ನಿಜಸುಖಿ ಹಪಡದ ಅಪ್ಪಣ್ಣನವರ ೮೩೭ನೇ ಜಯಂತಿಯನ್ನು ಗಂಗಾವತಿ ನಗರದ ನಿಜಮುಕ್ತಿ ಲಿಂಗಮ್ಮ ಹಡಪದ ಅಪ್ಪಣ್ಣ ಸೌಹಾರ್ದ ಸೋಸಾಟಿಯ ಆವರಣದಲ್ಲಿ ಆಚರಿಸಲಾಯಿತು. ಪ್ರಾಸ್ತಾವಿಕವಾಗಿ ಹನುಮಂತಪ್ಪ ಸರಿಗಮ ಸಮಾಜದ ಉಪಾಧ್ಯಕ್ಷರು, ಸಮಾಜದ ಏಳಿಗೆಗೆ ಬಗ್ಗೆ ಹಾಗೂ ನಮ್ಮ ಧರ್ಮ ಗುರುಗಳಾದ ಅಪ್ಪಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲಾ ಸಾಗುತ್ತಿದ್ದೇವೆ. ನಮ್ಮ ಕಾಯಕ ನಿಷ್ಠೆ ಮತ್ತು ನಮ್ಮ ಶರಣರು ನಡೆಯುವ ಹಾದಿಯಂತೆ ನಮ್ಮ ಸಮಾಜವು ಸಹ ನಾವು ಚಿಕ್ಕ ಸಮಾಜವಾದರೂ ಅದನ್ನು ಅಚ್ಚುಕಟ್ಟಾಗಿ ಹೋಗಬೇಕೆಂಬು ನಮ್ಮ ಉದ್ದೇಶ. ಅಪ್ಪಣ್ಣನವರ ಹೆಸರಿನಲ್ಲಿ ಸೋಸಾಯಿಟಿ ಮಾಡಿ ನಮ್ಮ ಜನಾಂಗವು ಇದರ ಉಪಯೋಗವನ್ನು ತೆಗೆದುಕೊಳ್ಳಬೇಕೆಂದು ಅವರು ಹೇಳಿದರು. ಶ್ರೀ ಚನ್ನಬಸಪ್ಪ ತಾಲೂಕ ಅಧ್ಯಕ್ಷರು, ಹಡಪದ ಸಮಾಜ, ಕಾರ್ಯದರ್ಶಿಗಳು ಶಿವಣ್ಣ ನೀಲಕಮಲ, ಯುವಘಟಕದ ಅಧ್ಯಕ್ಷರು ಬಸವರಾಜ, ಖಜಾಂಚಿ ಶರಣಪ್ಪ ಡಿಸ್ಕೋ., ಬಸವಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ ಮತ್ತು ಚಿತ್ರದುರ್ಗದ ಶ್ರೀಮಠದ ಆಪ್ತಕಾರ್ಯದರ್ಶಿ ಪುಟ್ಟಸ್ವಾಮಿ ಹಾಗೂ ಬಸವರಾಜ ಕೇಸರಹಟ್ಟಿ ಇನ್ನು ಅನೇಕ ಸಮಾಜಬಾಂಧವರು ಉಪಸ್ಥಿತರಿದ್ದರು ಎಂದು ಹಡಪದ ಸಮಾಜದ ಉಪಾಧ್ಯಕ್ಷರಾದ ಹನುಮಂತಪ್ಪ ಸರಿಗಮ ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment