PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜು.೨೦  ಕಾನೂನು ಮಾಪನಶಾಸ್ತ್ರ ಇಲಾಖೆ ಹುಬ್ಬಳ್ಳಿಯ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಸಂಚಾರಿ ದಳ-೦೩ ಇವರಿಂದ ಬೆಳಗಾವಿ ಹಾಗೂ ಗುಲ್ಬರ್ಗಾ ವಿಭಾಗದ ವ್ಯಾಪ್ತಿಯಲ್ಲಿ ವಿವಿದೆಡೆ ದಾಳಿ ನಡೆಸಿ, ಜೂನ್-೨೦೧೫ ರ ತ್ರೈಮಾಸಿಕ ಅಂತ್ಯದವರೆಗೆ ಒಟ್ಟು ೬,೬೧,೦೦೦ ರೂ. ದಂಡ (ಅಭಿಸಂಧಾನ ಶುಲ್ಕ) ವಸೂಲು ಮಾಡಲಾಗಿದೆ.
     ಜೂನ್-೨೦೧೫ ರ ತ್ರೈಮಾಸಿಕ ಅಂತ್ಯದವರೆಗೆ ಬೆಳಗಾವಿ ಹಾಗೂ ಗುಲ್ಬರ್ಗಾ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು ೪೬೧ ಅಂಗಡಿ ಮತ್ತು ಸಂಸ್ಥೆಗಳನ್ನು ತಪಾಸಣೆ ಮಾಡಲಾಗಿದ್ದು, ಒಟ್ಟು ೬೨ ತೂಕ, ಅಳತೆ ಹಾಗೂ ೨೮ ಪೊಟ್ಟಣ ಸಾಮಗ್ರಿ ಕಾಯ್ದೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ ಈ ಪ್ರಕರಣಗಳಿಂದ ಒಟ್ಟು ೬,೬೧,೦೦೦ ರೂ. ದಂಡ (ಅಭಿಸಂಧಾನ ಶುಲ್ಕ) ವಸೂಲು ಮಾಡಲಾಗಿದೆ ಎಂದು ಸಂಚಾರಿ ದಳ-೦೩, ಹುಬ್ಬಳ್ಳಿ ಕಛೇರಿಯ ಸಹಾಯಕ ನಿಯಂತ್ರಕ ಮಧುಕರ ಆರ್.ಘೋಡಕೆ ತಿಳಿಸಿದ್ದಾರೆ.

Advertisement

0 comments:

Post a Comment

 
Top