PLEASE LOGIN TO KANNADANET.COM FOR REGULAR NEWS-UPDATES


ಮಕ್ಕಳು ರಾಷ್ಟ್ರದ ಸಂಪತ್ತು ಅವರಿಗೆ ಉತ್ತಮ ಪರಿಸರ ಜೊತೆಗೆ ಒಳ್ಳೆಯ ಶಿಕ್ಷಣ ನೀಡುವ ಜವಬ್ದಾರಿ ಹಿರಿಯರ ಮೇಲಿದೆ ಮಕ್ಕಳಿಗೆ ಉತ್ತಮವಾದ ಸಂಸ್ಕೃತಿಯ ಬೀಜ ಬಿತ್ತಿದೆಯಾದರೆ ನಮ್ಮ ಭಾರತ ದೇಶ ಸುಭಿಕ್ಷೆಯಾದ ಮತ್ತು ಸಂಪತ ಭರಿತ ರಾಷ್ಟ್ರವಾಗಲಿಕ್ಕೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದುಪುಡಿಯವರು ಹೇಳಿದರು. ಅವರು ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದಲ್ಲಿ ಆಯೋಜಿಸಿದ ಹಿರೇಸಿಂದೋಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಿದ್ದರು. ಸದೃಢವಾದ ಆರೋಗ್ಯ ಪಡೆಯಲು ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಬೇಕು ಮತ್ತು ಮಕ್ಕಳಿಗೆ ಪೂರಕವಾಗಿ ಪರಿಸರ ಬಗ್ಗೆ ಕಾಳಜಿ ಇರಬೇಕು. ಏನಾದರೂ ಸಾಧಿಸಬಲ್ಲೆ ಎನ್ನುವಂತಹ ಆತ್ಮ ಸ್ಥೈರ್ಯ ತುಂಬಬೇಕು ಎನ್ನುತ್ತಾ ಮನೆಗೊಂದು ಸಸಿ ನೆಟ್ಟು, ಮನೆಗೊಂದು ಶೌಚಾಲಯ ನಿರ್ಮಿಸಿ ಆರೋಗ್ಯವಂತರಾಗಿರಲು ತಿಳಿಸಿದರು. ನಂತರ ತಾಲೂಕ ಪಂಚಾಯತ ಸದಸ್ಯ ಮುದೇಗೌಡ ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಹವ್ಯಾಸ ಬೆಳೆಸಿಕೊಳ್ಳುವುದರ ಮೂಲಕ ಕ್ರಿಯಾಶೀಲರಾದರೆ ಮನಸ್ಸು ಏಕಾಗ್ರತೆಯಿಂದ ಇರುತ್ತದೆ. ಆದ್ದರಿಂದ ದೇಶಿಯ ಆಟಗಳಾದ ಕಬ್ಬಡ್ಡಿ, ಖೋ-ಖೋ, ಹಾಕಿ, ವಾಲಿಬಾಲ್, ಕುಸ್ತಿ, ಜನಪದ ಕ್ರೀಡೆಗಳನ್ನು ಉಳಿಸುವ ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಮಲ್ಲಮ್ಮ ಮಹಾಂತಪ್ಪನವರ ವಹಿಸಿದ್ದರು. ಕ್ರೀಡಾ ಜ್ಯೋತಿ ಉದ್ಘಾಟನೆಯನ್ನು ಗ್ರಾಮದ ಹಿರಿಯ ತೋಟನಗೌಡ ಪಾಟೀಲ್ ನೆರವೇರಿಸಿದರು. ಕ್ರೀಡಾ ಧ್ವಜಾರೋಹಣವನ್ನು ಜಿಲ್ಲಾ ಪಂಚಾಯತ ಸದಸ್ಯೆ ಭಾಗಿರಥಿ ಶಂಕರಗೌಡ ಪಾಟೀಲ್ ನೆರವೇರಿಸಿದರು. ಕ್ರೀಡಾ ಪ್ರತಿಜ್ಞಾ ವಿಧಿಯನ್ನು ದೈಹಿಕ ಶಿಕ್ಷಕಿ ಅನ್ನಪೂರ್ಣ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕಾತರಕಿ ಗುಡ್ಲಾನೂರ ಗ್ರಾ.ಪಂ. ಉಪಾಧ್ಯಕ್ಷ ಬಸವರಾಜ ಅಂಗಡಿ ಗ್ರಾ.ಪಂ. ಸದಸ್ಯರಾದ ಡಾ|| ಮಲ್ಲಿಕಾರ್ಜುನ ವೈಧ್ಯ, ನಸೀಮಾ ಬೇಗಂ, ಈರಮ್ಮ ಗುಡ್ಲಾನೂರ, ರೇಖಾ ರಾಮಪ್ಪ ಗುಡ್ಲಾನೂರ, ಸಿದ್ದಪ್ಪ ಹರಿಜನ, ಸಿದ್ದರಡ್ಡಿ ದುರ್ಗದ, ಕೋಟ್ರಯ್ಯ ಹಿರೇಮಠ, ಭರಮಪ್ಪ ಹುರಿಜೋಳ, ಎಸ್.ಡಿ.ಎಮ್.ಸಿ ಅಧ್ಯಕ್ಷ ಯಂಕಣ್ಣ ಚೆಲ್ಲಾ, ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಅಶೋಕ ಬಗಾಡೆ, ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಸುರೇಶ ಅರಿಕೇರಿ, ಗ್ರಾಮದ ಹಿರಿಯರಾದ ರಾಮಣ್ಣ ಚೆಲ್ಲಾ, ಚೆನ್ನಬಸಯ್ಯ ಹಿರೇಮಠ, ಮುತ್ತಪ್ಪ ಶ್ಯಾವಿ, ನಿಜಾಂ ಸಾಬ್ ಮುದಗಲ್, ಪರಸಪ್ಪ ನಡಗುರ್ತಿ, ಮಲ್ಲಪ್ಪ ಗುಡ್ಲಾನೂರ, ದಾವಲ್ ಸಾಬ್ ಮುಲ್ಲಾ, ಇತರರು ವೇದಿಕೆ ಮೇಲೆ ಇದ್ದರು. ರಾಮಪ್ಪ ಗುಡ್ಲಾನೂರ ನಿರೂಪಿಸಿದರೆ, ಶಾಲಾ ಮುಖ್ಯೋಪಾಧ್ಯಾಯನಿ ಮೀನಾಕ್ಷಿ ಸ್ವಾಗತಿಸಿದರು. ಶಿಕ್ಷಕ ನೀಲಕಂಠಪ್ಪ ವಂದಿಸಿದರು.

Advertisement

0 comments:

Post a Comment

 
Top