PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ:೦೫ ಮುದ್ದಾಬಳ್ಳಿ ಗ್ರಾಮದಲ್ಲಿ ನರ್ಬಾಡ ಯೋಜನೆ ಅಡಿಯಲ್ಲಿ ರೂ ೨೫ ಲಕ್ಷದ ಡಾಂಬರ ರಸ್ತೆಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಕೊಪ್ಪಳ ಕ್ಷೇತ್ರ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಕ್ಷೇತ್ರ ಸಮಗ್ರ ಅಭಿವೃದ್ದಿಗೆ ಪ್ರಮಾಣಿಕವಾಗಿ ಶ್ರಮಿಸಿ ಕ್ಷೇತ್ರದ ಪ್ರತಿ ಗ್ರಾಮಗಳ ಸರ್ವಾಂಗಿಣ ಅಭಿವೃದ್ದಿಗೆ ಹಂತ ಹಂತವಾಗಿ ಯೋಜನೆಗಳನ್ನು ರೂಪಿಸಿ ಚುನಾವಣೆಯ ಸಮಯದಲ್ಲಿ ಜನರಿಗೆ ನಾನು ನೀಡಿದ ಆಶ್ವಾಸನೆಗಳಂತೆ ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರುತ್ತಾ ನನ್ನ ಆಶ್ವಾಸನೆಯನ್ನು ಈಡೇರಿಸುತ್ತೆನೆ.ರಾಜ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮನವರು ಗ್ರಾಮ ವಿಕಸನ ಯೋಜನೆ ಅಡಿಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದು ,ಇದು ಅಭಿವೃದ್ದಿಗೆ ಪೂರಕವಾಗಿದೆ.ನನ್ನ ಕನಸಿನ ಯೋಜನೆಗಳಾದ ಅಳವಂಡಿ-ಬೇಟಗೇರಿ ಹಾಗೂ ಬಹದ್ದೂರಬಂಡಿಯ ನವಲ್ಲಕಲ್ ಏತ ನೀರಾವರಿ ಯೋಜನೆಗಳನ್ನು ಬೆಳಗಾವಿಯ ಅದಿವೇಶನದಲ್ಲಿಯೇ ಅನುಷ್ಟಾನಗೊಳಿಸಿ ಶೀಘ್ರವೇ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಭೂಮಿ ಪ್ರಜೆಯನ್ನು ನೇರೆವೆರಿಸಲಾಗುವುದು.ಅಭಿವೃದ್ದಿಯ ಕಾರ್ಯಗಳಿಗೆ ಸರ್ವವರು ಕೈಜೋಡಿಸಬೇಕು ಅಂದಾಗ ಮಾತ್ರ ಕ್ಷೇತ್ರದ ಸರ್ವಾಂಗಿಣವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ.ಅಲ್ಲದೆ ಗೊಂಡಬಾಳ ಗ್ರಾಮದ ಶಾಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ರೈತರ ಬೇಡಿಕೆಯಾದ ವಿದ್ಯುತ್ ಸಮಸ್ಯೆಯ ಕುರಿತಾಗಿ ಇಂಧನ ಸಚಿವರಾದ ಡಿ.ಕೆ.ಶಿವಕುಮಾರವರ ಜೊತೆಯಲ್ಲಿ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಸುವಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಎಸ್.ಬಿ.ನಾಗರಹಳ್ಳಿ,ಪಕ್ಷಕ ಮುಖಂಡರಾದ ಗುಳಪ್ಪ ಹಲಗೇರಿ,ಜಡಿಯಪ್ಪ ಬಂಗಾಳಿ,ಸುರೇಶ ಮಾದಿನೂರ,ಗ್ರಾಮ ಪಂಚಾಯತ ಅಧ್ಯಕ್ಷರುಗಳಾದ ಶಂಕ್ರಪ್ಪ ಚಳಗೇರಿ,ಹನುಮಪ್ಪ ಚುಕನಕಲ್ಲ್,ಶಿವಾನಂದ ಹೊದ್ಲೂರ್,ನಿಂಗಜ್ಜ ಜಾಗೀರದಾರ,ಪ್ರಧಾನಪ್ಪ ಪಾಂಡೆ,ಈಶಪ್ಪ ಹಲಗೇರಿ,ಮಂಜುನಾಥ ಬನ್ನಿಗೊಳ,ವಾಸಪ್ಪ ಮುದ್ದಿ ಗ್ರಾಮ ಪಂಚಾತಿಯ ಅಭಿವೃದ್ದಿ ಅಧಿಕಾರಿಗಳು,ಕಾರ್ಯದರ್ಶಿಗಳು ಹಾಗೂ ಗುತ್ತಿಗೆದಾರರು ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Advertisement

0 comments:

Post a Comment

 
Top