PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- 27- ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯವು ಪ್ರತಿಯೊಬ್ಬರಿಂದಾಗಬೇಕು ಎಂದು ಕೊಪ್ಪಳ ವಲಯ ಶಿಕ್ಷಣ ಸಂಯೋಜಕರಾದ ಎಸ್.ಬಿ.ಕುರಿ ಹೇಳಿದರು.
  ಅವರು ಹೊಸಗೊಂಡಬಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಹದ್ದೂರಬಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆಯು ಅಡಗಿದ್ದು,ಅದನ್ನು ಗುರುತಿಸುವ ಕಾರ್ಯವು ಪ್ರತಿಯೊಬ್ಬರಿಂದ ಆಗಬೇಕಿದೆ.ಸಮಾಜವು ಪ್ರತಿಕ್ಷಣ ಬದಲಾವಣೆ ಹೊಂದುತ್ತಿರುತ್ತದೆ.ಬದಲಾದ ಸಮಾಜಕ್ಕೆ ತಕ್ಕಂತೆ ಶಿಕ್ಷಣ ನೀಡಬೇಕಿದೆ.ಇಂದಿನ ಯುಗವು ಸ್ಪರ್ಧಾತ್ಮಕವಾದ ಯುಗವಾಗಿದೆ ಅದಕ್ಕೆ ಅನುಗುಣವಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು.ಪಠ್ಯೇಯ ವಿಷಯಗಳಿಗಿಂತ ಇಂದು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕಿದೆ.ಅಂದಾಗ ಮಾತ್ರ ಉತ್ತಮ ಸಮಾ
   ಪ್ರಾಸ್ತಾವಿಕವಾಗಿ ಬಹದ್ದೂರಬಂಡಿ ಕ್ಲಸ್ಟರಿನ ಸಿ.ಆರ್.ಪಿ.ವೆಂಕಟೇಶ ದೇಶಪಾಂಡೆ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ ಮಾತನಾಡಿ,ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವ ಮಕ್ಕಳು ಸೋಲು-ಗೆಲುವಿನ ಕಡೆಗೆ ಹೆಚ್ಚು ಗಮನವನ್ನು ಹರಿಸದೆ ಸ್ಪರ್ಧೆಯಲ್ಲಿ ಭಾಗವಹಿಸುವುದರ ಕಡೆಗೆ ಗಮನ ನೀಡಬೇಕು.ನಿರ್ಣಾಯಕರು ತಾರತಮ್ಯವನ್ನು ಮಾಡದೇ ನ್ಯಾಯಯುತ  ತೀರ್ಪನ್ನು ನೀಡಿ ಉತ್ತಮ ಪ್ರತಿಭೆಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಶಂಕ್ರಪ್ಪ ಚಳಗೇರಿ,ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾದ ಗೌವಿಸಿದ್ದಪ್ಪ ಬಳಿಗೇರ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಹೊಸಗೊಂಡಬಾಳ ಶಾಲೆಯ ಮುಖ್ಯೋಪಾದ್ಯಾರಾದ ಹನುಮಂತಪ್ಪ ಕುರಿ,ಶಿಕ್ಷಕರ ಸಂಘದ ನಿರ್ದೇಶಕರಾದ ಗೌರಿ ಬಿಜ್ಜಳ,ಚಂದ್ರು ಹೆಳವರ,ವೆಂಕಟೇಶ ಬೋಸ್ಲೆ,ನಿವೃತ್ತ ಶಿಕ್ಷಕರಾದ ಬಿ.ಕೆ.ಹಿರೇಮಠ ಮುಂತಾದವರು ಹಾಜರಿದ್ದರು.

ಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Advertisement

0 comments:

Post a Comment

 
Top