ಕೊಪ್ಪಳ, ಜು. ೦೫ - ಸಮೀಪದ ಭಾಗ್ಯನಗರ ಗ್ರಾಮದಲ್ಲಿ ಶುಕ್ರವಾರ ಸಂಜೆ ಸ್ವರಸೌರಭ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಹಾಗೂ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಭಾಗ್ಯನಗರ ಇವರ ಸಹಯೋಗದಲ್ಲಿ ೨ ನೇ ಸ್ವರಸೌರಭ ಸಂಗೀತ ಸಂಜೆ ಕಾರ್ಯಕ್ರಮ ನೇವೇರಿಸಲಾಯಿತು.ಕಾರ್ಯಕ್ರಮ ಉದ್ಘಾಟನೆ ನೇರವೇರಿಸಿದ ಜಿ.ಎಮ್. ಭೂಸನೂರುಮಠ ಮಾತನಾಡಿ, ಸಂಗೀತ ಬೆಳೆಸುವ ಕಾರ್ಯವಾಗಬೇಕಾಗಿದೆ, ಅದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ. ಎಲ್ಲರಿಗೂ ಸಂಗೀತದ ಅಬಿರುಚಿಯನ್ನು ಉಣಬಡಿಸಿದರೇ, ಸಂಗೀತದ ಓಲವನ್ನು ವೃದ್ಧಿಸಬಹುದು. ಇದಕ್ಕೆ ಸಮಾಜದ ಸಹಾಯ ಸಹಕಾರ ಬಹಳ ಮುಖ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವರಾಮ ಮ್ಯಾಗಳಮನಿ ವಹಿಸಿದ್ದರು. ಮುಖ್ಯ ಅತಿಥಿ ಸದಾಶಿವ ಪಾಟೀಲ್ ಮತ್ತು ಅತಿಥಿಗಳಾಗಿ ಎಂ.ಎ. ವಂದಾಲ್ ಬಾಗವಹಿಸಿದ್ದರು. ಕುಮಾರಿ ಲಕ್ಷ್ಮೀ ಕುರಿ ಪ್ರಾರ್ಥನೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು.ಕಾರ್ಯಕ್ರಮದಲ್ಲಿ ಸಮರ್ಥ ಬಿ. ದೇಸಾಯಿ ಗಿಟಾರ್ ವಾದನವನ್ನು ಹಿಂದೂಸ್ಥಾನಿ ಸಂಗೀತದಲ್ಲಿ ಬಳಸಿದ್ದು ವಿಶೇಷವಾಗಿತ್ತು. ಅತ್ಯದ್ಭೂತವಾದ ವಾದನ ಶೈಲಿಯಿಂದ ಅವರು ನೇರೆದ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿದರು. ಕಿಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ತಬಾಲಾ ಸಾತಿಯಲ್ಲಿ ಮಾರುತಿ ಬಿನ್ನಾಳ ಹಾಗೂ ರಾಘವೇಂದ್ರ ಗಂಗಾವತಿ ಮತ್ತು ಕಾರ್ಯಕ್ರಮ ನಿರೂಪಣೆಯಲ್ಲಿ ಸತ್ಯನಾರಾಯಣ
ಅಕ್ಕಸಾಲಿಯವರು ಭಾಗವಹಿಸಿದ್ದರೆಂದು ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಶ್ಯಾವಿ ತಿಳಿಸಿದ್ದಾರೆ.
Home
»
Koppal News
»
koppal organisations
» ೨ ನೇ ಸ್ವರಸೌರಭ ಸಂಗೀತ ಸಂಜೆ ಕಾರ್ಯಕ್ರಮ ಮನಸೂರೆಗೊಂಡ ಗಿಟಾರ್ ವಾದನ.
Subscribe to:
Post Comments (Atom)
0 comments:
Post a Comment