PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜು.೨೧ ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಟೀಚರ್‍ಸ್ ಕಾಲೋನಿಯಲ್ಲಿ ಮಕ್ಕಳಿಗಾಗಿ ತೆರೆದ ಆಶ್ರಯಕೇಂದ್ರ ಜು.೨೦ ರಂದು ಕಾಣೆಯಾಗಿರುವ ಹನುಮಂತಪ್ಪ ಸೋಮಶೇಖರಪ್ಪ ಭಜಂತ್ರಿ (೧೪) ಹಾಗೂ ಶಿವುಕುಮಾರ (೧೩) ಮಕ್ಕಳ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ಪಿ.ಎಸ್.ಐ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
 ಭಾಗ್ಯನಗರದಲ್ಲಿ ಮಕ್ಕಳಿಗಾಗಿ ತೆರೆದ ತಂಗುದಾಣ ಕೇಂದ್ರಕ್ಕೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಆದೇಶದ ಮೇರೆಗೆ ೨೦೧೫ ರ ಜು.೧೦ ರಂದು ಹನುಮಂತಪ್ಪ  ತಂದೆ ಸೋಮಶೇಖರಪ್ಪ ಭಜಂತ್ರಿ (೧೪) ಸಾ||ಬಿಸರಳ್ಳಿ ಹಾಗೂ ಜು.೧೬ ರಂದು ಶಿವುಕುಮಾರ ತಾಯಿ ರತ್ನವೇಣಿ (೧೩) ಸಾ||ಹರಪನಹಳ್ಳಿ, ಜಿ||ದಾವಣಗೆರೆ ಎಂಬ ಮಕ್ಕಳನ್ನು ದಾಖಲಿಸಿಕೊಳ್ಳಲಾಗಿತ್ತು. ಆದರೆ, ಈ ಇಬ್ಬರು ಬಾಲಕರು ಜು.೨೦ ರಂದು ಬೆಳಿಗ್ಗೆ ೦೬ ಗಂಟೆಯಿಂದ ಕಾಣೆಯಾಗಿದ್ದಾರೆ.
ಕಾಣೆಯಾದ ಬಾಲಕರ ವಿವರ ಇಂತಿದೆ. ೦೧.ಹನುಮಂತಪ್ಪ  ತಂದೆ ಸೋಮಶೇಖರಪ್ಪ ಭಜಂತ್ರಿ, ಸಾ||ಬಿಸರಳ್ಳಿ, ವಯಸ್ಸು-೧೪, ಎತ್ತರ-೦೪ ಫೀಟು ೦೬ ಇಂಚು, ಸಾಧಾರಣ ಮೈಕಟ್ಟು, ದುಂಡು ಮುಖ, ಸಾದಾಗಪ್ಪು ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದಾನೆ. ಬಹಿರ್ದೆಸೆಗೆ ಹೋಗುವಾಗ ಕೆಂಪು ಕಪ್ಪು ಮಿಶ್ರಿತ ಬಿಳಿ ಶರ್ಟು, ಖಾಕಿ ಪ್ಯಾಂಟು ಧರಿಸಿದ್ದು,  ಕನ್ನಡ, ತೆಲುಗು, ಹಿಂದಿ ಭಾಷೆ ಮಾತನಾಡುತ್ತಾನೆ.
      ಶಿವುಕುಮಾರ ತಾಯಿ ರತ್ನವೇಣಿ, ಸಾ||ಹರಪನಹಳ್ಳಿ, ಜಿ||ದಾವಣಗೆರೆ, ವಯಸ್ಸು-೧೩, ಎತ್ತರ-೦೪ ಫೀಟ್, ತಳ್ಳನೆಯ ಮೈಕಟ್ಟು, ಕೋಲು ಮುಖ, ಗೋದಿಗೆಂಪು ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದಾನೆ. ಬಹಿರ್ದೆಸೆಗೆ ಹೋಗುವಾಗ ಹಳದಿ ಟೀ-ಶರ್ಟ್, ಖಾಕಿ ಆಫ್ ಪ್ಯಾಂಟ್ ಧರಿಸಿದ್ದು, ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾನೆ.
     ಈ ಚಹರೆಯುಳ್ಳ ಬಾಲಕರು ಬಗ್ಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಂಡಲ್ಲಿ ಅಥವಾ ಬಾಲಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ನಗರ ಪೊಲೀಸ್ ಠಾಣೆ, ಕೊಪ್ಪಳ, ದೂರವಾಣಿ: ೦೮೫೩೯-೨೨೦೩೩೩, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ, ಮೊಬೈಲ್: ೯೪೮೦೮೦೩೭೪೫, ಕೊಪ್ಪಳ ಕಂಟ್ರೋಲ್ ರೂಂ: ೦೮೫೩೯-೨೩೦೧೦೦, ೨೩೦೨೨೨ ಇವರನ್ನು ಸಂಪರ್ಕಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ಪಿ.ಎಸ್.ಐ ಕೋರಿದ್ದಾರೆ.

Advertisement

0 comments:

Post a Comment

 
Top