ಕೊಪ್ಪಳ - ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆ, ತಿರುಳ್ಗನ್ನಡ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಕೊಪ್ಪಳ ಜಿಲ್ಲಾ ಉತ್ಸವದ ೨ನೇ ದಿನವಾದ ಆ.೨೩ ರಂದು ನಗರದ ಸಾಹಿತ್ಯ ಭವನದಲ್ಲಿ ೭ನೇ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ಜರುಗಲಿವೆ ಎಂದು ನಾಗರಿಕರ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಅವರು ತಿಳಿಸಿದ್ದಾರೆ. ಆ.೨೩ ರಂದು ಬೆಳಿಗ್ಗೆ ೧೦.೩೦ ಕ್ಕೆ ಗಂಗಾವತಿಯ ಹೆಬ್ಬಾಳ ಹಿರೇಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹಾಗೂ ಕುಕನೂರಿನ ಅನ್ನದಾನೇಶ್ವರ ಮಠದ ಶ್ರೀ ಮಹಾದೇವಯ್ಯ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ, ಕನ್ನಡ ಪ್ರಭ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣನವರ ಅವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಧ್ವಜ ಹಸ್ತಾಂತರವನ್ನು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಅವರು ನೆರವೇರಿಸುವರು. ಸಮ್ಮೇಳನಾಧ್ಯಕ್ಷರಾಗಿ ಗಂಗಾವತಿಯ ಹಿರಿಯ ಸಾಹಿತಿ ಸಿ.ಎಚ್.ನಾರಿನಾಳ ಅವರು ಆಗಮಿಸುವರು. ಹೈದರಾಬಾದ್ ಕರ್ನಾಟಕದ ೩೭೧ನೇ ಕಲಂ ನ ಸ್ಥಿತಿಗತಿ ಕುರಿತು ರಾಯಚೂರಿನ ಹೈ-ಕ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಹಾಗೂ ಗುಲ್ಬರ್ಗಾದ ಹೈ-ಕ ಹೋರಾಟಗಾರ ಉಮಾಕಾಂತ ನಿಗ್ಗೂಡಗಿ ಅವರು ಉಪನ್ಯಾಸಕರಾಗಿ ಆಗಮಿಸುವರು. ನಾಗರಿಕರ ವೇದಿಕೆ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಡಾ.ವಿ.ಬಿ.ರಡ್ಡೇರ್, ಎಸ್.ವಿ.ಪಾಟೀಲ್ ಗುಂಡೂರು, ವೀರಣ್ಣ ವಾಲಿ, ವೀರಣ್ಣ ಹುರಕಡ್ಲಿ, ಎಸ್.ಬಿ.ಗೊಂಡಬಾಳ, ಡಾ.ಕೆ.ಬಿ.ಬ್ಯಾಳಿ, ರವಿತೇಜ ಅಬ್ಬಿಗೇರಿ, ಮುನಿಯಪ್ಪ ಹುಬ್ಬಳ್ಳಿ, ಹನುಮೇಶ ಗುಮಗೇರಿ, ಅಜ್‌ಮಿರ ನಂದಾಪೂರ, ಈಶ್ವರ ಹತ್ತಿ, ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಸರೋಜಾ ಬಾಕಳೆ, ಉಪನ್ಯಾಸಕರಾದ ಡಿ.ಎಂ.ಬಡಿಗೇರ, ಈಶ್ವರಪ್ಪ ಮಳಗಿ, ಕೊಪ್ಪಳ ತಾಲೂಕ ಕಸಾಪ ಅಧ್ಯಕ್ಷ ಶಿ.ಕಾ.ಬಡಿಗೇರ, ಹೇಮರಡ್ಡಿ ಮಲ್ಲಮ್ಮ ಬ್ಯಾಂಕಿನ ಅಧ್ಯಕ್ಷರಾದ ಸಂಗಮೇಶ ಡಂಬಳ, ಜಿಲ್ಲಾ ಸಹಕಾರಿ ಯೂನಿಯನ್‌ನ ನಿರ್ದೇಶಕರಾದ ನೀಲಕಂಠಯ್ಯ ಹಿರೇಮಠ, ಗವಿಸಿದ್ದಯ್ಯ ಹುಡೇಜಾಲಿ, ಪತ್ರಕರ್ತ ರವೀಂದ್ರ ಬಾಕಳೆ, ಮುಖಂಡ ಶಿವು ಯಲಬುರ್ಗಾ, ಸಮಾಜ ಸೇವಕ ಸಿದ್ದಣ್ಣ ವಾರದ ಸೇರಿದಂತೆ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಕವಿಗಳು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಂದು ಮಧ್ಯಾಹ್ನ ೩ ಗಂಟೆಗೆ ಜಿಲ್ಲಾ ಉತ್ಸವದ ಮಕ್ಕಳ ಗೋಷ್ಠಿ ನಡೆಯಲಿದ್ದು, ಉದ್ಘಾಟಕರಾಗಿ ಚನ್ನರಾಯಪಟ್ಟಣದ ಸ್ವಾತಿ.ಪಿ.ಭರದ್ವಾಜ್ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ಅಂತರಾಷ್ಟ್ರೀಯ ಜಾದೂಗಾರ ಶ್ರೀವತ್ಸ ಹೆಮ್ಮಾಡಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಕೆ.