ಕೇಂದ್ರ ಕೃಷಿ ಸಚಿವ ರಾಧಾಮೋಹನಸಿಂಗ್ ಮೇಲ್ಮನೆಯಲ್ಲಿ ತಮ್ಮ ಲಿಖಿತ ಹೇಳಿಕೆಯಲ್ಲಿ ರೈತರ ಆತ್ಮಹತ್ಯೆಗೆ ಡ್ರಗ್ಸ್, ನಪುಂಸಕತ್ವ, ಪ್ರೇಮವೈಫಲ್ಯ ಕಾರಣವೆಂದು ಹೇಳಿರುವುದು ಮೋದಿ ಸರಕಾರ ಭಾರತದ ರೈತರ ಬಗ್ಗೆ ಇಟ್ಟುಕೊಂಡಿರುವ ನಿಲುವು ಗೊತ್ತಾಗುತ್ತದೆ. ಇದು ಶೂದ್ರರ ಶ್ರಮದಿಂದ ಬದುಕುತ್ತಿರುವ ಮನುವಾದಿಗಳ ಹೇಳಿಕೆಯಾಗಿದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೃಷಿ ಸಚಿವ ರಾಧಾ ಮೋಹನಸಿಂಗ್‌ರವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು. ಕೃಷಿ ಸಚಿವರ ಹೇಳಿಕೆಗೆ ಪ್ರಧಾನಮಂತ್ರಿ ಮೋದಿಯವರು ಭಾರತದ ರೈತರಲ್ಲಿ ಕ್ಷಮೆಯಾಚಿಸಬೇಕೆಂದಿದ್ದಾರೆ. ಕರ್ನಾಟಕ ರಾಜ್ಯ ಬಿಜೆಪಿ ಘಟಕ ರೈತರ ಆತ್ಮಹತ್ಯೆ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ರೈತರಿಗೆ ನ್ಯಾಯ ಕೊಡಬೇಕೆಂದಿದ್ದರೆ ಕೂಡಲೇ ಕರ್ನಾಟಕ ರಾಜ್ಯ ರೈತ ಮೋರ್ಚಾವನ್ನು ರದ್ದು ಮಾಡಲಿ ಮನುವಾದಿಗಳ ಸಂಘಟನೆಯಾದ ಕಿಸಾನ್ ಮೋರ್ಚಾವನ್ನು ಮುಂದುವರೆಸಿಕೊಂಡು ತಮ್ಮ ರೈತ ವಿರೋಧಿ ಎತ್ತಿ ತೋರಿಸಲಿ.ಕರ್ನಾಟಕದ ರೈತರು, ರೈತರ ಆತ್ಮಹತ್ಯೆಗಳಿಗೆ ಸ್ವಾಂತನ ಹೇಳಲು ಬರಲಿರುವ ಬಿಜೆಪಿ ಮುಖಂಡರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡಿ ರೈತರ ಘನತೆ, ಗೌರವ ಮತ್ತು ಸ್ವಾಭಿಮಾನ ಕಾಪಾಡಬೇಕೆಂದು ಸಿಪಿಐಎಂಎಲ್ ರೈತರಲ್ಲಿ ಮನವಿ ಮಾಡಿದೆ.
Home
»
Koppal News
»
koppal organisations
»
news
» ಕೃಷಿ ಸಚಿವ ರಾಧಾ ಮೋಹನಸಿಂಗ್ ರೈತರ ಬಗ್ಗೆ ಅವಮಾನಕರ ಹೇಳಿಕೆ ಖಂಡನೆ ಸಿಪಿಐಎಂಎಲ್.
Subscribe to:
Post Comments (Atom)
0 comments:
Post a Comment