PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ನಮ್ಮ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಮೋಸ, ವಂಚನೆ, ಅನ್ಯಾಯ, ಲಂಚ, ಭ್ರಷ್ಟಾಚಾರ ಮೊದಲಾದ ಪಿಡುಗುಗಳು ಮೊದಲಿನಿಂದಲೂ ಇವೆ. ಇವತ್ತಿಗೂ ಇರುತ್ತವೆ. ಸೂರ್ಯ ಚಂದ್ರರಿರುವರೆಗೂ ಒಂದಿಲ್ಲೊಂದು ರೂಪದಲ್ಲಿರುತ್ತವೆ. ಇದೆಲ್ಲದರ ಮಧ್ಯದಲ್ಲಿ ಯಶಸ್ಸನ್ನು ಪಡೆಯಲು ಬುದ್ದಿಬಲ, ಭುಜಬಲ, ಆರ್ಥಿಕ ಬಲದ ಅಗತ್ಯವಿದೆ ಎಂದು ನಿವೃತ್ತ ಐ.ಪಿ.ಎಸ್ ಅಧಿಕಾರಿ ಶಂಕರ್ ಬಿದರಿ ಅಭಿಪ್ರಾಯ ಪಟ್ಟರು. ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯಲ್ಲಿ  ವಿದ್ಯಾರ್ಥಿಗಳಿಗಾಗಿ ಜರುಗಿದ ವ್ಯಕ್ತಿತ್ವ ವಿಕಾಸದಡಿಯಲ್ಲಿ ಜರುಗುವ ಜೀವನ ದರ್ಶನ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿದರು.  ಮುಂದುವರೆದು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಯಾರು ಬಸವಾದಿ ಶರಣರಿಂದ ಪ್ರಭಾವಿತರಾಗಿರುತ್ತಾರೆಯೋ ಅವರಿಗೆ ಜೀವನದಲ್ಲಿ ಯಶಸ್ಸು ಹಾಗೂ ಸಾರ್ಥಕ್ಯ ಸಿಗುತ್ತದೆ. ಏಕೆಂದರೆ  ಅದು ಎಲ್ಲರನ್ನು ಅಪ್ಪಿಕೊಳ್ಳುವ ಧರ್ಮ. ಆ ಎಲ್ಲ  ಬಸವಾದಿ ಶರಣರ ಜೀವನದ ಮೌಲ್ಯಗಳು ನಮ್ಮೆಲ್ಲರ ಬದುಕಿಗೆ ದಾರಿ ದೀಪವಾಗುತ್ತವೆ.  ಆಯಾ ಮೌಲ್ಯಗಳನ್ನು  ಎಲ್ಲರು ರೂಡಿಸಿಕೊಳ್ಳುವ  ಅಗತ್ಯ ಇದೆ. ನಾವೆಲ್ಲಾ ಭಾರತಿಯರು ಪರಸ್ಪರ ಪ್ರೀತಿ ವಿಶ್ವಾಸ, ಸ್ನೇಹ, ಸಹಕಾರದಿಂದ ಬಾಳಿದಾಗ ಮಾತ್ರ ಭಾರತ ಬಲಿಷ್ಠವಾಗಬಲ್ಲದು. ನಾವೆಲ್ಲಾ  ಇಂತಹ ದೇಶ ಕಟ್ಟುವ  ಕೆಲಸದಲ್ಲಿ ತೊಡಗೋಣ.  ಸತ್ಯ ಪರಿಶುದ್ದ ಕಾಯಕದಿಂದ ಮಾತ್ರ ಜೀವನಲ್ಲಿ ಮುಂದೆ ಬರಲಿಕ್ಕೆ ಸಾಧ್ಯ ಹೊರತು ಬೇರೆ ಬೇರೆ  ಅನ್ಯ ಮಾರ್ಗದಿಂದ  ಅದು ಸಾಧ್ಯವಲ್ಲ.  ಅಂತವರು  ಜೀವನ ಪ್ರವಾಹದಲ್ಲಿ ನಾಯಿಕೊಡೆಗಳಾಗಿ ಬೆಳೆದು ನೀರಿನಲ್ಲಿ ಕೊಚ್ಚಿ ಹೋಗುತ್ತಾರೆ.  ನ್ಯಾಯ, ನಿಷ್ಠೆ, ಪ್ರಾಮಾಣಿಕತೆ ಸತ್ಯದಿಂದ ಕೂಡಿದ ಬದುಕು ನಮ್ಮದಾಗಬೇಕು. ಜೊತೆಗೆ ಸ್ಪರ್ಧಾತ್ಮಕ ಈ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಚಲಿತ ವಿದ್ಯಮಾನಗಳ ಅರಿವು ಅಗತ್ಯವೆಂದರು.ಈ ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ ಕಾರ್ಯದರ್ಶಿ ಎಸ ಮಲ್ಲಿಕಾರ್ಜುನ, ಸದಸ್ಯರಾದ ಸಂಜಯ ಕೊತಬಾಳ, ಆಡಳಿತಾಧಿಕಾರಿ ಡಾ ಮರೇಗೌಡ, ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಮನೋಹರ ದಾದ್ಮಿ,    ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಪ್ರಾಚಾರ್ಯ ಪರೀಕ್ಷೀತರಾಜ, ಶ್ರೀ ಗವಿಸಿದ್ಧೇಶ್ವರ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ ಪ್ರಕಾಶ ಬಡೀಗೇರ, ಶ್ರೀಮತಿ ಶಾರದಮ್ಮ ಕೊತಬಾಳ ಕಾಲೇಜಿನ ಪ್ರಾಚಾರ್ಯ ರಾಜರಾಜೇಶ್ವರ ರಾವ್, ಎನ್.ಸಿ.ಸಿ ಅಧಿಕಾರಿ ಡಾ ದಯಾನಂದ ಸಾಳಂಕೆ ಅಲ್ಲದೇ ಅಪಾರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತಿಥಿಗಳ ಪರಿಚಯ ಜಗದೀಶ ಅಂಗಡಿ, ನಿರೂಪಣೆ ಶರಣಬಸಪ್ಪ ಬಿಳಿಯಲಿ ನೆರವೇರಿಸಿದರು.

Advertisement

0 comments:

Post a Comment

 
Top