ವರ್ಷ, ಅಭಯ್ ಸುರ್ವೆ, ಅನಿಲ್ ಪವಾರ್, ಕುಶಾಲ್ ನಾರಾಯಣ್ ದೇವರಕೆರೆ, ಆರ್ಯ ಮಂಗಳೂರು, ನೇಹಾ ಸಂಧ್ಯಾ, ರೋಹಿಣಿ ಮತ್ತು ರುಕ್ಮೀಣಿ ಸಹೋದರಿಯರು, ಸ್ನೇಹಾ ಅವರು ಭಾಗವಹಿಸುವರು. ನಿರೂಪಣೆಯನ್ನು ಮೇಘರಾಜ ರೆಡ್ಡಿ ಗೋನಾಳ ಅವರು ನೆರವೇರಿಸುವರು. ಉಪನ್ಯಾಸಕರಾಗಿ ಸರ್ಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲ್ ಅವರು ಕೊಪ್ಪಳ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ಆಶಾ ಭಾವನೆಗಳು ಕುರಿತು ಉಪನ್ಯಾಸ ನೀಡುವರು. ಸಂಜೆ ೫.೩೦ ಕ್ಕೆ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಜರುಗಲಿದ್ದು, ದಿವ್ಯ ಸಾನಿಧ್ಯವನ್ನು ಧಾರವಾಡದ ಮನ್ಸೂರು ಮಠದ ಬಸವರಾಜ ದೇವರು ಅವರು ವಹಿಸುವರು. ಉದ್ಘಾಟನೆಯನ್ನು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ನೆರವೇರಿಸುವರು. ಸಾಂಸ್ಕೃತಿಕೋತ್ಸವದ ಉದ್ಘಾಟನೆಯನ್ನು ಸರ್ಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲ್ ಅವರು ನೆರವೇರಿಸುವರು. ಸಮ್ಮೇಳನಾಧ್ಯಕ್ಷರ ನುಡಿಯನ್ನು ಸಿ.ಎಚ್.ನಾರಿನಾಳ ಅವರು ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ತಿರುಳ್ಗನ್ನಡ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಸಾದಿಕ್ ಅಲಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟಿ ಶ್ರೀಮತಿ ಸ್ವಾತಿ ಅಂಬರೀಶ, ಯುವ ಚಲನಚಿತ್ರ ನಟಿ (ತಾಂಡವ ಚಿತ್ರ) ಕು|| ಗರೀಮಾಸಿಂಗ್, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ಡಿಡಿಪಿಐ ಶ್ಯಾಮಸುಂದರ, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್.ಪಾಟೀಲ್, ಹಿರಿಯ ವಕೀಲರಾದ ಸಂಧ್ಯಾ ಮಾದಿನೂರು, ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ಆರ್.ನವಲಿ ಹಿರೇಮಠ, ಬಸವರಾಜ ಪುರದ, ಅಕ್ಕಿ ಗಿರಣಿ ಮಾಲೀಕರ ಸಂಘದ ಖಜಾಂಚಿ ಕೆ.ಕಾಳಪ್ಪ, ವಿಜಯಪುರದ ತೆಂಕಣಗಾಳಿ ಪತ್ರಿಕೆ ಸಂಪಾದಕ ಎ.ಜಿ.ಮಲ್ಲಿಕಾರ್ಜುನ ಮಠ, ರಾಯಚೂರು ಉದಯ ಟಿವಿ ವರದಿಗಾರ ಮಹಾಂತೇಶ ಹಿರೇಮಠ, ಬೆಂಗಳೂರಿನ ಅನಂತ ಶಾರದಾ ಪತ್ರಿಕೆ ಸಂಪಾದಕ ಎಂ.ಅನಂತಕುಮಾರ, ಬೆಂಗಳೂರಿನ ಹಠವಾದಿ ಪತ್ರಿಕೆ ಸಂಪಾದಕ ಬೋಜರಾಜ ಬಳ್ಳಾರಿ, ಪತ್ರಕರ್ತ ಅಲ್ಲಾಗಿರಿರಾಜ್, ಉತ್ತರ ಕರ್ನಾಟಕ ವೇದಿಕೆ ಉಪಾಧ್ಯಕ್ಷ ರಾಜು ಬನ್ನಿಗೋಳ, ಇಳಕಲ್‌ನ ಪತ್ರಕರ್ತ ಉಸ್ಮಾನ್ ಸಂಗಂ, ಉತ್ತರ ಕರ್ನಾಟಕ ವೇದಿಕೆ ವಿಜಯಪುರ ಅಧ್ಯಕ್ಷ ರಾಜು ಪಾಟೀಲ್, ಚಲನಚಿತ್ರ ನಿರ್ದೇಶಕ ಪಾಂಡವಪುರ ಮಂಜುನಾಥ, ಕುಕನೂರಿನ ವಿಜಯವಾಣಿ ವರದಿಗಾರ ಮಲ್ಲು ಮಾಟರಂಗಿ ಅವರು ಆಗಮಿಸುವರು. ಅಂದು ರಾತ್ರಿ ೯.೦೦ ಕ್ಕೆ ಬಸವರಾಜ ಬೆಣ್ಣಿ ಹೊಸಪೇಟೆ ಇವರಿಂದ ಹಾಸ್ಯೋತ್ಸವ ಜರುಗಲಿದೆ. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ನಾಗರಿಕರ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಅವರು ತಿಳಿಸಿದ್ದಾರೆ.
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.