ಗುರಿ ದೊಡ್ಡದಿದ್ದಾಗ ಸತತ ಪರಿಶ್ರಮ ನಿರಂತರವಾಗಿರಲಿ ಅಂದಾಗ ಮಾತ್ರ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ, ನಾವು ಅಲ್ಪ ತೃಪ್ತರಾಗುವುದು ಬೇಡ, ಎಸ್.ಎಸ್.ಎಲ್.ಸಿ, ಮತ್ತು ಪಿ.ಯು.ಸಿ. ನಂತರ ಸ್ಪರ್ಧಾತಕ ಯುಗದಲ್ಲಿ ಮುಂದೆ ಬರಲು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕೊಡುವುದರ ಮೂಲಕ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುವಂತಾಗಲಿ ಎಂದು ಬಿ.ಕಲ್ಲೇಶ ಹೆಳೀದರು, ಕುಷ್ಷಗಿ ರಸ್ತೆಯಲ್ಲಿರುವ ಗಾಣಿಗ ಸಮುದಾಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಕೊಪ್ಪಳ ಜಿಲ್ಲಾ ಗಾಣಿಗ ನೌಕರರ ಸಂಘದ ಚಾಲನೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾರ್ಥಿಗಳನ್ನು ಉದ್ದೇಸಿ ಮಾತನಾಡಿದರು,.
ಗಾಣಿಗ ನೌಕರರ ಸಂಘದವತಿಯಿಂದ ಪ್ರಥಮ ಬಾರಿಗೆ ಕೊಪ್ಪಳ ತಾಲುಕಿನಲ್ಲಿ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೨೦೧೪-೧೫ ರ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಮತ್ತು ಪಿ.ಯು.ಸಿ ದ್ವಿತೀಯ ಪರೀಕ್ಷೆಯಲ್ಲಿ ಕೊಪ್ಪಳ ತಾಲೂಕನಲ್ಲಿ ಅತಿ ಹೆಚ್ಚು ಅಂಕ ಪಡೆದ ಗಾಣಿಗ ಸಮಾಜದ ತಲಾ ಒಬ್ಬ ಬಾಕ ಮತ್ತು ಬಾಲಕಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌವರಿಸಲಾಯಿತು. ಸನ್ಮಾನಿತ ಪ್ರತಿಭಾವಂತ ವಿದ್ಯಾರ್ಥಿಗಳಾದ ಎಸ್.ಎಸ್.ಎಲ್.ಸಿ, ಪರೀಕ್ಷೆಯಲ್ಲಿ ಶಶಿಧರ ಜಿ. ಅಮಾತಿ ಸಾ: ವದಗನಾಳ ೯೧%, ಕುಸುಮಾ ಪೋಲಿಸಪಾಟೀಲ್ ಸಾ; ಯಲಮಗೇರಿ ೮೫.೭೬%, ಪಿ.ಯು.ಸಿ ದ್ವಿತೀಯ ಪರೀಕ್ಷೆಯ ಕಲಾ ವಿಭಾಗದಲ್ಲಿ- ಯಮನೂರಪ್ಪ ಸಿ. ಬಾಲನಗೌಡ್ರ ಸಾ: ಯಲಮಗೇರಿ ೭೧.೮೬%, ನೀಲಮ್ಮ ಸುರೇಶ ಕಾಮನೂರ ಸಾ: ಹ್ಯಾಟಿ ೮೪%, ವಾಣಿಜ್ಯ ವಿಭಾಗದಲ್ಲಿ - ಗಂಗನಗೌಡ ಎಸ್. ಹಿರೇಗೌಡ್ರ ಸಾ: ಯಲಮಗೇರಿ ೮೦.೩೩%, ವಿಜ್ಞಾನ ವಿಭಾಗದಲ್ಲಿ- ಜಿ. ವೆಂಕಟೇಶ ಶರಣಪ್ಪಗೌಡ ಗೊಂದಿಹೊಸಳ್ಳಿ ಸಾ: ಹುಲಗಿ ೯೧.೧೬%, ಜಿ. ವಿಜಯ ಕುಮಾರ ಸಾ: ಹುಲಗಿ ೯೦.% ಸುಶ್ಮಿತಾ ಡಾ:ಬಸವರಾಜ ಪಿ.ಎಮ್. ಸಾ: ವದಗನಾಳ ೮೮.೮೩%, ಚೈತ್ರಾ ಬಸವರಾಜ ಸಜ್ಜನ ೮೯.೮%.
ಅಲ್ಲದೇ ರಾಜ್ಯಕ್ಕೆ ೬ನೇ ರ‍್ಯಾಂಕ ಪಡೆದು ಜಿಲ್ಲೆಗೆ ಕೀರ್ತಿತಂದ ಬೇವೊರಿನ ವಿದ್ಯಾರ್ಥಿಯಾದ ಶಿವಪ್ರಸಾದ ಯಮನಪ್ಪ ಬೊಮ್ಮನಾಳ ರನ್ನು ವಿಶೇಷವಾಗಿ ಸನ್ಮಾನ ಮಾಡಲಾಯಿತು.
