PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ:೧೧, ಪವಿತ್ರ ರಂಜಾನ ಮಾಸದ ಅಂಗವಾಗಿ ನಗರದ ವಿವಿಧ ಜಾಮೀಯಾ ಮಸೀದಿಗಳಿಗೆ ಇಫ್ತಿಯಾರ್ ಅಂಗವಾಗಿ ಬೇಟಿ ನೀಡಿ ಮಾತನಾಡಿದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ರಂಜಾನ್ ಉಪವಾಸದಿಂದ ಮನುಷ್ಯನಿಗೆ ಹಸಿವಿನ ಪರಿ ಉಂಟಾಗಿ ಬಡವರ ಹಸಿವಿನ ಬಗ್ಗೆ ಅರಿವು ಮೂಡಿಸಲು ರಂಜಾನ್ ಉಪವಾಸವು ಮಹಾನ್ ಸಾದನವಾಗಿದೆ. ಆದ್ದರಿಂದಲೇ ಸೃಷ್ಟಿಕರ್ತನೂ (ಅಲ್ಲಾನೂ) ಮುಸ್ಲಿಂ ಬಾಂದವರಿಗೆ ಜಕಾತ್‌ನ್ನೂ ಕಡ್ಡಾಯಗೋಳಿಸಿದ್ದಾನೆ. ಶ್ರೀಮಂತರು ತಮ್ಮ ಆದಾಯದಲ್ಲಿ ಪ್ರತಿವರ್ಷ ೨.೫% ರಷ್ಟು ಸಂಪತ್ತನ್ನು ಬಡವರಿಗೆ ದಾನ ಮಾಡಿ ಅವರ ಬಡತನ ದೊರಮಾಡಲು ಇದು ಅತ್ಯಂತ ಪರಿಣಾಮಕಾರಿಯಾದ ಇಸ್ಲಾಂ ದರ್ಮದ ಕಡ್ಡಾಯವಾದ ನಿಯಮವಾಗಿದೆ. ಇದರಿಂದ ಸಮಾಜದಲ್ಲಿ ಶ್ರೀಮಂತ ಬಡವರೆಂಬ ಬೇದಬಾವ ದೊರವಾಗಿ ಸೌಹಾರ್ದತೆ ಹಾಗೂ ಸಮಾನತೆ ಸಾರುವ ಮಹಾನ್ ಪವಿತ್ರ ತಿಂಗಳವಾಗಿದೆ. ಬಡವರಿಗೆ ಉತ್ತಮಗುಣಮಟ್ಟದ ದವಸದಾನ್ಯ ಹೊಸ ಬಟ್ಟೆಗಳನ್ನು ಫಿತ್ರಾದ ಅನ್ವಯ ನೀಡುವುದು ರಂಜಾನ್ ಆಚರಣೆಯ ವಿಶೇಷತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆ.ಎಮ್.ಎಫ್ ಅಧ್ಯಕ್ಷರಾದ ವೆಂಕನಗೌಡ್ರು, ಅಮ್ಜದ್ ಪಟೇಲ್, ಓಜನಹಳ್ಳಿ ಗ್ರಾ.ಪಂ ಅದ್ಯಕ್ಷರಾದ ಯಮನೂರಪ್ಪ ನಾಯಕ್, ಸಮಾಜದ ಮುಖಂಡರಾದ ಬಾಷುಸಾಬ್ ಕತೀಬ್, ಮೇಹಬುಬ ಮಚ್ಚಿ, ಮಾನ್ವಿ ಪಾಷಾ, ಹುಸೇನ್ ಪೀರಾ ಚಿಕನ್, ಗೌಸ್ ಸಾಬ್ ಸರದಾರ, ಇಬ್ರಾಹಿಂ ಸಾಬ್ ಅಡ್ಡೇವಾಲಿ, ರೇಹಮತ್ ಹುಸ್ಸೇನಿ, ಶಿವಕುಮಾರ ಚಳ್ಳಳ್ಳಿ, ಶಿವಾನಂದ ಹೂದ್ಲೂರು, ಗುರುರಾಜ ಹಲಗೇರಿ, ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Advertisement

0 comments:

Post a Comment

 
Top