PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ : ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗುವ ಮೂಲಕ ಸಮಾಜದಲ್ಲಿನ ಅಂಕು ಡೊಂಕನ್ನು ಹಾಗೂ ಅನಿಷ್ಷ ಪದ್ದತಿಯನ್ನು ಹೋಗಲಾಡಿಸುವ ಮೂಲಕ ಸಮಾನತೆಯನ್ನು ಸಾರಿದ್ದಾರೆ ಅಂಥವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಹಡಪದ ಅಪ್ಪಣ್ಣ ಸಮಾಜದ ತಾಲೂಕ ಅಧ್ಯಕ್ಷ ಶಿವಪ್ಪ ಶಾಸ್ರ್ತೀ ಹೇಳಿದರು.
       ಪಟ್ಟಣದ ಹಡಪದ ಓಣಿಯಲ್ಲಿ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರ ಸಮಕಾಲಿನರಾದ ಹಡಪದ ಅಪ್ಪಣ್ಣನವರು ಸಮಾಜದ ಕಲ್ಯಾಣ ಕ್ರಾಂತಿಗಾಗಿ ಶ್ರಮಿಸಿದವರಲ್ಲಿ ಒಬ್ಬರು ಅಂತಹ ಮಹಾನ ವ್ಯಕ್ತಿ ಪಡೆದ ನಾವು ಕೀಳರಿಮೆ ತೊರೆದು ಮುಖ್ಯ ವಾಹಿನಿಗೆ ಬರಬೇಕು ಎಂದು ಹಡಪದ ಅಪ್ಪಣ್ಣ ಸಮಾಜದ ತಾಲೂಕ ಅಧ್ಯಕ್ಷ ಶಿವಪ್ಪ ಶಾಸ್ರ್ತೀ ಹೇಳಿದರು.
       ಶ್ರೀ ಹಡಪದ ಅಪ್ಪಣ್ಣ ಸಮಾಜದ ಯುವಕ ಸಂಘದ ಅಧ್ಯಕ್ಷ ಶರಣಪ್ಪ ಕಟ್ಟಿಮನಿ ಮಾತನಾಡಿ ಸಮಾಜದ ಭಾಂದವರು ಮೊದಲು ಸಂಘಟಿತರಾಗಬೇಕು ಈ ಮೂಲಕ ನಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಹೋರಾಟದ ಹಾದಿ ಅವಶ್ಯವಾಗಿದೆ ಎಂದರು.
         ಈ ಸಂಧರ್ಭದಲ್ಲಿ ಮಹಾದೇವಪ್ಪ ಹಡಪದ , ಶೇಕಪ್ಪ ಹಡಪದ , ಸಂಗಪ್ಪ ರಾಜೂರು ,ಕಳಕಪ್ಪ ಹಳ್ಳದ ,ಹುಚ್ಚೀರಪ್ಪ ಹಡಪದ , ವಿರೇಶ ಹಡಪದ , ಮಹಾಂತೇಶ ಹಡಪದ ,ಪ್ರಭುರಾಜ ಹಡಪದ ,ಚನ್ನಪ್ಪ ಹಡಪದ , ದೇವಪ್ಪ ಹಡಪದ , ಮಲ್ಲ್ಲಿಕಾರ್ಜುನ ಹಡಪದ ,ಶರಣಪ್ಪ ಕರಮುಡಿ ,ಭುಜಿಂಗಪ್ಪ ಹಡಪದ ,ಮಂಜು ಹಡಪದ ,ಸಿದ್ರಾಮಪ್ಪ ಹಡಪದ , ಗುರು ಹಡಪದ , ಮುತ್ತಪ್ಪ ಹಡಪದ ,ಬಸವರಾಜ ಹಡಪದ ,ಶರಣಪ್ಪ ಹಡಪದ ,ಈರಪ್ಪ ಹಡಪದ ,ಮಾರುತಿ ಹಡಪದ ಮತ್ತಿತರರು ಇದ್ದರು.

Advertisement

0 comments:

Post a Comment

 
Top