PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಜು.೩೧: ಜಿಲ್ಲೆಯಿಂದ ಈ ಬಾರಿ ಪವಿತ್ರ ಹಜ್ ಯಾತ್ರೆಗೆ ತೆರಳುವ ೫೫ ಹಜ್ ಶಿಬಿರಾರ್ಥಿಗಳಿಗೆ ಆ.೦೨ ರ ರವಿವಾರ ಬೆ.೧೦ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಜಿಲ್ಲೆಯ ಹಜ್ ಶಿಬಿರಾರ್ಥಿಗಳಿಗೆ ವಿಐಪಿ ಸೂಟ್‌ಕೆಸ್‌ಗಳ ವಿತರಣೆ ಸಮಾರಂಭ ಮ.೩.೦೦ ಗಂಟೆಗೆ ನಡೆಯಲಿದ್ದು, ಜಿಲ್ಲೆಯ ಗಂಗಾವತಿ ಶಾಸಕ ಹಾಗೂ ಸಮಾಜದ ಹಿರಿಯ ನಾಯಕ  ಇಕ್ಬಾಲ್ ಅನ್ಸಾರಿಯವರು ವಿತರಣೆ ಮಾಡುವರು. ಇದರ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ ಪಾಲ್ಗೊಳ್ಳುವರು.  ಶಿಬಿರದಲ್ಲಿ ಹಜ್ ಯಾತ್ರೆ ಶಿಬಿರಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಮಾನ್ವಿ ಪಟ್ಟಣದ ಅಲ್‌ಹಾಜ್ ಸಮೀವುದ್ದೀನ್ ಸಾಹೇಬರವರು ನೀಡಲಿದ್ದಾರೆ. ನಗರದ ಯೂಸುಫೀಯಾ ಮಸೀದಿಯ ಪೇಶ ಇಮಾಮ್ ಮುಫ್ತಿ ಮೌಲಾನಾ ಖತೀಬ್, ಮಹ್ಮದ್ ನಜೀರ್ ಅಹ್ಮದ್ ಖಾದ್ರಿ ವ ತಸ್ಕೀನಿರವರು ಪಾಲ್ಗೊಂಡು ವಿಶೇಷ ಮಾರ್ಗದರ್ಶನ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ವಕ್ಫ್ ಬೋರ್ಡ್ ಮಂಡಳಿ ಅಧ್ಯಕ್ಷ ಮಹ್ಮದ್ ಮುಸ್ತಪಾ  ಕಮಾಲ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ್ ಖಾದ್ರಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಹಿರಿಯ ನ್ಯಾಯವಾದಿ ಆಸೀಫ್ ಅಲಿ, ಸಯ್ಯದ್ ಫೌಂಡೇಶನ ಅಧ್ಯಕ್ಷ ಕೆ.ಎಂ.ಸಯ್ಯದ್, ಅಲ್‌ಹಾಜ್ ಮೇಹರಾಜ್ ಹುಸೇನಿ, ಲೆಕ್ಕಾಧಿಕಾರಿ ಅಲ್‌ಹಾಜ್ ಖಾಜಾ ಮೈನುದ್ದೀನ್ ಮತ್ತಿತರರು ಪಾಲ್ಗೊಳ್ಳುವರು ಎಂದು ತರಬೇತಿ ಸಂಯೋಜಕ ಹಾಗೂ ಕಾರ್ಯಕ್ರಮ ಸಂಘಟಕರಾದ ನಿವೃತ್ತ ಉಪತಹಶೀಲ್ದಾರ್ ಅಲ್‌ಹಾಜ್ ಲಾಯಖ್ ಅಲಿ ರವರು ಸರ್ವರನ್ನು ಸ್ವಾಗತಿಸಿದ್ದಾರೆ.

Advertisement

0 comments:

Post a Comment

 
Top