PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-29-  ಇತ್ತೀಚೆಗೆ ೨೦೧೫-೧೬ ನೇ ಸಾಲಿನ ಇರಕಲ್ಲಗಡಾ ವಲಯಮಟ್ಟದ ಕ್ರೀಡಾ ಕೂಟಗಳನ್ನು ಸರಕಾರಿ ಕುವೆಂಪು ಶತಮಾನೋತ್ಸವ ಮಾದರಿಶಾಲೆ ಕಿನ್ನಾಳದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ ಅಧ್ಯಕ್ಷಿಣಿಯಾದ ಶ್ರೀಮತಿ ಗಂಗಮ್ಮ ಬನ್ನಿಕೊಪ್ಪ ವಹಿಸಿದ್ದರು. ಕ್ರೀಡಾ ದ್ವಜಾರೋಹಣವನ್ನು ಲೇಬಗೇರಿ ಕ್ಷೇತ್ರದ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ವನಿತಾ ಗಡಾದ ನೆರವೇರಿಸಿ ಮಾತನಾಡಿ, ಕ್ರೀಡೆಗಳು ಮಕ್ಕಳಲ್ಲಿ ಬೇಸರಿಕೆಯನ್ನು ಹೋಗಲಾಡಿಸಿ ಅವರಲ್ಲಿ ನವಚೈತನ್ಯ ಮತ್ತು ಲವಲವಿಕೆ ಯನ್ನುಂಟುಮಾಡುತ್ತವೆ. ಹಾಗೂ ಮಕ್ಕಳಲ್ಲಿ ಸ್ಪದಾ ಮನೊಭಾವನೆ ಮೂಡಿಸುತ್ತವೆ. ಕಾರಣ ಕ್ರೀಡಾಪ್ರತಿಭೆಗಳು ಗ್ರಾಮ ಹಂತದಿಂದ ರಾಷ್ಟ್ರ ಹಂತದವರೆಗೆ ಹೋಗುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಅವಶ್ಯ ಎಂದು ನುಡಿದರು.  ಕ್ರೀಡಾ ಜ್ಯೋತಿಯನ್ನು ತಾಲೂಕ ಪಂಚಾಯತ ಸದಸ್ಯರಾದ ಅಮರೇಶ ಉಪಲಾಪೂರ ಬೆಳಗಿಸಿ ಮಾತನಾಡಿ, ಮಕ್ಕಳಿಗೆ ಕೇವಲ ಓದು ಬರಹ ಮಾತ್ರವಲ್ಲದೆ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಪ್ರತಿಭಾ ಕಾರಂಜಿಯಂತ ಸ್ಪರ್ದಾ ಅವಕಾಶಗಳನ್ನು ಒದಗಿಸಬೇಕಾಗಿದೆ ಎಂದು ನುಡಿದರು. ಗ್ರಾ. ಪಂ ಹಿರಿಯ ಸದಸ್ಯ ವೀರಭದ್ರಪ್ಪ ಗಂಜಿ ಮಾತನಾಡಿ, ಕ್ರೀಡೆಗಳು ಮಗುವಿನ ದೈಹಿಕ ಮಾನಸಿಕ ಬೆಳವಣಿಗೆಗೆ ಪೂರಕವಾಗಿವೆ. ಅತ್ಯಂತ ಪ್ರಾಮಾಣಿಕವಾಗಿ ಶಿಕ್ಷಕ ಬಳಗ ಕ್ರೀಡಾ ಸ್ಪೂರ್ತಿಯನ್ನು ತುಂಬಿ ಕ್ರೀಡಾ ಪ್ರತಿಭೆಗಳನ್ನು ಬೆಳಸಬೇಕು ಎಂದು ನುಡಿದರು. ಇನ್ನೋರ್ವ ಗ್ರಾ. ಪಂ ಸದಸ್ಯ ಬಸವರಾಜ ಚಿಲವಾಡಗಿ ಮಾತನಾಡಿ, ಕ್ರೀಡೆಗಳು ಮಗುವಿನ ಕೀರ್ತಿಯನ್ನು ಬೆಳಗಿಸುತ್ತವೆ. ಕ್ರೀಡಾಸಕ್ತ ಮಕ್ಕಳಿಗೆ ಕ್ರೀಡಾಭಾವನೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ನುಡಿದರು.  ನೌಕರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮಣ್ಣವರ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿ ಜೀವನದಲ್ಲಿ ತುಂಬಾ ಸಂತೋಷ ಅಹ್ಲಾದಕತೆಯನ್ನುಂಟು ಮಾಡುತ್ತವೆ. ಆಯೋಜನೆ ಮಾಡಿದ ರೀತಿಯನ್ನು ನೋಡಿದರೆ ಇದು ಜಿಲ್ಲಾ ಹಂತದ ಕ್ರೀಡಾಕೂಟದ ರೀತಿಯಲ್ಲಿ ಆಯೋಜನೆ ಮಾಡಿರುವುದು ತುಂಬಾ ಸಂತಸವನ್ನುಂಟು ಮಾಡಿದೆ ಎಂದು ನುಡಿದರು. ರಾಜ್ಯ ಉಪಾಧ್ಯಕ್ಷರಾದ ಶಂಭುಲಿಂಗನಗೌಡ ಮಾತನಾಡುತ್ತಾ, ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿದ ಮಕ್ಕಳನ್ನು ಗುರುತಿಸುವ ಜವಾಬ್ದಾರಿ ಹಾಗೂ ಗ್ರಾಮ ಹಂತದಿಂದ ಮುಂದಿನ ಎಲ್ಲಾ ಹಂತಗಳಿಗೆ ಬೆಳೆಸುವಂತಹ ಜವಾಬ್ದಾರಿಯನ್ನು ನಾವು ನೀವೆಲ್ಲ ಹೊಂದಿದ್ದೇವೆ ಎಂದು ನುಡಿದರು.  ಕಾ


ರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ದೈಹಿಕ ಶಿಕ್ಷಣಾಧಿಕಾರಿಗಳಾದ ವೈ ಸುದರ್ಶನರಾವ್ ನೆರವೇರಿಸಿರು. ಕಾರ್ಯಕ್ರಮ ನಿರೂಪಣೆಯನ್ನು ಮಹೇಶ ಟಂಕಸಾಲಿ ಮಾಡಿದರು. ಹಾಗೂ ದ್ಯಾಮಪ್ಪ ಮುರಡಿ ಸ್ವಾಗತಿಸಿದರು. ಅಂತಿಮವಾಗಿ ಶಿಕ್ಷಣ ಸಂಯೋಜಕರಾದ ಶ್ರೀನಿವಾಸ ಎಸ್.ಪಿ ಕಾರ್ಯಕ್ರಮದ ಆಯೋಜನೆಗೆ ಆರ್ಥಿಕ ನೆರವನ್ನು ನೀಡಿರುವಂತಹ ಸ್ಥಳಿಯ ಗ್ರಾಮ ಪಂಚಾಯತಿ ಹಾಗೂ ವಲಯದ ಎಲ್ಲ ಮುಖ್ಯೋಪಾಧ್ಯಾಯರನ್ನು ಸಂಘದ ಪ್ರತಿನಿಧಿಗಳನ್ನು  ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಸಹಕಾರ ನೀಡಿದ ಎಲ್ಲರನ್ನು ನೆನೆಯುತ್ತಾ ಕಾರ್ಯಕ್ರಮಕ್ಕೆ ವಂದನೆ ಸಲ್ಲಿಸಸಿದರು.  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳು ನೌಕರ ಸಂಘದ ಪ್ರತಿನಿಧಿಗಳು,  ಸಿ.ಆರ್.ಪಿಗಳು, ಮುಖ್ಯೋಪಾದ್ಯಾಯರು, ಶಿಕ್ಷಕರ ಪತ್ತಿನ ಸಹಕಾರ ಸಂಘದ ಪ್ರತಿನಿಧಿಗಳು, ಶಿಕ್ಷಕ ಬಳಗ ಉಪಸ್ಥಿತರಿದ್ದರು.

Advertisement

0 comments:

Post a Comment

 
Top