ತದನಂತರ ಕೊಪ್ಪಳ ಜಿಲ್ಲಾ ಗಾಣಿಗ ನೌಕರರ ಸಂಘದ ಚಾಲನೆ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು, ಅಧ್ಯಕ್ಷರಾಗಿ ಬಿ.ಕಲ್ಲೇಶ, ಉಪಧ್ಯಕ್ಷರಾಗಿ ರಾಮನಗೌಡ ಬಾಲನಗೌಡ್ರ, ಹನುಮಂತಪ್ಪ ಕುರಬನಾಳ, ಚಿದಾನಂದ ಮೇಟಿ, ಅಶೋಕ ಸಿದ್ದಪ್ಪ ಗೌಡರ, ಪ್ರಧಾನ ಕಾರ್ಯದರ್ಶಿಯಾಗಿ ವೀರನಗೌಡ ಆರ್.ಎಸ್, ಸಹ ಕಾರ್ಯದರ್ಶಿಯಾಗಿ ನಿಂಗಪ್ಪ ಗುನ್ನಾಳ, ಸರೋಜಿನಿ ಸಜ್ಜನ್, ಖಜಾಂಚಿಯಾಗಿ ಬಸವರಾಜ ಪಾಟೀಲ್, ಸದಸ್ಯರಾಗಿ ಕೊಪ್ಪಳದ ಸತೀಶ ಬಿ.ಮುರಾಳ, ಮೈಲಾರಪ್ಪ ಕಬ್ಬಿಣದ್, ಬಸವರಾಜ ತಮ್ಮಣನವರ್, ಗಂಗಾವತಿಯ ಸಂಗಪ್ಪ ಗಾಜಿ, ಕೆ.ಬಸಪ್ಪ, ಶ್ರೀದೇವಿ ಕೃಷ್ಣಪ್ಪ, ಕುಷ್ಷಗಿಯ ಬಸವರಾಜ ಸಜ್ಜನ, ಬೀಮನಗೌಡ ಗೌಡ್ರ, ಶಿವಾನಂದ ಪಂಪಣ್ಣನ್ನವರ, ಯಲಬುರ್ಗಾದ ವಾಯ್.ಜಿ.ಪಾಟೀಲ್, ಚನ್ನಬಸಪ್ಪ ಬಳ್ಳಾರಿ, ಶರಣಗೌಡ ಪೋಲಿಸಪಾಟೀಲ್ ಮುಂತಾದವರು,
ಸಭಾ ಅಧ್ಯಕ್ಷತೆಯನ್ನು ಸಮಾಜದ ಹಿರಿಯ ಮುಖಂಡರಾದ ರುದ್ರಮುನಿ ಗಾಳಿ ವಹಿಸಿಕೊಂಡು ಸಮಾಜದ ಬಾಂದವರಿಗೆ ಸಭೆ ಸಮಾರಂಭಗಳಿಗೆ ಅನುಕುಲವಾಗಲೆಂದು ಪ್ರತಿಯೋಂದು ತಾಲುಕ ಮಟ್ಟದಲ್ಲಿ ಸಮಾಜದ ಸ್ವಂತ ಕಟ್ಟಡವನ್ನು ಹೊಂದಬೇಕು, ಸಣ್ಣ ವ್ಯಕ್ತಿ ದೊಡ್ದ ಕನಸನ್ನು ಕಾಣಬೇಕು-ವಿದ್ಯಾರ್ಥಿಗಳು ದೊಡ್ಡ ಗುರಿಯನ್ನು ಮುಟ್ಟಬೇಕಾದರೆ ಇಂತಹ ಸನ್ಮಾನಗಳು ವಿದ್ಯಾರ್ಥಿಗಳಲ್ಲಿ ಉತ್ತೇಜನ ನೀಡಲು ಅನುಕುಲವಾಗಬೇಕು ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಕೊಪ್ಪಳ ಜಿಲ್ಲಾ ಗಾಣಿಗ ನೌಕರರ ಸಂಘ ನೀಡುವಂತಾಗಬೇಕೆಂದರು.
ಅಥಿತಿಗಳಾಗಿ ತೋಟಪ್ಪ ಕಾಮನೂರ, ಸಂಗನಗೌಡ ಬಿ.ಟಿ.ಪಾಟೀಲ್, ಅಯ್ಯನಗೌಡ ಕೆಂಚಮ್ಮನವರ, ಶಿವು ಚರಾರಿ, ಮಲ್ಲನಗೌಡ ಕೋಣನಗೌಡ್ರ, ಡಾ: ಪಿ.ಎಮ್.ಬಸವರಾಜ, ಬಸವಂತಪ್ಪ ಕಂಪ್ಲಿ, ಗದಿಗೇಪ್ಪ ಅಮಾತಿ ಕೊಪ್ಪಳ, ಜಿ.ಕೊಟ್ಟೇಶ ಗಂಗಾವತಿ, ಬಸವರಾಜ ಸಜ್ಜನ ಕುಷ್ಷಗಿ, ನಿಂಗಪ್ಪ ಗೆದ್ದಿಗೇರಿ, ಎನ್.ಸಿ.ಗೌಡ್ರ, ಮಂಜುನಾಥ ಪಾಟೀಲ್, ಪ್ರಾಥನೆ ಕುಮಾರಿ ಸುಶ್ಮಿತಾ ಡಾ: ಬಸವರಾಜ ಪಿ.ಎಮ್ ಸ್ವಾಗತ ಗದಿಗೇಪ್ಪ ಅಮಾತಿ ಮಾಡಿದರೆ, ನಿರೂಪಣೆಯನ್ನು ಹುನುಮಂತರಾವ್ ವಕೀಲರು ಮಾಡಿದರು, ಕೊನೆಯಲ್ಲಿ ವಂದನಾರ್ಪಣೆಯನ್ನು ತೋಟಪ್ಪ ಕಾಮನೂರ ನೆರವೆರಿಸಿದರು.
0 comments:
Post a Comment