅವರ ನಿಲುವಿನಿಂದಾಗಿ  ಸಣ್ಣ ಪತ್ರಿಕೆಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿದ್ದು,  ಪತ್ರಕರ್ತರು ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು. ದೇಶದ ಆಯಾ ರಾಜ್ಯಗಳ ಭಾಷಾ ಪತ್ರಿಕೆಗಳ ಬೆಳವಣಿಗೆಗೆ ಅಲ್ಲಿನ ಸರ್ಕಾರಗಳು ಪ್ರಥಮ ಆದ್ಯತೆ ನೀಡುತ್ತಿದ್ದು, ಅದರಂತೆ ಕರ್ನಾಟಕದಲ್ಲು ಕನ್ನಡ ಭಾಷೆಯ ಸಣ್ಣ ಪತ್ರಿಕೆಗಳ ಹಿತದೃಷ್ಟಿಯಿಂದ ಕಳೆದ ವರ್ಷ ಜಾರಿಗೊಳಿಸಿದ್ದ ಜಾಹೀರಾತು ನೀತಿಯನ್ನು ತಿದ್ದುಪಡಿ ಮಾಡಿ ಸಣ್ಣ ಪತ್ರಿಕೆಗಳನ್ನು ಮುಚ್ಚಿ ಹೋಗುವಂತೆ ಕೈಗೊಂಡಿರುವ ಕೆಟ್ಟ ನಿರ್ಧಾರವನ್ನು ಕೈಬಿಡುವ ವರೆಗೆ ಹೋರಾಟ ಮುಂದುವರೆಸಲು ಎಲ್ಲಾ ಪತ್ರಕರ್ತರು ಸಜ್ಜಾಗಬೇಕು ಎಂದು ಕೋರಿದರು. 
ಜಿ ಲ್ಲಾಡಳಿತ ಭವನದ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದ ಪತ್ರಕರ್ತರುಗಳು ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಹಠಾವೋ-ವಾರ್ತಾ ಇಲಾಖೆ ಬಚಾವೋ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಬೇಕೇ ಬೇಕು, ಪತ್ರಕರ್ತರ ವಿಮಾ ಯೋಜನೆ ಜಾರಿಗೊಳ್ಳಬೇಕು, ಜಾಹೀರಾತು ನೀತಿ ತಿದ್ದುಪಡಿ ರದ್ದಾಗಬೇಕು ಎಂದು ಘೋಷಣೆಗಳನ್ನು ಕೂಗಿದರು. ಪತ್ರಕರ್ತರ ಹೋರಾಟಕ್ಕೆ ವೀರಕನ್ನಡಿಗ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ನವನಿರ್ಮಾಣ ವೇದಿಕೆ, ಮುಂತಾದ ಸಂಘಟನೆಗಳ ಪದಾಧಿಕಾರಿಗಳಾದ ವಿಜಯ ಕವಲೂರು, ಶಿವಾನಂದ ಹೊದ್ಲೂರು, ವೀರಣ್ಣ ನಿಂಗೋಜಿ, ಬೆಂಬಲಿ ಸೂ ಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  
    ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಮತ್ತು ಪ್ರಭಾರಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.  ಮನವಿ ಸ್ವೀಕರಿಸಿದ ಅವರು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ತಿಳಿಸಿದರು.  ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ವಾರ್ತಾಧಿಕಾರಿ ತುಕಾರಾಮರಾವ ಬಿ.ವಿ. ಅವರು ಮಾತನಾಡಿ, ವಾರ್ತಾ ಇಲಾಖೆ ಮತ್ತು ಪತ್ರಕರ್ತರು ಒಂದೇ ಕುಟುಂಬದ ಸದಸ್ಯರುಗಳು ಇದ್ದಂತೆ.  ಉದ್ಭವಿಸಿರುವ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕೋರಿದರು. 
    ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್.ದೊಡ್ಡಮನಿ ಮನವಿ ಪತ್ರವನ್ನು ಓದಿದರು.  ಜಿಲ್ಲೆಯ ಹಿರಿಯ ಸಂಪಾದಕರುಗಳಾದ ವಿ.ಎಸ್.ಪಾಟೀಲ್, ವಿರೇಂದ್ರ ಇರಕಲ್, ಎಸ್.ಎಂ.ಪಟೇ

ಲ್, ವೈ.ಬಿ.ಜೂಡಿ ಸ್ಭೆರಿದಂತೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಹಾಗೂ ಪತ್ರಕರ್ತರುಗಳಾದ ಹನುಮಂತ ಹಳ್ಳಿಕೇರಿ, ಪ್ರಸನ್ನ ದೇಸಾಯಿ, ಜಿ.ಎಸ್.ಗೋನಾಳ, ಕಳಕಪ್ಪ ಚಿಕ್ಕಗಡನಾಗರಾಜ ಇಂಗಳಗಿ, ಬಸವರಾಜ ಗುಡ್ಲಾನೂರು, ಸಂತೋಷಕುಮಾರ್ ಅಲ್ಕೋಡ್, ವಿಜಯಕುಮಾರ್, ರಮೇಶ ರಾಜೂರು, ಕೊಟ್ರಪ್ಪ ತೋಟದ, ಪರಮಾನಂದ ಯಾಳಗಿ, ಫಕೀರಪ್ಪ ಗೋಟೂರು, ಖಾಸೀಮ್ ಸಾಬ್, ಬದರಿನಾಥ ಪುರೋಹಿತ, ಉಮಾ ಜನಾದ್ರಿ, ರವಿ ಪಾಟೀಲ್, ಆನಂದ ಮಡಿವಾಳ, ಶಾಂ ತು ಕೌಜಗೇರಿ, ಬಸವರಾಜ ಗಾಣಿಗೇರ, ವೆಂಕಟೇಶ ಕುಲಕರ್ಣಿ, ಪ್ರಕಾಶ ಮೈದೂರು, ಬಸು, ರವಿ ಕಬ್ಬೇರ್, ರವಿ ಬಳಿಗೇರ, ಮಲ್ಲು ಕೌಜಗೇರಿ, ಮರಿಯಪ್ಪ ಮಂಗಳೂರು, ಭೀಮನಗೌಡ ಪೊಲೀಸ್ ಪಾಟೀಲ್, ಮಂಜುನಾಥ ಕೋಳೂರು, ಮುಂತಾದವರು ಪಾಲ್ಗೊಂಡಿದ್ದರು.
13 Aug 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top