ಕೊಪ್ಪಳ- ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ಕಾಳಜಿ ಮತ್ತು ಜಾಗೃತಿಯನ್ನುಂಟು ಮಾಡುವ ಉದ್ಧೇಶದಿಂದ 'ಹಸಿರು ದಿನ' ಆಚರಣೆ (ಗ್ರೀನ್ ಡೇ ಸೆಲೆಬ್ರೇಶನ್) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಮಕ್ಕಳು ಸಮೃದ್ಧಿ ಮತ್ತು ಪರಿಸರದ ಸಂಕೇತವಾಗಿರುವ ಹಸಿರು ಬಣ್ಣದ ಆಕರ್ಷಕ ಬಟ್ಟೆಗಳನ್ನು ಧರಿಸಿ ಆಗಮಿಸಿದ್ದರು. ಹಸಿರು ತರಕಾರಿ, ಹೂವು, ಹಣ್ಣುಗಳನ್ನು ಉಡುಗೆ ಮಾಡಿಕೊಂಡು ಬಂದ ನಾಲ್ಕು ಮಕ್ಕಳು ಗಮನ ಸೆಳೆದರು. ೧೮೦ ಕ್ಕೂ ಹೆಚ್ಚು ಮಕ್ಕಳು ಪರಿಸರ ಸಂರಕ್ಷಣೆ ಕುರಿತಾದ ಘೋಷಣೆಗಳನ್ನು ಕೂಗುತ್ತ, ಹಸಿರು ಉಡುಪಿನಲ್ಲಿ ಕಂಗೊಳಿಸಿದರು. ಪ್ರಾಚಾರ್ಯ ಎ. ಧನಂಜಯನ್, ಹಿರಿಯ ಶಿಕ್ಷಕ ಎಸ್.ಸಿ. ಹಿರೇಮಠ ಮತ್ತು ಕೆ.ಜಿ. ವಿಭಾಗದ ಶಿಕ್ಷಕಿಯರು, ಪಾಲಕರು ಉಪಸ್ಥಿತರಿದ್ದರು.
Subscribe to:
Post Comments (Atom)

0 comments:
Post a Comment