PLEASE LOGIN TO KANNADANET.COM FOR REGULAR NEWS-UPDATES



ತಡರಾತ್ರಿ ಪೊಲೀಸ್ ಬಂದೋಬಸ್ತಿನಲ್ಲಿ ನಗರದ ಹೃದಯ ಭಾಗದಲ್ಲಿರುವ  ಎರಡು ಕಮಾನುಗಳನ್ನು ತೆರವುಗೊಳಿಸಲಾಯಿತುಈ ಕಮಾನುಗಳನ್ನು ತೆರವುಗೊಳಿಸಲು ಎರಡು ಸಲ ನಗರಸಭೆಯಲ್ಲಿ ರೆಸಲೂಷನ್ ಪಾಸ್  ಮಾಡಲಾಗಿತ್ತು. ಅಲ್ಲದೇ ಜಿಲ್ಲಾಧಿಕಾರಿಗಳು ಸಹ  ಈ ಕಮಾನುಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರು. ಈ ಕಮಾನುಗಳಿಗೆ ನೂರಾರು ವರ್ಷಗಳ  ಇತಿಹಾಸವಿದ್ದು ಅವು ನಮ್ಮ ಕೊಪ್ಪಳದ ಅಸ್ಮೀತತೆಯ ಪ್ರಶ್ನೆಯಾಗಿದೆ. ನಮ್ಮ ಕೊಪ್ಪಳದ ಐತಿಹಾಸಿಕತೆಯನ್ನು ಬಿಂಬಿಸುವ  ಈ ಕಮಾನುಗಳನ್ನು ತೆರವುಗೊಳಿಸಬಾರದು ಎಂದು ಸಾಹಿತಿಗಳು, ಪ್ರಗತಿಪರರು ಆಗ್ರಹಿಸಿದ್ದರು.
             ಈ ಭಾಗದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತೆ ಮತ್ತು ದೊಡ್ಡ ವಾಹನಗಳು ಸಂಚರಿಸಲಾಗುತ್ತಿಲ್ಲ. ಅಲ್ಲದೇ ಕಮಾನುಗಳು ಶಿಥಿಲಗೊಂಡಿವೆ ಎಂದು ಕಾರಣ ನೀಡಿ  ಇವುಗಳನ್ನು ತೆರವುಗೊಳಿಸಲಾಗಿದೆ. ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಮಾಡಿದ್ದಕ್ಕೆ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಮುಕ್ತವಾಗಿ ಬೆಳಗಿನ ಸಮಯದಲ್ಲಿ ಮಾಡಬಹುದಿತ್ತು. ಯಾರಿಗೂ ಸೂಚನೆ ನೀಡದೇ ಏಕಾ ಏಕಿ ಈ ರೀತಿ ಮಾಡುವುದೇಕೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

0 comments:

Post a Comment

 
Top